ನೆಲಮಂಗಲ: ಕನ್ನಡ ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಡೈರೆಕ್ಟರ್ ಆಗಬೇಕು ಅಂದುಕೊಂಡಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟಕೆ ನೆಲಮಂಗಲದಲ್ಲಿ ನಡೆದಿದೆ.
ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಬಿದಲೂರಿನ ನಿವಾಸಿ ಮಂಜುನಾಥ್ (35) ಆತ್ಮಹತ್ಯೆಗೆ ಶರಣಾದ ಯುವಕ. ನಿರ್ದೇಶಕನಾಗುವ ಆಸೆಯಿಂದ ಸಾಕಷ್ಟು ಕಿರು ಚಿತ್ರಗಳನ್ನು ನಿರ್ದೇಶನ ಮಾಡಿ ಸ್ವತಃ ತಾನೇ ವಿಡಿಯೋ ಎಡಿಟಿಂಗ್ ಮಾಡಿ ತನ್ನ ಕಲೆ ಪ್ರದರ್ಶಿಸಿದ್ದ. ಆದರೆ, ಮಾನಸಿಕ ಖಿನ್ನತೆಯಿಂದ ಬಳಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ‘ಅಪ್ಪ ನನ್ನ ಕ್ಷಮಿಸಿಬಿಡಿ. ಹೆತ್ತವರಿಗೆ ಒಳ್ಳೆ ಮಗನಾಗಲಿಲ್ಲ’ ಎಂದು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಿನಿಮಾ ಡೈರೆಕ್ಟರ್ ಆಗಬೇಕು ಎಂದಿಕೊಂಡಿದ್ದ ಮಂಜುನಾಥ್, ನನ್ನ ಸಾವಿಗೆ ಯಾರೂ ಕಾರಣ ಅಲ್ಲ.. ನಾನೇ ಕಾರಣ ಅಂತ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾನೆ.
ಮಂಜುನಾಥ್ ಬೆಂಗಳೂರು ಉತ್ತರ ತಾಲೂಕು ರಾವುತನಹಳ್ಳಿ ರೂಂ ಮಾಡಿಕೊಂಡಿದ್ದ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ನಿನ್ನೆ ಸಂಜೆ ಮೊಬೈಲ್ ಹೊಡೆದು ಹಾಕಿ ಡೆತ್‌ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
