ಬೆಂಗಳೂರು: ಸಿದ್ದರಾಮಯ್ಯ (Siddaramaiah) ಅವರು ಮೇ 28 ರಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇದರ ಬೆನ್ನಲ್ಲೇ ವಿಧಾನಸೌಧದಲ್ಲಿದ್ದ ಆಡ್ಮಿನ್ ವಿಭಾಗದ ಮಹಿಳಾ ಸಿಬ್ಬಂದಿ ಕಣ್ಣೀರಿಟ್ಟಿದ್ದಾರೆ. ಅಪ್ಪಾಜಿ ಅಪ್ಪಾಜಿ.. ನೀವು ಹೋದ್ರೆ ನಮ್ಮನ್ನ ಕೈ ಬಿಡ್ತಾರೆ ಎಂದು ಕೆಲ ನೌಕರರು ಗೋಳಾಡಿದ್ದಾರೆ.
ನಿಮ್ಮ ಹೆಸರು ಹೇಳಿಕೊಂಡು ಬದುಕುತ್ತಿದ್ದೇವು ಎಂದು ವಿಧಾನಸೌಧದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಕಣ್ಣೀರಿಟ್ಟಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಅವರು ವಿಷಲ್ ಹೊಡೆದುಕೊಂಡು ಅಲ್ಲಿಂದ ತೆರಳಿದ್ದಾರೆ. ತಮ್ಮ ಹಳೆಯ ಶೈಲಿಯಲ್ಲಿಯೇ ನಿರ್ಗಮಿಸಿದರು. ಇದನ್ನೂ ಓದಿ: ಪವರ್ ಶೇರಿಂಗ್ ಆ ರೀತಿ ಏನೂ ಇಲ್ಲ, ಸಿದ್ದರಾಮಯ್ಯರಿಗೆ ಅವರದ್ದೇ ವರ್ಚಸ್ಸಿದೆ: ಸುರ್ಜೇವಾಲ
ಇನ್ನೂ ಇದೇ ವೇಳೆ ಸಿಎಂಗೆ ಅಭಿಮಾನಿಗಳು ಜೈಕಾರ ಕೂಗಿದ್ದಾರೆ. ಸಿಎಂ ನೋಡಲು ಸಿಬ್ಬಂದಿ ದಂಡು ಸೇರಿದ್ದರು. ಸಿದ್ದರಾಮಯ್ಯ ಬೇಕು ಎಂದು ಅಭಿಮಾನಿಗಳು ಕೂಗಿದರು. ಆದರೆ ಸಿದ್ದರಾಮಯ್ಯ ಮಾತ್ರ ಏನೂ ಮಾತನಾಡದೇ ಅಲ್ಲಿಂದ ತೆರಳಿದ್ದಾರೆ. ಇದನ್ನೂ ಓದಿ: ಸರ್ಕಾರದ ಎಲ್ಲಾ ಸಾಧನೆಗಳ ಶ್ರೇಯ ಪ್ರತಿಯೊಬ್ಬ ಕನ್ನಡಿಗನಿಗೆ ಅರ್ಪಣೆ: ಸಿದ್ದರಾಮಯ್ಯ
