ಪಾಟ್ನಾ: ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) 76ನೇ ಹುಟ್ಟುಹಬ್ಬಕ್ಕೆ ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ, ಅಭಿಮಾನಿಯೊಬ್ಬ ಜನರಿಗೆ ಉಚಿತ ಚಹಾ ನೀಡುವ ಮೂಲಕ ವಿಶೇಷವಾಗಿ ಜನ್ಮದಿನವನ್ನ ಆಚರಿಸಿದ್ದಾರೆ.
ಕತಿಹಾರ್‌ನ ಮೆಡಿಕಲ್ ಕಾಲೇಜು ಮೋರ್‌ನಲ್ಲಿ ಟೀ ಸ್ಟಾಲ್ ನಡೆಸುತ್ತಿರುವ ಜವಾಹರ್ ಭಗತ್ ಎಂಬುವವರು ಪ್ರಧಾನಿ ಮೋದಿಯವರ 76ನೇ ಹುಟ್ಟುಹಬ್ಬದಕ್ಕೆ 76 ಕಪ್ ಚಹಾ ಉಚಿತವಾಗಿ ಹಂಚಿದ್ದಾರೆ.

ಜವಾಹರ್ ಭಗತ್ ಸ್ವತಃ ಚಹಾ ಮಾರಾಟಗಾರರಾಗಿದ್ದಾರೆ. ಈ ಕುರಿತು ಮಾತನಾಡಿ, ನಾನು ಪ್ರಧಾನಿ ನರೇಂದ್ರ ಮೋದಿಯವರ ಅಪ್ಪಟ ಅಭಿಮಾನಿ. ಒಂದು ಕಾಲದಲ್ಲಿ ಚಾಯ್‌ವಾಲಾ ಆಗಿದ್ದ ಮೋದಿಯವರು ಈಗ ದೇಶದ ಪ್ರಧಾನಿಯಾಗಿರುವುದು ನಮಗೆಲ್ಲ ಸ್ಪೂರ್ತಿ. ನನಗೆ ರಾಜಕೀಯದಲ್ಲಿ ಅಷ್ಟಾಗಿ ಆಸಕ್ತಿ ಇಲ್ಲ. ಹೀಗಾಗಿ ಜನ ಮೋದಿಯವರ ಬಗ್ಗೆ ಏನೇ ಹೇಳಿದರೂ ಅವರ ಮೇಲಿನ ನನ್ನ ಅಭಿಪ್ರಾಯ ಬದಲಾಗಲ್ಲ. ಅವರು ಜಾರಿಗೆ ತಂದಿರುವ ಹಲವು ಸರ್ಕಾರಿ ಯೋಜನೆಗಳಿಂದ ಸಾಮಾನ್ಯ ಜನರಿಗೆ ಬಹಳ ಪ್ರಯೋಜನವಾಗಿದೆ ಎಂದು ಮೋದಿಯನ್ನು ಹಾಡಿ ಹೊಗಳಿದರು. ಇದನ್ನೂ ಓದಿ: ರೇಷನ್ ಕಾರ್ಡ್ ಇ-ಕೆವೈಸಿ ಗಡುವು ಅ.20 ರ ವರೆಗೆ ವಿಸ್ತರಣೆ
ಚಹಾ ಮಾರಾಟಗಾರ ವಿಶೇಷ ಯೋಜನೆ ಜಾರಿಗೆ ತನ್ನಿ
ಇದೇ ವೇಳೆ ಭಗತ್ ಸರ್ಕಾರಕ್ಕೆ ಒಂದು ಬೇಡಿಕೆಯನ್ನಿಟ್ಟಿದ್ದಾರೆ. ದೇಶಾದ್ಯಂತ ಚಹಾ ಮಾರಾಟಗಾರರಿಗಾಗಿ ವಿಶೇಷ ಯೋಜನೆಯನ್ನು ಪರಿಚಯಿಸಬೇಕು ಎಂದು ಪ್ರಧಾನಿಗೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಅಮೆರಿಕ ಮಹಿಳೆ ಮೇಲಿನ ಅತ್ಯಾಚಾರ ಕೇಸ್ – ಹೋಂಸ್ಟೇ ಮಾಲೀಕನಿಗೆ 5 ಲಕ್ಷ ಪರಿಹಾರ ನೀಡದ ಸರ್ಕಾರ!

