– ವ್ಯಾಪಾರಿಗಳಿಗೆ ಕಠಿಣ ಸೂಚನೆ
– ಯುಪಿಐ ಶುಲ್ಕದ ವಿಚಾರದಲ್ಲಿ ಅಮೆರಿಕದ ಒತ್ತಡವಿಲ್ಲ
ನವದೆಹಲಿ: 2,000 ರೂ. ಮೇಲ್ಪಟ್ಟ ವಹಿವಾಟಿಗೆ ಶುಲ್ಕ ವಿಧಿಸುವ ಕ್ರಮವನ್ನ ಹಿಂಪಡೆಯಬೇಕು ಎಂಬ ವಿಕ್ಷಗಳ ಒತ್ತಾಯದ ನಡುವೆಯೇ, ಈ ಶುಲ್ಕ ವಿಧಿಸುವ ನಿರ್ಧಾರವನ್ನ ಎಲ್ಲಾ ಅಂಶಗಳನ್ನು ಪರಿಗಣಿಸಿದ ಬಳಿಕವೇ ಕೈಗೊಳ್ಳಲಾಗಿದೆ ಎಂದು ಗುರುವಾರ ಸರ್ಕಾರದ (Central Govt) ಮೂಲಗಳು ತಿಳಿಸಿವೆ.
ಮುಖ್ಯವಾಗಿ, ವ್ಯಾಪಾರಿಗಳು ಯುಪಿಐ (UPI) ಶುಲ್ಕದ ಹೊರೆಯನ್ನ ಗ್ರಾಹಕರ ಮೇಲೆ ಹೊರಿಸದಂತೆ ಸರ್ಕಾರ ಕಟ್ಟುನಿಟ್ಟಾಗಿ ನಿಗಾ ವಹಿಸಲಿದೆ. ಪಾವತಿ ಒಟ್ಟುಗೂಡಿಸುವ ಸಂಸ್ಥೆಗಳೊಂದಿಗೆ ಸರ್ಕಾರ ಈಗಾಗಲೇ ಚರ್ಚೆ ನಡೆಸಿದ್ದು, ಅನುಷ್ಠಾನದಲ್ಲಿರುವ ಲೋಪಗಳನ್ನ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ವರಿಗಳ ಪ್ರಕಾರ, ವ್ಯಾಪಾರಿಗಳು ಶುಲ್ಕವನ್ನು ಗ್ರಾಹಕರಿಗೆ (consumers) ವರ್ಗಾಯಿಸದಂತೆ ಪರಿಣಾಮಕಾರಿ ಅನುಷ್ಠಾನವಬನ್ನ ಸರ್ಕಾರ ನಿಕಟವಾಗಿ ಮೇಲ್ವಿಚಾರಣೆ ಮಾಡಲಿದೆ ತಿಳಿಸಿದೆ.

ಷೇರು ಮಾರುಕಟ್ಟೆ ವಹಿವಾಟಿಗೂ ಎಂಡಿಆರ್
ಷೇರು ಮಾರುಕಟ್ಟೆ ವಹಿವಾಟುಗಳಿಗೆ ಶೇ.0.02ರ ಎಂಡಿಆರ್ ವಿಧಿಸುವ ನಿರ್ಧಾರವನ್ನ ಸೆಬಿ, ಷೇರು ವಿನಿಮಯ ಕೇಂದ್ರಗಳು ಹಾಗೂ ಸಂಬಂಧಿತ ಪಾಲುದಾರರೊಂದಿಗೆ ಚರ್ಚಿಸಿದ ಬಳಿಕ ಕೈಗೊಳ್ಳಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಯುಪಿಐ ಶುಲ್ಕದ ವಿಚಾರದಲ್ಲಿ ಅಮೆರಿಕದ ಒತ್ತಡವಿಲ್ಲ
ಆಯ್ದ ಯುಪಿಐ ವಹಿವಾಟುಗಳಿಗೆ ಶೇ.0.4ರ ಎಂಡಿಆರ್ ವಿಧಿಸುವ ನಿರ್ಧಾರ ಕೈಗೊಳ್ಳಲು ಸರ್ಕಾರದ ಮೇಲೆ ಅಮೆರಿಕದ ಒತ್ತಡವಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಯುಪಿಐ ವಹಿವಾಟುಗಳ ಮೇಲೆ ಜಿಎಸ್ಟಿ ವಿಧಿಸಲಾಗುತ್ತದೆ ಎಂಬುದು ಕೂಡ ಸುಳ್ಳು. ಪಾವತಿಸಲಾದ ಜಿಎಸ್ಟಿಯನ್ನ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ನಲ್ಲಿ ಹೊಂದಿಸಿಕೊಳ್ಳಲು ಸಾಧ್ಯವಾಗಲಿದೆ. ಯಾವುದೇ ಸಮಸ್ಯೆ ಎದುರಾದರೆ ಜಿಎಸ್ಟಿ ಮಂಡಳಿ ಅದನ್ನು ಪರಿಶೀಲಿಸಲಿದೆ ಎಂದು ಮೂಲಗಳು ತಿಳಿಸಿವೆ.
ಎಂಡಿಆರ್ ಎಂದರೇನು?
ವ್ಯಾಪಾರಿಗಳು (Merchants) ಗ್ರಾಹಕರಿಂದ ಡಿಜಿಟಲ್ ಪಾವತಿಗಳನ್ನು (ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ) ಸ್ವೀಕರಿಸಲು ಬ್ಯಾಂಕ್ ಹಾಗೂ ಪಾವತಿ ಸೇವಾ ಸಂಸ್ಥೆಗಳಿಗೆ ಪಾವತಿಸುವ ಸೇವಾ ಶುಲ್ಕ.

