ನಗೋಯಾ: ಏಷ್ಯನ್ ಗೇಮ್ಸ್ (Asian Games) 2026ರ ಪುರುಷರ 80 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಭಾರತದ ಅಂಕುಶ್ ಪಂಗಲ್(Ankush Pangal) ಚಿನ್ನ ಗೆದ್ದಿದ್ದಾರೆ. ಈ ಮೂಲಕ ಇಂದು ಒಂದೇ ದಿನ ಬಾಕ್ಸಿಂಗ್‌ನಲ್ಲಿ ಭಾರತ 3 ಚಿನ್ನದ ಪದಕವನ್ನು ಗೆದ್ದುಕೊಂಡತಾಗಿದೆ.
ಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಕಿಮ್ ಮಿನ್-ಸಿಯಾಂಗ್ ಅವರನ್ನು ಸೋಲಿಸಿ ಚಿನ್ನವನ್ನು ಗೆದ್ದುಕೊಂಡರು.
ಸೆಮಿಫೈನಲ್‌ನಲ್ಲಿ ಅದ್ಭುತ ಕಮ್‌ಬ್ಯಾಕ್ ಮಾಡಿದ ಅಂಕುಶ್, ಉಜ್ಬೇಕಿಸ್ತಾನದ ಹಾಲಿ 75 ಕೆಜಿ ವಿಶ್ವ ಚಾಂಪಿಯನ್ ಫಜ್ಲಿದ್ದೀನ್ ಎರ್ಕಿನ್‌ಬೋವ್ ಅವರನ್ನು 4-1 ಅಂತರದಿಂದ ಮಣಿಸಿ ಫೈನಲ್ ತಲುಪಿದ್ದರು. ಇದನ್ನೂ ಓದಿ: ಬಾಕ್ಸಿಂಗ್‌ನಲ್ಲಿ ಪರ್ವೀನ್ ಹೂಡಾಗೆ ಚಿನ್ನದ ಪದಕ

