ಬೆಂಗಳೂರು: ಜನರಿಗೆ ಅನುಕೂಲ ಆಗುವ ಎರಡು ಮಹತ್ವದ ನಿರ್ಧಾರವನ್ನ ಸರ್ಕಾರ ಮತ್ತು ಆಹಾರ ಇಲಾಖೆ ತೆಗೆದುಕೊಂಡಿದೆ. ಖುದ್ದು ಆಹಾರ ಇಲಾಖೆ ಸಚಿವ ರಿಜ್ವಾನ್ ಅರ್ಷದ್ (Rizwan Arshad) ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ರೇಷನ್ ಕಾರ್ಡ್ ಇ-ಕೆವೈಸಿ (Ration Card EKyc) ಮಾಡಿಸುವ ಗಡುವನ್ನು ಸರ್ಕಾರ ವಿಸ್ತರಣೆ ಮಾಡಿದೆ. ಅಕ್ಟೋಬರ್ 20ರ ವರೆಗೂ ಅವಧಿ ವಿಸ್ತರಣೆ ಮಾಡಿ ಆಹಾರ ಇಲಾಖೆ ಆದೇಶ ಮಾಡಿದೆ. ಸರ್ವರ್ ಸಮಸ್ಯೆಯಿಂದಾಗಿ ಇ-ಕೆವೈಸಿ ಮಾಡಿಸಲು ಸಮಸ್ಯೆ ಆಗ್ತಿತ್ತು. ಈ ಹಿನ್ನೆಲೆ ಗಡುವು ವಿಸ್ತರಣೆ ಮಾಡಿರೋದಾಗಿ ಸಚಿವ ರಿಜ್ವಾನ್ ಅರ್ಷದ್ ಮಾಹಿತಿ ನೀಡಿದ್ದಾರೆ.

ನ್ಯಾಯ ಬೆಲೆ ಅಂಗಡಿಗಳ ಸಮಯವನ್ನ ಸರ್ಕಾರ ಪರಿಷ್ಕರಣೆ ಮಾಡಿದೆ. ಕೂಲಿ ಕಾರ್ಮಿಕರು, ಆಟೋ ಚಾಲಕರು, ಕಟ್ಟಡ ಕಾರ್ಮಿಕರು ರೇಷನ್ ಪಡೆಯಲು ಸಹಕಾರಿ ಆಗುವಂತೆ ನ್ಯಾಯಬೆಲೆ ಅಂಗಡಿ ಸಮಯವನ್ನ ಪರಿಷ್ಕರಣೆ ಮಾಡಲಾಗಿದೆ. ಅಕ್ಟೋಬರ್ 1 ರಿಂದ ನೂತನ ಸಮಯ ಜಾರಿ ಅಂತ ಸಚಿವ ರಿಜ್ವಾನ್ ಅರ್ಷದ್ ಮಾಹಿತಿ ನೀಡಿದ್ದಾರೆ.
ನ್ಯಾಯ ಬೆಲೆ ಅಂಗಡಿಗಳ ನೂತನ ಸಮಯ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ವರೆಗೆ ಮತ್ತು ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಪಡಿತರ ನೀಡಲು ಸಮಯ ನಿಗದಿ ಮಾಡಲಾಗಿದೆ.

