ಬೆಂಗಳೂರು: ವಿಧಾನ ಪರಿಷತ್ ಉಪ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯೆ ಉಮಾಶ್ರೀ (Umashree) ಆಯ್ಕೆ ಬಹುತೇಕ ಖಚಿತವಾಗಿದೆ. ನಾಳೆ (ಆ.18) ನಡೆಯಲಿರೋ ಚುನಾವಣೆಗೆ ಉಮಾಶ್ರೀ ಅವರು ಮಾತ್ರ ನಾಮಪತ್ರ ಸಲ್ಲಿಕೆ ಮಾಡಿದ್ರು. ಬಿಜೆಪಿ-ಜೆಡಿಎಸ್ ಅಭ್ಯರ್ಥಿ (BJP-JDS Candidate) ಹಾಕದೇ ಇರಲು ನಿರ್ಧಾರ ಮಾಡಿದ್ದು ಉಮಾಶ್ರೀ ಅವರ ಆಯ್ಕೆ ಖಚಿತವಾಗಿದೆ.
ಸಿಎಂ ಡಿಕೆಶಿವಕುಮಾರ್ (DK Shivakumar), ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಸೇರಿ ಹಲವರ ಸಮ್ಮುಖದಲ್ಲಿ ಉಮಾಶ್ರೀ ನಾಮಪತ್ರ ಸಲ್ಲಿಕೆ ಮಾಡಿದ್ರು.

ಬಳಿಕ ಮಾತಾಡಿದ ಉಮಾಶ್ರೀ ಅವರು, ಪಕ್ಷದ ಹೇಳಿದ ಕೆಲಸ ಮಾಡಬೇಕು. ನನಗೆ ಉಪ ಸಭಾಪತಿ ಸ್ಥಾನ ಕೊಟ್ಟ ಹೈಕಮಾಂಡ್ ನಾಯಕರಿಗೂ, ರಾಜ್ಯ ನಾಯಕರಿಗೂ ಧನ್ಯವಾದ ಹೇಳ್ತೀನಿ. ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅನುಮೋದಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಹಿರಿಯರು ಆಶೀರ್ವಾದ ಮಾಡಿದ್ದಾರೆ. ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡ್ತೀನಿ ಎಂದರು.
ಕಾಂಗ್ರೆಸ್ (Congress) ಸಾಕಷ್ಟು ಮಹಿಳೆಯರಿಗೆ ಸ್ಥಾನ ಕೊಟ್ಟಿದೆ. ರಾಷ್ಟ್ರಪತಿ ಸೇರಿ ಅನೇಕ ಹುದ್ದೆ ಕೊಟ್ಟಿದ್ದಾರೆ. ಈಗ ಉಪ ಸಭಾಪತಿ ಮಾಡಿದ್ದಾರೆ. ಮುಂದೆ ಸಚಿವರನ್ನ ಮಾಡ್ತಾರೆ. ನಾನು ಮಂತ್ರಿ ಸ್ಥಾನಕ್ಕೆ ಪ್ರಯತ್ನ ಮಾಡಿದ್ದೆ. ಅದಕ್ಕಿಂತ ಇದು ಉನ್ನತ ಸ್ಥಾನ ಉಪ ಸಭಾಪತಿ ಸ್ಥಾನ ಕೊಟ್ಟಿದ್ದಾರೆ. ಪಕ್ಷದವರಿಗೆ ಧನ್ಯವಾದ ಹೇಳ್ತೀನಿ ಎಂದರು.
ಮಂಗಳವಾರ (ಆ.18) ಉಪ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಉಮಾಶ್ರೀ ಅವರು ಆಯ್ಕೆ ಆಗಲಿದ್ದಾರೆ.

