ನವದೆಹಲಿ: ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ಅಭಿಷೇಕ್ ಶರ್ಮಾ (Abhishek Sharma) ರನ್ ಮಳೆ ಸುರಿಸಿದ್ದಾರೆ. ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಅಭಿ 30 ಎಸೆತಗಳಲ್ಲೇ ಸಿಡಿಲಬ್ಬರದ ಶತಕ ಸಿಡಿಸುವ ಮೂಲಕ ಭಾರತದ ಪರ ಹೊಸ ದಾಖಲೆ ನಿರ್ಮಿಸಿದ್ದಾರೆ.
WHAT A CRAZY SHOT – Abhishek Sharma for a reason 😍 pic.twitter.com/3YNjcKkwaI
— Johns. (@CricCrazyJohns) September 17, 2026
ಆರಂಭದಿಂದಲೇ ಸ್ಫೋಟಕ ಪ್ರದರ್ಶನಕ್ಕಿಳಿದ ಅಭಿಷೇಕ್ ಶರ್ಮಾ 30 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಇದರಲ್ಲಿ 10 ಸಿಕ್ಸರ್, 9 ಬೌಂಡರಿಗಳೂ ಸೇರಿವೆ. ಈ ಶತಕದ ಮೂಲಕ 13 ವರ್ಷಗಳ ಹಿಂದಿನ ರೋಹಿತ್ ಶರ್ಮಾ (Rohit Sharma) ಅವರ ದಾಖಲೆಯನ್ನ ನುಚ್ಚುನೂರು ಮಾಡಿದ್ದಾರೆ.
ಹೌದು. 2017 ರಲ್ಲಿ ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧ ಇಂದೋರ್‌ನಲ್ಲಿ ನಡೆದ ಪಂದ್ಯದಲ್ಲಿ 35 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಇದು ಟೀಂ ಇಂಡಿಯಾ ಪರ ದಾಖಲಾದ ವೇಗದ ಟಿ20 ಶತಕ (T20 century) ಆಗಿತ್ತು. ಇದೀಗ ಅಭಿಷೇಕ್ ಶರ್ಮಾ ಆ ದಾಖಲೆಯನ್ನ ನುಚ್ಚುನೂರು ಮಾಡಿದ್ದಾರೆ. ವಿಶೇಷವೆಂದ್ರೆ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ವೇಗದ ಶತಕ ಬಾರಿಸಿದ 3ನೇ ಆಟಗಾರ ಕೂಡ ಅಭಿಷೇಕ್ ಶರ್ಮಾನೇ ಆಗಿದ್ದಾರೆ.

ಅಫ್ಘಾನ್ ವಿರುದ್ಧ ಈಗಾಗಲೇ 2ಕ್ಕೆ 2 ಪಂದ್ಯಗಳನ್ನ ಗೆದ್ದು ಸರಣಿ ಕೈವಶ ಮಾಡಿಕೊಂಡಿರುವ ಭಾರತ ಇಂದು 3ನೇ ಪಂದ್ಯವನ್ನಾಡುತ್ತಿದೆ. 317.64 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಅಭಿಷೇಕ್ ಶರ್ಮಾ ಒಟ್ಟು 34 ಎಸೆತಗಲ್ಲಿ 11 ಸಿಕ್ಸರ್, 9 ಬೌಂಡರಿ ಸಹಿತ 108 ರನ್ ಸಿಡಿಸಿ ಔಟಾದರು.
ಟೀಂ ಇಂಡಿಯಾ ಪರ ಸ್ಫೋಟಕ ಶತಕ ಸಿಡಿಸಿದ ಟಾಪ್-5 ಪ್ಲೇಯರ್ಸ್
* ಅಭಿಷೇಕ್ ಶರ್ಮಾ – 30 ಎಸೆತ – ಫ್ಘಾನಿಸ್ತಾನ ವಿರುದ್ಧ
* ರೋಹಿತ್ ಶರ್ಮಾ – 35 ಎಸೆತ – ಶ್ರೀಲಂಕಾ ವಿರುದ್ಧ
* ಅಭಿಷೇಕ್ ಶರ್ಮಾ – 37 ಎಸೆತ – ಇಂಗ್ಲೆಂಡ್ ವಿರುದ್ಧ
* ಸಂಜು ಸ್ಯಾಮ್ಸನ್ – 40 ಎಸೆತ – ಬಾಂಗ್ಲಾದೇಶ ವಿರುದ್ಧ
* ತಿಲಕ್ ವರ್ಮಾ – 41 ಎಸೆತ – ದಕ್ಷಿಣ ಆಫ್ರಿಕಾ ವಿರುದ್ಧ

