ಬೆಂಗಳೂರು: ಆಳಂದದ (Aland) ಲಾಡ್ಲೆ ಮಶಾಕ್ ದರ್ಗಾ (Ladle Mashak Dargah) ಗಲಾಟೆ ಪ್ರಕರಣ ವಾಪಸ್ ಪಡೆದ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಲು ಸೂಚಿಸಬೇಕು ಎಂದು ಬಿಜೆಪಿ (BJP) ನಿಯೋಗ ರಾಜ್ಯಪಾಲರಿಗೆ (Governer) ದೂರು ನೀಡಿದ್ದಾರೆ.
ಇಂದು (ಜೂ.2) ಮಧ್ಯಾಹ್ನ 1 ಗಂಟೆಗೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ (Chalavadi Narayanaswamy) ನೇತೃತ್ವದ ಬಿಜೆಪಿ ನಿಯೋಗವು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರನ್ನು ಭೇಟಿ ಮಾಡಿ, ದೂರು ಸಲ್ಲಿಸಿದ್ದಾರೆ. ಇದನ್ನೂ ಓದಿ: ಆಳಂದ ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಕೇಸ್ ವಾಪಸ್ ಪಡೆದ ʻಕೈʼ ಸರ್ಕಾರ
ಆಳಂದದ ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಪ್ರಕರಣವನ್ನು ಸರ್ಕಾರ ವಾಪಸ್ ಪಡೆದಿದೆ. ಈ ನಿರ್ಧಾರವನ್ನು ರದ್ದುಗೊಳಿಸಲು ಸೂಚಿಸುವಂತೆ ರಾಜ್ಯಪಾಲರಿಗೆ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಕೇಸ್ ವಾಪಸ್ ಪಡೆದ ನಿರ್ಣಯ ರದ್ದುಪಡಿಸಲು ಸರ್ಕಾರಕ್ಕೆ ಸೂಕ್ತ ನಿರ್ದೇಶನ ಕೊಡುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕಲಬುರಗಿಯ ಆಳಂದದಲ್ಲಿ ಪವಿತ್ರ ರಾಘವ ಚೈತನ್ಯ ಶಿವಲಿಂಗಕ್ಕೆ ಅಪಮಾನ ಎಸಗಿ, ಕೋಮು ಉದ್ವಿಗ್ನತೆ ಸೃಷ್ಟಿಸಿದ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡಿದ ಹಾಗೂ ಪೊಲೀಸ್ ಅಧಿಕಾರಿಗಳ ಮೇಲೆಯೇ ಹಲ್ಲೆ ನಡೆಸಿದ ಗಂಭೀರ ಪ್ರಕರಣಗಳ ಹಲವು ಕೇಸ್‌ಗಳನ್ನು ರಾಜ್ಯ ಸರ್ಕಾರ ಹಿಂಪಡೆದಿರುವುದು ಅತ್ಯಂತ ಆಘಾತಕಾರಿ ಮತ್ತು ಖಂಡನೀಯ ಸಂಗತಿಯಾಗಿದೆ.
ಇಂತಹ… pic.twitter.com/C7scZCdVWc
— Chalavadi Narayanaswamy (@NswamyChalavadi) June 2, 2026
ದೂರಿನ ಬಳಿಕ ಮಾಧ್ಯಮಗಳೊಂದಿಗೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ರಾಜ್ಯಪಾಲರನ್ನ ಭೇಟಿ ಮಾಡಿದ್ದೇವೆ. ಆಳಂದ ದರ್ಗಾದಲ್ಲಿ ಈ ಹಿಂದೆ ಗಲಾಟೆ ನಡೆದಿತ್ತು. ಲಾಡ್ಲೆ ಮಷಾಕ್ ದರ್ಗಾದಲ್ಲಿ ಹಲವು ವರ್ಷಗಳಿಂದ ಶಿವಲಿಂಗದ ಇದೆ. ಇದಕ್ಕಾಗಿ ಅನೇಕರ ಹತ್ಯೆಗಳು ನಡೆದಿದೆ. ಕೆಲವರು ಶಿವಲಿಂಗದ ಮೇಲೆ ಮಲ, ಮೂತ್ರ ಮಾಡಿದ್ರು. ಅದನ್ನ ಸ್ವಚ್ಛಗೊಳಿಸಲು ಹೋದ ಸಂದರ್ಭದಲ್ಲಿ ಮಚ್ಚು, ಲಾಂಗಿನಿಂದ ಹಲ್ಲೆಮಾಡಿದ್ರು. ಈ ವೇಳೆ ಬಂದ ಪೊಲೀಸರು, ಡಿಸಿ ಮೇಲೆಯೂ ಹಲ್ಲೆ ನಡೆಸಿದ್ದರು. ಇದೆಲ್ಲಾ ಇದ್ರೂ, ಕೋರ್ಟ್‌ನಲ್ಲಿ ಕೇಸ್ ಇದ್ರೂ. ವೋಟ್ ಬ್ಯಾಂಕಿಗಾಗಿ ಸ್ಪೀಕರ್ ಮೂಲಕ ಪತ್ರ ಕೊಡಿಸಿ ಕೇಸ್ ಹಿಂಪಡೆದಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕೇಸ್ ಹಿಂಪಡೆಯುವ ಮೂಲಕ ಯಾರು ತಪ್ಪು ಮಾಡಿದ್ದಾರೆ, ಕ್ರಿಮಿನಲ್ ಆಕ್ಟಿವಿಟಿ ಮಾಡಿರೋರಿಗೆ ಶಿಕ್ಷೆ ತಪ್ಪಿಸೋ ಕೆಲಸ ಮಾಡಿದ್ದಾರೆ. ಇದು ಹಿಂದುತ್ವಕ್ಕೆ, ಹಿಂದೂಗಳಿಗೆ ಮಾಡಿರೋ ಅಪಮಾನ. ವೋಟ್ ಬ್ಯಾಂಕಿಗೆ ಓಲೈಕೆ ಮಾಡಲು ಈ ರೀತಿ ಕೇಸ್ ವಾಪಸ್ ಪಡೆದಿದ್ದಾರೆ. ದಲಿತ, ಕನ್ನಡ ಸಂಘಟನೆ ಹೋರಾಟ ಮಾಡಿದವರನ್ನ ಜೈಲಿಗೆ ಕಳಿಸಿದ್ರು. ಬಾಂಬ್ ಹಾಕಿದವರನ್ನ, ತಲವಾರ್‌ನಿಂದ ಹಲ್ಲೆ ಮಾಡಿದವರನ್ನ ಓಲೈಕೆ ಮಾಡ್ತಾರೆ. ಈ ರೀತಿ ಕೇಸ್ ವಾಪಸ್ ಪಡೆದಿರೋದನ್ನ ರೀ-ಓಪನ್ ಮಾಡಬೇಕು ಎಂದು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.ಇದನ್ನೂ ಓದಿ: ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜೆ; ಮತ್ತೆ 13 ಮಂದಿಗೆ ಪೂಜೆಗೆ ಕೋರ್ಟ್ ಅವಕಾಶ
