ಬೆಂಗಳೂರು: ದೆಹಲಿಯಿಂದ (Delhi) ಬೆಂಗಳೂರಿಗೆ (Bengaluru) ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಆಗಮಿಸಿದರು. ನಗರದ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು ಸರ್ಕಾರಿ ಕಾರನ್ನು ಬಿಟ್ಟು ಖಾಸಗಿ ಕಾರಲ್ಲಿ ಮನೆಗೆ ಪ್ರಯಾಣ ಬೆಳೆಸಿದರು.
ಈ ವೇಳೆ ಏನೂ ಮಾತಾಡದೇ, ಅಭಿಮಾನಿಗಳತ್ತ ಕೈಬೀಸಿ ಅಲ್ಲಿಂದ ತೆರಳಿದ್ದಾರೆ. ಮೇ 28 ರಂದು ಅವರು ಬೆಂಗಳೂರಿಗೆ ಬರುತ್ತಾರೆ ಎನ್ನಲಾಗಿತ್ತು. ಆದರೆ ಒಂದು ದಿನ ಮುಂಚೆಯೇ ಅವರು ಆಗಮಿಸಿದ್ದಾರೆ. ಅವರ ಅಭಿಮಾನಿಗಳು ಭಾರೀ ಪ್ರಮಾಣದಲ್ಲಿ ಸೇರುವ ನಿರೀಕ್ಷೆ ಇದ್ದಿದ್ದರಿಂದ ಏರ್ಪೋರ್ಟ್‌ನಲ್ಲಿ ಭಾರೀ ಭದ್ರತೆ ಕೈಗೊಳ್ಳಲಾಗಿತ್ತು. ಇದನ್ನೂ ಓದಿ: ಅಪ್ಪಾಜಿ ನೀವು ಹೋದ್ರೆ ನಮ್ಮನ್ನ ಕೈ ಬಿಡ್ತಾರೆ – ಸಿಎಂ ಮುಂದೆ ಕಣ್ಣೀರಿಟ್ಟ ನೌಕರರು
ಡಿ.ಕೆ ಶಿವಕುಮಾರ್ ಅವರನ್ನು ಬರಮಾಡಿಕೊಳ್ಳಲು ಬಂದಿದ್ದ, ಮಾಜಿ ಮೇಯರ್ ಜಿ.ಪದ್ಮಾವತಿಯವರು ಮಾಧ್ಯಮಗಳ ಜೊತೆ ಮಾತನಾಡಿ, ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷ. ನಾಳೆ ಎಲ್ಲವೂ ರೂಲ್ಸ್ ಪ್ರಕಾರ ಅಧಿಕಾರ ಹಸ್ತಾಂತರವಾಗೋ ಸಾಧ್ಯತೆಯಿದೆ. ತುಂಬಾ ಸಂತೋಷವಾಗ್ತಿದೆ. ಒಬ್ಬ ಶಿಸ್ತಿನ ಸಿಪಾಯಿಗೆ ಅಧಿಕಾರ ಕೊಡತ್ತಿರೋದನ್ನು ಒಬ್ಬ ಅಭಿಮಾನಿಯಾಗಿ ಸ್ವಾಗತಿಸುತ್ತೇನೆ ಎಂದರು. ಇದನ್ನೂ ಓದಿ: ಯಾವ ಕಾರಣಕ್ಕೂ ನೀವು ರಾಜೀನಾಮೆ ಕೊಡಬಾರದು: ಸಿಎಂ ಸಿದ್ದರಾಮಯ್ಯಗೆ ವಾಟಾಳ್ ನಾಗರಾಜ್ ಮನವಿ