ಯಾವುದಕ್ಕೆ ಎಷ್ಟು ಪಾವತಿ ದರ?
ಭಾರತದಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಜಾರಿಗೆ ತಂದಿರುವ ಹೊಸ ಯುಪಿಐ (UPI) ಎಂಡಿಆರ್ ನಿಯಮಗಳು ಅಕ್ಟೋಬರ್ 15 ರಿಂದ ಜಾರಿಗೆ ಬರಲಿವೆ. ಇದರ ಪ್ರಕಾರ ವಿವಿಧ ಪಾವತಿ ವಿಧಾನಗಳ ದರಗಳು ಈ ಕೆಳಗಿನಂತಿವೆ
• 2,000 ರೂ. ವರೆಗಿನ ವಹಿವಾಟು: ಯಾವುದೇ ಶುಲ್ಕವಿಲ್ಲ
• 2,000 ರೂ. ಕ್ಕಿಂತ ಹೆಚ್ಚಿನ ವ್ಯಾಪಾರಿ ಪಾವತಿಗಳು (P2M): 0.4% MDR ಅನ್ವಯ
• ಗರಿಷ್ಠ ಮಿತಿ 75,000 ರೂ. ಅಥವಾ ಅದಕ್ಕಿಂತ ಹೆಚ್ಚಿನ ದೊಡ್ಡ ವಹಿವಾಟುಗಳಿಗೆ ಗರಿಷ್ಠ ಶುಲ್ಕವನ್ನು 300 ರೂ.ಗೆ ಮಿತಿಗೊಳಿಸಲಾಗಿದೆ.
• ಅತ್ಯಗತ್ಯ ಸೇವೆಗಳಿಗೆ ಸ್ಥಿರ ದರ: ರೈಲ್ವೆ, ಟೆಲಿಕಾಂ, ವಿಮೆ, ಇಂಧನ, ಮತ್ತು ಕೃಷಿ ಪರಿಕರಗಳ ಖರೀದಿಗೆ 2,000 ಕ್ಕಿಂತ ಹೆಚ್ಚಿನ ವಹಿವಾಟು ನಡೆದರೆ 0.4% ಬದಲಾಗಿ 5 ರೂ.ಸ್ಥಿರ ಶುಲ್ಕ ಇರುತ್ತದೆ.
• ಬಂಡವಾಳ ಮಾರುಕಟ್ಟೆ ಪಾವತಿಗಳು: ಮ್ಯೂಚುವಲ್ ಫಂಡ್, ಸ್ಟಾಕ್ ಬ್ರೋಕರ್ ಮತ್ತು ಸೆಕ್ಯುರಿಟೀಸ್ ಪಾವತಿಗಳಿಗೆ 0.02% MDR ಗರಿಷ್ಠ 300 ರೂ.
ಯಾವ ಕಾರ್ಡ್ಗೆ ಈಗ ಎಷ್ಟು ಎಂಡಿಆರ್ ಇದೆ?
ಡೆಬಿಟ್ ಕಾರ್ಡ್ಗಳು: ಸಾಮಾನ್ಯವಾಗಿ ವಹಿವಾಟಿನ ಮೌಲ್ಯದ 0.90% ಇರುತ್ತದೆ
ಕ್ರೆಡಿಟ್ ಕಾರ್ಡ್ಗಳು: ಸಾಮಾನ್ಯವಾಗಿ ವಹಿವಾಟಿನ ಮೌಲ್ಯದ 1.5% ರಿಂದ 2.5% ವರೆಗೆ ಇರುತ್ತದೆ.
ಯಾರಿಗೆ ಉಚಿತ?
ಗ್ರಾಹಕರಿಗೆ ಉಚಿತ: ಈ ಎಂಡಿಆರ್ ಶುಲ್ಕವನ್ನು ಕೇವಲ ವ್ಯಾಪಾರಿಗಳು ಮಾತ್ರ ಭರಿಸಬೇಕು. ಸಾಮಾನ್ಯ ಗ್ರಾಹಕರು ಹಣ ಪಾವತಿಸುವಾಗ ಯಾವುದೇ ಹೆಚ್ಚುವರಿ ಶುಲ್ಕ ಕಡಿತವಾಗುವುದಿಲ್ಲ.
ವ್ಯಕ್ತಿಗತ ವರ್ಗಾವಣೆ ಉಚಿತ: ನಿಮ್ಮ ಸ್ನೇಹಿತರು ಅಥವಾ ಕುಟುಂಬದವರಿಗೆ ಯುಪಿಐ ಮೂಲಕ ಎಷ್ಟು ಹಣ ಕಳುಹಿಸಿದರೂ ಅದು ಸಂಪೂರ್ಣ ಉಚಿತವಾಗಿರುತ್ತದೆ.
ಸಣ್ಣ ವ್ಯಾಪಾರಿಗಳಿಗೆ ವಿನಾಯಿತಿ: ತಿಂಗಳಿಗೆ 1 ಲಕ್ಷ ರೂ.ವರೆಗೆ ಯುಪಿಐ ಕ್ಯೂಆರ್ (QR) ಕೋಡ್ ಮೂಲಕ ಆದಾಯ ಪಡೆಯುವ ಸಣ್ಣ ವ್ಯಾಪಾರಿಗಳಿಗೆ ಈ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

