ಬೆಂಗಳೂರು: ವಿಕಲಚೇತನ ಮಾಶಾಸನ ಬಾಕಿ ಉಳಿಸಿಕೊಂಡಿದ್ದಾಯ್ತು, ಶಕ್ತಿ ಯೋಜನೆ ಬಾಕಿ ಉಳಿಸಿಕೊಂಡಿದ್ದಾಯ್ತು, ಈಗ ಅನುಗ್ರಹ ಯೋಜನೆ (Anugraha Scheme) ಸರದಿ. ಅನುಗ್ರಹ ಯೋಜನೆಗೂ ಪರಿಹಾರ ನೀಡದಷ್ಟು ಬಡವಾಗಿದೆ ರಾಜ್ಯ ಸರ್ಕಾರ. ಕಳೆದ 2 ವರ್ಷಗಳಿಂದ ರಾಜ್ಯ ಸರ್ಕಾರ (Karnataka Govt) ಅನುಗ್ರಹ ಯೋಜನೆ ಅಡಿ ಪರಿಹಾರದ ಹಣ ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡಿಲ್ಲ ಎಂದು ತಿಳಿದುಬಂದಿದೆ.
ಹಸು, ಕುರಿ, ಮೇಕೆ ಸಾವಿಗೆ ಪರಿಹಾರ ನೀಡುವ ಯೋಜನೆ ಅನುಗ್ರಹ ಯೋಜನೆ. ಈ ಯೋಜನೆಗೆ 2 ವರ್ಷಗಳಿಂದ ಸುಮಾರು 100 ಕೋಟಿ ರೂ.ಗೂ ಅಧಿಕ ಪರಿಹಾರ ಹಣ ಬಾಕಿ ಉಳಿಸಿಕೊಂಡಿದೆ. ಪಶು ಸಂಗೋಪನೆ ಇಲಾಖೆ ಸಚಿವರೇ ಬಾಕಿ ಉಳಿಸಿಕೊಂಡಿರೋ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ಅನುಗ್ರಹ ಯೋಜನೆ ಅಡಿ ಪರಿಹಾರ ಸಿಗದೇ ರೈತರು ಕಂಗಲಾಗಿದ್ದು, ಸರ್ಕಾರಕ್ಕೆ ಆರ್ಥಿಕ ಸಮಸ್ಯೆ ಕಾಡ್ತಿದೆಯಾ? ಅನ್ನೋ ಅನುಮಾನ ಶುರುವಾಗಿದೆ. ಇದನ್ನೂ ಓದಿ: ಆಟ ಆಡುವಾಗ 3ನೇ ಮಹಡಿಯಿಂದ ಕೆಳಗೆ ಬಿದ್ದ ಬಾಲಕ – ಐಸಿಯುನಲ್ಲಿ ಚಿಕಿತ್ಸೆ
2025-26ನೇ ಸಾಲಿನಲ್ಲಿ 31 ಜಿಲ್ಲೆಗಳಲ್ಲಿ 1,21,510 ಮೇಕೆ, ಕುರಿ ಸಾವಾಗಿದೆ. ಇವುಗಳ ಪೈಕಿ 28 ಕೋಟಿ ರೂ. ಮಾತ್ರ ಪರಿಹಾರ ಬಿಡುಗಡೆಯಾಗಿದೆ. 56 ಕೋಟಿ ರೂ. ಹಣ ಬಾಕಿ ಉಳಿಸಿಕೊಂಡಿದೆ. 2026-27ನೇ ಸಾಲಿನಲ್ಲಿ 17,369 ಕುರಿ, ಮೇಕೆ ಸಾವನ್ನಪ್ಪಿದ್ದು, 12 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.
2025-26ನೇ ಸಾಲಿನಲ್ಲಿ 31 ಜಿಲ್ಲೆಗಳಲ್ಲಿ 32,804 ರಾಸುಗಳು ಸತ್ತಿವೆ. ಈ ವೇಳೆ ಕೇವಲ 6 ಕೋಟಿ ರೂ. ಪರಿಹಾರ ನೀಡಿ 37 ಕೋಟಿ ರೂ. ಪರಿಹಾರ ಬಾಕಿ ಉಳಿಸಿಕೊಂಡಿದೆ. 2026-27 ನೇ ಸಾಲಿನಲ್ಲಿ 7,606 ರಾಸುಗಳು ಸತ್ತಿದ್ದು, 11 ಕೋಟಿ ರೂ. ಪರಿಹಾರ ಬಾಕಿ ಉಳಿಸಿಕೊಂಡಿದೆ.ಇದನ್ನೂ ಓದಿ: ಭದ್ರಾ ಜಲಾಶಯದಿಂದ ನಾಲೆಗಳಿಗೆ ಇಂದು ರಾತ್ರಿಯಿಂದಲೇ ನೀರು ಬಿಡುಗಡೆ

