ಬೆಂಗಳೂರು: ಡಿ.ಕೆ.ಶಿವಕುಮಾರ್ ಜೊತೆ ಬುಧವಾರ 14 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನೂತನ ಸಚಿವರ ಪಟ್ಟಿ ಬಹಿರಂಗ ಆಗಿದೆ.
ದೆಹಲಿಯಲ್ಲಿ ಸಂಪುಟ ರಚನೆಯ ಕಸರತ್ತು ನಡೆಯುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಇಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜೊತೆ ಸಭೆ ನಡೆಸಿದೆ. ಇದುವರೆಗೂ 12 ಸಚಿವರ ಹೆಸರು ಅಂತಿಮವಾಗಿದೆ ಎನ್ನಲಾಗಿದೆ. ರಾತ್ರಿ 9 ಗಂಟೆ ವೇಳೆ ಸಚಿವರ ಅಂತಿಮ ಪಟ್ಟಿ ಸಿದ್ಧವಾಗುವ ಸಾಧ್ಯತೆ ಇದೆ.
ಯಾರ‍್ಯಾರು ಸಚಿವರು ಪದಗ್ರಹಣ?
ಪ್ರಿಯಾಂಕ್ ಖರ್ಗೆ
ಯತೀಂದ್ರ ಸಿದ್ದರಾಮಯ್ಯ
ಯು.ಟಿ.ಖಾದರ್
ಕೆ.ಹೆಚ್.ಮುನಿಯಪ್ಪ
ಎಂ.ಬಿ.ಪಾಟೀಲ್
ಡಾ. ಜಿ.ಪರಮೇಶ್ವರ್
ಕೆ.ಜೆ.ಜಾರ್ಜ್
ರಾಮಲಿಂಗ ರೆಡ್ಡಿ
ಕೃಷ್ಣ ಬೈರೆಗೌಡ
ಬಿ.ಕೆ.ಹರಿಪ್ರಸಾದ್
ಚಲುವರಾಯ ಸ್ವಾಮಿ
ಬೈರತಿ ಸುರೇಶ್
ಸತೀಶ್ ಜಾರಕಿಹೊಳಿ ಹೆಸರನ್ನು ಸಚಿವರ ಪಟ್ಟಿಯಲ್ಲಿ ಹೋಲ್ಡ್ ಮಾಡಲಾಗಿದೆ. ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಮೊದಲ ಪಟ್ಟಿಯಲ್ಲಿ ಘಟಾನುಘಟಿಗಳ ಹೆಸರು ಮಿಸ್ ಆಗಿದೆ. ಜಮೀರ್ ಅಹ್ಮದ್, ಹೆಚ್.ಸಿ.ಮಹದೇವಪ್ಪ, ಶರಣಪ್ರಕಾಶ್ ಪಾಟೀಲ್, ಹೆಚ್.ಕೆ.ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ಮಧು ಬಂಗಾರಪ್ಪ ಮೊದಲಾದವರ ಹೆಸರು ಇಲ್ಲ.
