ChikkamagaluruDistrictsKarnatakaLatestMain Post

ರಾಜಕಾರಣಿಯಾಗೋಕು ಸೈ, ರೈತನಾಗೋಕು ಸೈ ಎಂದ ಶಾಸಕ ಸಿ.ಟಿ.ರವಿ

Advertisements

ಚಿಕ್ಕಮಗಳೂರು: ಮೆಕ್ಕೆಜೋಳದ ಹೊಲದಲ್ಲಿ ಉಳುಮೆ ಮಾಡುವ ಮೂಲಕ ನಾನು ರಾಜಕಾರಣಿಯಾಗುವುದಕ್ಕೂ ಸೈ, ರೈತನಾಗುವುದಕ್ಕೂ ಸೈ ಅಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ನಿರೂಪಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿಯ ಮಧ್ಯೆಯೂ ಸಿ.ಟಿ.ರವಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಕ್ರಿಯರಾಗಿದ್ದಾರೆ. ಈ ವೇಳೆ, ಜಿಲ್ಲೆಯ ಕಡೂರು ತಾಲೂಕಿನ ನೀರುಗುಂಡಿ ಗ್ರಾಮದಲ್ಲಿ ಕೆರೆ ವೀಕ್ಷಣೆಗೆ ಹೋದ ಸಂದರ್ಭದಲ್ಲಿ ರೈತರೊಬ್ಬರ ಮೆಕ್ಕೆಜೋಳದ ಹೊಲದಲ್ಲಿ ಕುಂಟೆ ಹೊಡೆದಿದ್ದಾರೆ. ಜೊತೆಗೆ ರೈತರ ಕುಶಾಲೋಪರಿ ಕೂಡ ವಿಚಾರಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಕಾಯಕ್ರಮಕ್ಕೆ ಮೋದಿ ಫೋಟೋ ಹಾಕದೆ ಜಾಹಿರಾತು – ಎಲ್ಲ ಬೋರ್ಡ್‍ಗಳಿಗೂ ಫೋಟೋ ಅಂಟಿಸಿದ ಬಿಜೆಪಿ ತಂಡ

ನಾನು ಕೂಡ ರೈತ ಕುಟುಂಬದಿಂದ ಬಂದವನು. ರೈತರ ಕಷ್ಟ-ನೋವು, ದುಮ್ಮಾಲುಗಳ ಅರಿವಿದೆ ಎಂದು ರೈತರ ಯೋಗಕ್ಷೇಮವನ್ನ ವಿಚಾರಿಸಿದ್ದಾರೆ. ಹೊಲದಲ್ಲಿ ಉಳುಮೆ ಮಾಡುತ್ತಿದ್ದ ರೈತರನ್ನು ಕಂಡು ಹಗ್ಗ ಪಡೆದುಕೊಂಡು ಉಳುಮೆ ಮಾಡಲು ಮುಂದಾದರು. ಕೈಯಲ್ಲಿ ಹಗ್ಗ ಹಿಡಿದ ಸಿ.ಟಿ.ರವಿ ಎತ್ತುಗಳನ್ನು ಗದರಿಸುತ್ತಾ ಉಳುಮೆ ಮಾಡುವ ರೀತಿಯನ್ನು ಕಂಡು ರೈತರು ಸಿ.ಟಿ.ರವಿಗೆ ಎಲ್ಲಾ ಕೆಲಸಗಳ ಅನುಭವವಿದೆ ಎಂದು ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ. ಇದನ್ನೂ ಓದಿ: ದಿಂಬಿನೊಂದಿಗೆ ಸೆಕ್ಸ್ ಮಾಡುವಂತೆ ಒತ್ತಾಯ – ರ‍್ಯಾಗಿಂಗ್ ಭಯಾನಕ ಸ್ಟೋರಿ ಬಿಚ್ಚಿಟ್ಟ ಜ್ಯೂನಿಯರ್

ಇತ್ತೀಚೆಗಷ್ಟೇ ಸಿ.ಟಿ.ರವಿ, ತಮ್ಮ ಫಾರ್ಮ್ ಹೌಸ್‍ನಲ್ಲಿ ಟ್ರ್ಯಾಕ್ಟರ್ ಚಲಾಯಿಸಿ ಉಳುಮೆ ಮಾಡಿದ್ದರು. ತಾಲೂಕಿನ ಗ್ರಾಮೀಣ ಭಾಗದಲ್ಲಿ ಹೊಲದಲ್ಲಿ ಉಳುಮೆ ಮಾಡುತ್ತಿದ್ದ ರೈತರ ಕಂಡು ಅವರಿಂದಲೂ ಎತ್ತುಗಳ ಪಡೆದು ಹೊಲದಲ್ಲಿ ನೇಗಿಲು ಉಳಿದ್ದರು. ಸಿ.ಟಿ.ರವಿಯನ್ನು ಕಂಡ ರೈತರು ಎಷ್ಟೇ ಆದರೂ ಕಲಿತಿದ್ದು ಎಲ್ಲಿಗೆ ಹೋಗುತ್ತದೆ ಎಂದು ಮಾತನಾಡಿಕೊಳ್ಳುತ್ತಿದ್ದರು.

Live Tv

Leave a Reply

Your email address will not be published.

Back to top button