ಬೆಂಗಳೂರು : ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ(Cross voting) ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಜಿ ಸಚಿವ ಅರಗ ಜ್ಞಾನೇಂದ್ರ(Araga jnanendra) ತಿಳಿಸಿದ್ದಾರೆ.
ಅಡ್ಡ ಮತದಾನ ಮಾಡಿದವರ ಪತ್ತೆಗೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡುವ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಂತಹ (BJP) ಪಕ್ಷದಲ್ಲಿ ಅಡ್ಡ ಮತದಾನ ಮಾಡಿರೋದು ದ್ರೋಹ ಇದನ್ನ ಖಂಡಿಸುತ್ತೇನೆ. ಶಿಸ್ತಿನ ಪಕ್ಷದಲ್ಲಿ ಈ ರೀತಿ ಆಗಬಾರದು. ಅಡ್ಡ ಮತದಾನದಿಂದ ಅಧ್ಯಕ್ಷರು ವಿಚಲಿತರಾಗಿದ್ದಾರೆ. ಉದ್ವೇಗಕ್ಕೆ ಒಳಗಾಗಿ ಮಾತಾಡಿದ್ದಾರೆ. ನಾನು ಸಲಹೆ ಕೊಡ್ತೀನಿ ಧರ್ಮಸ್ಥಳಕ್ಕೆ ಹೋಗೋ ಅವಶ್ಯಕತೆ ಇಲ್ಲ. ಬೇರೆ ರೀತಿ ಹುಡುಕಿ ಅಂತಹವರ ಮೇಲೆ ಕ್ರಮ ಆಗಬೇಕು ಎಂದರು.ಇದನ್ನೂ ಓದಿ: PUBLiC TV Impact| ಬಳ್ಳಾರಿ ವಿವಿ ಸರ್ಟಿಫಿಕೇಟ್ ಹಗರಣ – ಇಬ್ಬರು ಗುತ್ತಿಗೆ ನೌಕರರ ಮೇಲೆ ಕೊನೆಗೂ ಎಫ್‌ಐಆರ್
ಅಡ್ಡ ಮತದಾನ ಮಾಡಿದವರಿಗೆ ಕ್ಷಮೆ ಮಾಡಬಾರದು. ಯಾರು ಮಾಡಿದ್ದಾರೆ ಅಂತ ಕಂಡು ಹಿಡಿಯೋಕೆ ಕಮಿಟಿ ಮಾಡಿದ್ದಾರೆ. ವರದಿ ಏನು ಬರುತ್ತೋ ನೋಡೋಣ. ಯಾರು ಅಡ್ಡ ಮತದಾನ ಮಾಡಿದ್ದಾರೆಂದು ಕಂಡು ಹಿಡಿಯಬಹುದು. ಆದರೆ, ಟೈಂ ತೆಗೆದುಕೊಳ್ಳುತ್ತದೆ. ಅಡ್ಡ ಮತದಾನವನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಅಧ್ಯಕ್ಷರು, ವಿಪಕ್ಷ ನಾಯಕರನ್ನ ದೆಹಲಿಗೆ ಕರೆಸಿಕೊಂಡಿದ್ದಾರೆ. ಅಡ್ಡ ಮತದಾನ ಮಾಡಿದವರ ಮೇಲೆ ಕ್ರಮ ಆಗುತ್ತೆ ಎಂದು ತಿಳಿಸಿದರು.ಇದನ್ನೂ ಓದಿ: ಮಂಗಳೂರಿನ ಖಾಝಿ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನ; ಸಚಿವ ಯು.ಟಿ. ಖಾದರ್ ಸಂತಾಪ
