ಬೆಂಗಳೂರು: ಮಾಜಿ ಸಚಿವ ಬಿ.ಸಿ ನಾಗೇಶ್ (BC Nagesh) ಅವರ ನಿಧನಕ್ಕೆ ವಿಧಾನ ಪರಿಷತ್‌ನಲ್ಲಿ ಸಂತಾಪ ಸೂಚಿಸಲಾಯ್ತು. ಕಲಾಪ ಪ್ರಾರಂಭ ಆದ ಕೂಡಲೇ ಸಭಾಪತಿ ಸಲೀಂ ಅಹಮದ್ ಸಂತಾಪ ಸೂಚನೆ ಮಂಡನೆ ಮಾಡಿದ್ರು. ಸಭಾನಾಯಕ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah), ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಸಂತಾಪ ಸೂಚಿಸಿದರು.
ಡಿಸಿಎಂ ಪರಮೇಶ್ವರ್ (DCM Parameshwar) ಮಾತಾಡಿ, ಬಿ.ಸಿ.ನಾಗೇಶ್ ಅವರು ನನಗೆ ಆತ್ಮೀಯ ಸ್ನೇಹಿತರು. ಶಾಸಕರಾಗಿ, ಸಚಿವರಾಗಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಸಚಿವರಾಗಿದ್ದ ವೇಳೆ ಜಿಲ್ಲೆಯ ಅಭಿವೃದ್ಧಿಯ ವಿಚಾರವಾಗಿ ನನಗೆ ಕರೆ ಮಾಡಿ ಸಲಹೆ ಪಡೆಯುತ್ತಿದ್ದರು. 1994ರಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ನಾನು ಸೋತಾಗ, ಖುದ್ದು ನನ್ನ ಮನೆಗೆ ಬಂದು ಭೇಟಿ ಮಾಡಿದ್ದರು. ಇದನ್ನೂ ಓದಿ: ಪುನಃ ಒತ್ತುವರಿ ಮಾಡುವವರ ಸಾಮಗ್ರಿಗಳನ್ನ ಜಪ್ತಿ ಮಾಡಿ, ದುಪ್ಪಟ್ಟು ದಂಡ ವಿಧಿಸಿ: ಕೃಷ್ಣ ಬೈರೇಗೌಡ
ತಾವು ಬಿಜೆಪಿ ಸೇರಬೇಕು. ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದು ಒತ್ತಾಯಿಸಿದ್ದರು. ನನಗೆ ಅನಂತ್ ಕುಮಾರ್ ಅವರು ಹೇಳಿ ಕಳಿಸಿದ್ದಾರೆ. ಹೇಗಾದರೂ ಮಾಡಿ ಪರಮೇಶ್ವರ್ ಅವರ ಮನವೊಲಿಸಿ. ಅಡ್ವಾಣಿ ಅವರು ತುಮಕೂರಿಗೆ ಬರುತ್ತಿದ್ದು, ಪರಮೇಶ್ವರ್ ಅವರಿಗೆ ಟಿಕೆಟ್ ಘೋಷಿಸೋಣ ಎಂದಿದ್ದಾರೆ ಎಂಬ ವಿಷಯವನ್ನು ನನ್ನ ಮುಂದೆ ಪ್ರಸ್ತಾಪಿಸಿದ್ದರು. ಇದಕ್ಕೆ ನಾನು ಒಪ್ಪಲಿಲ್ಲ ಎಂದು ಹಳೇ ವಿಚಾರವನ್ನು ನೆನೆದರು.
ನಾಗೇಶ್ ಅವರು ಆಗಿನ ಕಾಲದಲ್ಲೇ ತಿಪಟೂರಿನಲ್ಲಿ ಸಾಹುಕಾರರು ಆಗಿದ್ದರು. ಸಾರ್ವಜನಿಕ ಬದುಕಿನಲ್ಲಿ ಕೆಲಸ ಮಾಡುವ ಅವಶ್ಯಕತೆಯೂ ಇರಲಿಲ್ಲ. ಆದರೂ, ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ನಾಗೇಶ್ ಅತ್ಯಂತ ಪ್ರಾಮಾಣಿಕ ವ್ಯಕ್ತಿ. ಸಚಿವರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಪಕ್ಷಬೇಧ ಮರೆತು ಹಿರಿಯರನ್ನು ಗೌರವದಿಂದ ಮಾತನಾಡಿಸುತ್ತಿದ್ದರು ಅಂತ ತಿಳಿಸಿದರು.ಇದನ್ನೂ ಓದಿ: IND vs SL 1st Test: ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾಗೆ 165 ರನ್ ಗೆಲುವು

