ತಮಿಳುನಾಡು ಸಿಎಂ ವಿಜಯ್ (CM Vijay) ಅವರ ಹುಟ್ಟುಹಬ್ಬದ (Birthday)ಹಿನ್ನೆಲೆಯಲ್ಲಿ ನಟಿ ತ್ರಿಷಾ(Actress Trisha) ಇನ್ಸ್ಟಾಗ್ರಾಮ್‌ನಲ್ಲಿ ವಿಶೇಷ ಪೋಸ್ಟ್ (Instagram Post) ಮೂಲಕ ಶುಭಾಶಯ ಕೋರಿದ್ದು, ಅವರ ಸಂದೇಶ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ತ್ರಿಷಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಜಯ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಜೊತೆಗೆ, ‘ಎಲ್ಲವನ್ನೂ ಅರ್ಥಪೂರ್ಣವಾಗಿಸುವ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಬರೆದು ರೆಟ್ ಹಾರ್ಟ್ ಸಿಂಬಲ್ ಸೇರಿಸಿದ್ದಾರೆ.
ತ್ರಿಷಾ ಅವರ ಈ ಪೋಸ್ಟ್ ಅಭಿಮಾನಿಗಳ ಗಮನ ಸೆಳೆದಿದೆ. ಕೆಲವೇ ಸಮಯದಲ್ಲಿ ಸಾವಿರಾರು ಲೈಕ್ಸ್ ಹಾಗೂ ಕಾಮೆಂಟ್‌ಗಳು ಹರಿದು ಬಂದಿವೆ. ವಿಜಯ್ ಮತ್ತು ತ್ರಿಷಾ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದು, ಅವರ ಜೋಡಿಗೆ ದೊಡ್ಡ ಅಭಿಮಾನಿ ಬಳಗವಿದೆ. ಇಬ್ಬರ ನಡುವಿನ ಆತ್ಮೀಯತೆ ಹಲವು ಬಾರಿ ಸುದ್ದಿಯಾಗಿತ್ತು.ಇದನ್ನೂ ಓದಿ: ನಟ ಮಮ್ಮುಟ್ಟಿ, ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್‌ಗೆ ಪದ್ಮವಿಭೂಷಣ; ಕ್ರಿಕೆಟಿಗ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರದಾನ
ಇತ್ತೀಚಿನ ದಿನಗಳಲ್ಲಿ ವಿಜಯ್ ಮತ್ತು ತ್ರಿಷಾ ಸಂಬಂಧದ ಬಗ್ಗೆ ಹಲವು ವದಂತಿಗಳು ಹರಿದಾಡುತ್ತಿವೆ. ಅಷ್ಟೇ ಅಲ್ಲ ತ್ರಿಷಾ ವಿಜಯ್ ಅವರ ಹುಟ್ಟುಹಬ್ಬದ ಕುರಿತು ಶುಭಾಶಯ ಮಾಡದೇ ಇದ್ದಿದ್ದಕ್ಕೆ ಅವರಿಬ್ಬರ ನಡುವೆ ಬಿರುಕು ಉಂಟಾಗಿದ್ಯಾ ಎಂಬ ಚರ್ಚೆ ಶುರುವಾಗಿತ್ತು. ಆದರೆ ಇದಕ್ಕೆಲ್ಲ ನಟಿ ತೆರೆ ಎಳೆದಿದ್ದಾರೆ. ಇದರ ನಡುವೆಯೇ ತ್ರಿಷಾ ಹಂಚಿಕೊಂಡಿರುವ ಹುಟ್ಟುಹಬ್ಬದ ಶುಭಾಶಯದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಸದ್ಯ ತ್ರಿಷಾ ಅವರ ಈ ಪೋಸ್ಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು, ವಿಜಯ್ ಅಭಿಮಾನಿಗಳು ಅದನ್ನು ರೀಪೋಸ್ಟ್ ಮಾಡಿಕೊಳ್ಳುತ್ತಿದ್ದಾರೆ.ಇದನ್ನೂ ಓದಿ: ಸಿಎಂ ವಿಜಯ್‌ಗಿಲ್ಲ ಬರ್ತ್‌ಡೇ ವಿಶ್, ಇನ್‌ಸ್ಟಾದಲ್ಲಿ ಅನ್‌ಫಾಲೋ ಮಾಡಿದ ತ್ರಿಷಾ
