ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿರುವ ರೇಣುಕಾಸ್ವಾಮಿ ಕೊಲೆ ಆರೋಪಿ, ನಟ ದರ್ಶನ್‌ಗೆ (Darshan) ಸೊಳ್ಳೆ ಕಾಟ ಶುರುವಾಗಿದೆಯಂತೆ. ಸೊಳ್ಳೆ ಕಾಟದಿಂದ ಮುಕ್ತಿ ನೀಡುವಂತೆ ಅಲೋಕ್ ಕುಮಾರ್ (Alok Kumar) ಜೈಲು ಭೇಟಿ ವೇಳೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ ಹಿನ್ನೆಲೆ ಜೈಲಿಗೆ ಡಿಜಿಪಿ ಅಲೋಕ್ ಕುಮಾರ್ ದಿಢೀರ್ ಭೇಟಿ ನೀಡಿದ್ದರು. ಜೈಲಿನ ಎಲ್ಲಾ ಬ್ಯಾರಕ್‌ಗಳಿಗೆ ವಿಸಿಟ್ ಹಾಕಿದ್ದರು. ಈ ವೇಳೆ ಕ್ವಾರೆಂಟೈನ್ ಸೆಲ್‌ನಲ್ಲಿರುವ ದರ್ಶನ್ ಬ್ಯಾರಕ್‌ಗೂ ವಿಸಿಟ್ ಮಾಡಿದ್ದರು. ಅಲೋಕ್ ಕುಮಾರ್ ಕಂಡು ಸೊಳ್ಳೆ ಕಾಟಕ್ಕೆ ಮುಕ್ತಿ ನೀಡುವಂತೆ ದರ್ಶನ್ ಮನವಿ ಮಾಡಿಕೊಂಡರು. ಇದನ್ನೂ ಓದಿ: ಮದುವೆ ಮನೆಯಲ್ಲೂ ʻಡಿ ಬಾಸ್, ಡಿ ಬಾಸ್ʼ ಜೈಕಾರ – ಫ್ಯಾನ್ಸ್‌ಗೆ ಬುದ್ಧಿ ಹೇಳಿದ ವಿಜಯಲಕ್ಷ್ಮಿ
ಮನವಿ ಏನು?
ದರ್ಶನ್: ಸರ್.. ಸೊಳ್ಳೆ ಕಾಟ ಹೆಚ್ಚಾಗಿದೆ. ದಯಮಾಡಿ ಏನಾದ್ರು ಪರಿಹಾರ ಮಾಡಿ ಸರ್.
ಅಲೋಕ್ ಕುಮಾರ್: ಅದಕ್ಕೆ ನಾನೇನು ಮಾಡೋಕೆ ಆಗೋದಿಲ್ಲ. ಜೈಲಿನ ಮ್ಯಾನ್ಯುವಲ್‌ನಲ್ಲಿ ಇರೋದಷ್ಟೆ ಕೊಡೋಕೆ ಆಗೋದು. ಜೈಲಿನ ಮ್ಯಾನ್ಯುವಲ್ ಪ್ರಕಾರ ಏನಾದ್ರು ಇದ್ರೆ ಹೇಳಿ. ಸೊಳ್ಳೆ ಬಗ್ಗೆ ನಾವೇನು ಮಾಡೋಕೆ ಆಗುವುದಿಲ್ಲ ಎಂದಿದ್ದಾರೆ ಎನ್ನಲಾಗಿದೆ.

