ಗಾಲ್ಲೆ: ಶ್ರೀಲಂಕಾ (Sri Lanka) ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ 165 ರನ್‌ಗಳಿಂದ ಗೆದ್ದಿದೆ. 2ನೇ ಇನ್ನಿಂಗ್ಸ್‌ನಲ್ಲಿ ಸ್ಪಿನ್ನರ್ ಮಾನವ್ ಸುತಾರ್ 6 ವಿಕೆಟ್ ಪಡೆದು ಟೀಂ ಇಂಡಿಯಾ (Team India) ಗೆಲುವಿನ ರೂವಾರಿಯಾದರು. ಭಾರತ ಗೆಲುವು ಸಾಧಿಸುತ್ತಿದ್ದಂತೆ ಗಾಲ್ಲೆಯಲ್ಲಿ ಮತ್ತೆ ಮಳೆ ಶುರುವಾಯಿತು.
ಗೆಲ್ಲಲು 372 ರನ್ ಗಳ ಟಾರ್ಗೆಟ್ ಬೆನ್ನತ್ತಿದ ಶ್ರೀಲಂಕಾ 2ನೇ ಇನ್ನಿಂಗ್ಸ್‌ನಲ್ಲಿ 206 ರನ್ ಗಳಿಗೆ ಆಲೌಟ್ ಅಯಿತು. ಇದನ್ನೂ ಓದಿ: ಸಿಕ್ಸ್ ಸಿಡಿಸಿ ದಾಖಲೆ ಬರೆದ ಪಂತ್ – ಸೋಲಿನತ್ತ ಶ್ರೀಲಂಕಾ
ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದಿದ್ದ ಮಾನವ್ ಸುತಾರ್ ಈ ಪಂದ್ಯದಲ್ಲಿ ಒಟ್ಟು 10 ವಿಕೆಟ್ ಗಳಿಸಿದ ಸಾಧನೆ ಮಾಡಿದರು.
ಶ್ರೀಲಂಕಾ ಪರ ನಾಯಕ ಧನಂಜಯ ಡಿಸಿಲ್ವ ಮತ್ತು ಸೋನಲ್ ದಿನುಶ ಅರ್ಧ ಶತಕ ಗಳಿಸಿದರು. ಧನಂಜಯ 59 ರನ್ ಗಳಿಸಿ ಔಟಾದರೆ, ಸೋನಲ್ 84 ರನ್ ಗಳಿಸಿ ಮಾನವ್ ಸುತಾರ್ ಗೆ ವಿಕೆಟ್ ಒಪ್ಪಿಸಿದರು.
ಭಾರತದ ಪರ 2ನೇ ಇನ್ನಿಂಗ್ಸ್‌ನಲ್ಲಿ ಪ್ರಸಿದ್ಧ್ ಕೃಷ್ಣ 2, ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜ ತಲಾ 1 ವಿಕೆಟ್ ಗಳಿಸಿದರು.
ಮೊದಲ ಇನ್ನಿಂಗ್ಸ್‌ನಲ್ಲಿ ದೇವದತ್ತ್ ಪಡಿಕ್ಕಲ್ 167 ರನ್ ಗಳಿಸಿದ್ದರು. ಕೆಎಲ್ ರಾಹುಲ್ 82 ರನ್ ಗಳಿಸಿ ಉತ್ತಮ ಜೊತೆಯಾಟ ನೀಡಿದ್ದರು. ಇದನ್ನೂ ಓದಿ: ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್; 167 ರನ್ ಗಳಿಸಿದ ಪಡಿಕ್ಕಲ್ – ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 460 ರನ್
ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 462 ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 193 ರನ್ ಗಳಿಗೆ ಆಲೌಟ್ ಆಯ್ತು. ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 284 ಎರಡನೇ ಇನ್ನಿಂಗ್ಸ್‌ನಲ್ಲಿ 206 ರನ್ ಗಳಿಗೆ ಆಲೌಟ್ ಆಯ್ತು.
ಈ ಗೆಲುವಿನ ಮೂಲಕ ಭಾರತ 2 ಟೆಸ್ಟ್ ಪಂದ್ಯದ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. 2ನೇ ಟೆಸ್ಟ್ ಪಂದ್ಯ ಆಗಸ್ಟ್ 23-27ರವರೆಗೆ ಕೊಲಂಬೋದಲ್ಲಿ ನಡೆಯಲಿದೆ.

