ತಮಿಳುನಾಡು ಸಿಎಂ ವಿಜಯ್(Tamil nadu CM) ಅವರ ಹುಟ್ಟುಹಬ್ಬಕ್ಕೆ ತ್ರಿಷಾ(Trisha) ಶುಭಾಶಯ ಕೋರದೇ, ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ(Instagram) ಅನ್‌ಫಾಲೋ ಮಾಡಿರುವ ಸುದ್ದಿ ಸಿನಿ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನಟಿ ತ್ರಿಷಾ ಮತ್ತು ತಮಿಳು ನಟ ವಿಜಯ್(CM Vijay) ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್‌ಗಳು ಹಲವು ದಿನಗಳಿಂದ ಕೇಳಿಬರುತ್ತಿದ್ದವು. ‘ಗಿಲ್ಲಿ’ ಜೋಡಿಯನ್ನು ಇಷ್ಟಪಡುವ ಅಭಿಮಾನಿಗಳು, ಅವರಿಬ್ಬರೂ ಆನ್‌ಸ್ಕ್ರೀನ್ ಮತ್ತು ಆಫ್‌ಸ್ಕ್ರೀನ್ ಎರಡರಲ್ಲೂ ಉತ್ತಮ ಜೋಡಿ ಎಂದು ಬಣ್ಣಿಸುತ್ತಿದ್ದರು. ಇದೇ ವೇಳೆ, ಈ ಎಲ್ಲ ವದಂತಿಗಳ ನಡುವೆಯೂ ಕೆಲ ಅಭಿಮಾನಿಗಳು ಅವರಿಬ್ಬರೂ ಕೇವಲ ಒಳ್ಳೆಯ ಸ್ನೇಹಿತರು ಮಾತ್ರ ಎಂದು ಹೇಳುತ್ತಿದ್ದರು.
ಈ ಬಾರಿ ವಿಜಯ್ ಅವರ ಹುಟ್ಟುಹಬ್ಬಕ್ಕೆ ತ್ರಿಷಾ ಹೇಗೆ ಶುಭಾಶಯ ಕೋರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಆದರೆ ತ್ರಿಷಾ ಮಾತ್ರ ಯಾರೂ ಊಹಿಸದ ಶಾಕ್ ನೀಡಿದ್ದಾರೆ. ವಿಜಯ್ ಅವರ ಜನ್ಮದಿನಕ್ಕೆ ವಿಶ್ ಮಾಡದೇ ಇರೋದಷ್ಟೇ ಅಲ್ಲ, ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲೂ ಅನ್‌ಫಾಲೋ ಮಾಡಿದ್ದಾರೆ.ಇದನ್ನೂ ಓದಿ: ಲಾಯರ್ ಬದಲಿಸಿದ ಬೆನ್ನಲ್ಲೇ ಸುಪ್ರೀಂಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ ದರ್ಶನ್
ಏಕಾಏಕಿ ಈ ರೀತಿ ವಿಜಯ್ ಅವರಿಂದ ದೂರವಾಗಲು ಕಾರಣವೇನು ಎಂಬ ಪ್ರಶ್ನೆ ಫ್ಯಾನ್ಸ್‌ಗಳಲ್ಲಿ ಮೂಡಿದೆ. ವಿಜಯ್ ಮತ್ತು ತ್ರಿಷಾ ಬೇರೆಯಾಗಿದ್ದಾರಾ? ಅವರಿಬ್ಬರ ಸ್ನೇಹದಲ್ಲಿ ಬಿರುಕು ಮೂಡಿದೆಯಾ? ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಇದಕ್ಕೆ ತ್ರಿಷಾ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಇನ್ನೊಂದೆಡೆ, ಕುಟುಂಬದ ಹಿರಿಯರ ಸಂಧಾನದ ಬಳಿಕ ವಿಜಯ್ ತಮ್ಮ ಕುಟುಂಬ ಜೀವನವನ್ನು ಮತ್ತೆ ಸರಿಪಡಿಸಿಕೊಳ್ಳಲು ಮುಂದಾಗಿದ್ದಾರೆ. ಸಂಗೀತಾ ಅವರೊಂದಿಗೆ ಮತ್ತೆ ಒಂದಾಗಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬಂದಿವೆ. ಇದೇ ಕಾರಣಕ್ಕೆ ತ್ರಿಷಾ, ವಿಜಯ್ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ: ರೀಲ್ಸ್‌ನಲ್ಲಿ ಗರಿಬಿಚ್ಚಿದ ನವಿಲು – ಕಿಶನ್, ನಿವ್ವಿ ವಿರುದ್ಧ ದೂರು ದಾಖಲು
