ಕೊಲ್ಕತ್ತಾ: ಟಿಎಂಸಿ ಬಂಡಾಯ ನಾಯಕ ಋತಬ್ರತ ಬ್ಯಾನರ್ಜಿ (Ritabrata Banerjee) ಅವರನ್ನ ವಿರೋಧ ಪಕ್ಷದ ನಾಯಕನ್ನಾಗಿ ನೇಮಿಸಿದ ವಿಧಾನಸಭಾ ಸ್ಪೀಕರ್ ನಿರ್ಧಾರಕ್ಕೆ ತಡೆ ನೀಡಲು ಕೊಲ್ಕತ್ತಾ ಹೈಕೋರ್ಟ್ ನಿರಾಕರಿಸಿದೆ. ನ್ಯಾಯಲಯದ ಈ ಆದೇಶ ಮಾಜಿ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಬಣಕ್ಕೆ ತೀವ್ರ ಹಿನ್ನಡೆ ಉಂಟುಮಾಡಿದೆ.
ಸ್ಪೀಕರ್ ಆದೇಶಕ್ಕೆ ತಡೆ ನೀಡುವಂತೆ ಕೋರಿ ಮಮತಾ ಬ್ಯಾನರ್ಜಿ ಕೊಲ್ಕತ್ತಾ ಹೈಕೋರ್ಟ್‌ಗೆ (Calcutta High Court) ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ರಾವ್, ತುರ್ತು ಮಧ್ಯಂತರ ಆದೇಶ ಹೊರಡಿಸಲು ನಿರಾಕರಿಸಿದ್ದಾರೆ. ಸ್ಪೀಕರ್ ನಿರ್ಧಾರದ ವಿರುದ್ಧ ಅರ್ಜಿ ಸಲ್ಲಿಸಿದವರು ಮೂರು ವಾರಗಳ ಅಫಿಡೆವಿಟ್ ಸಲ್ಲಿಸಲು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಟಿಎಂಸಿ, ಉದ್ಧವ್ ಶಿವಸೇನೆ, ಎಸ್ಪಿ ಪಕ್ಷಗಳಲ್ಲಿ ಒಡಕು – ಇತ್ತ `ನಾರಿಶಕ್ತಿ ಬಿಲ್’ ಮಂಡಿಸಲು ಮೋದಿ ಸರ್ಕಾರ ಪ್ಲ್ಯಾನ್

ಅಲ್ಲದೇ ಅರ್ಜಿದಾರರು ಇದಕ್ಕೆ ಉತ್ತರ ಸಲ್ಲಿಸಲು ಎರಡು ವಾರಗಳ ಅವಕಾಶವಿದೆ. ಮುಂದಿನ ವಿಚಾರಣೆ ಜುಲೈ 28 ರಂದು ನಡೆಯಲಿದೆ. ಮುಂದಿನ ಆದೇಶವರೆಗೂ ಸ್ಪೀಕರ್ ನಿರ್ಧಾರವು ಜಾರಿಯಲ್ಲಿಯೇ ಇರುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಉದ್ಧವ್ ಬಣದ ಸಂಸದರಿಗೆ 50 ಕೋಟಿ ಆಫರ್, 15 ಕೋಟಿ ಅಡ್ವಾನ್ಸ್: ಸಂಜಯ್ ರಾವತ್ ಬಾಂಬ್
ಟಿಎಂಸಿ ಬಂಡಾಯ ಶಾಸಕರಾದ ಸಂದೀಪನ್ ಸಹಾ ಸೇರಿದಂತೆ 59 ಶಾಸಕರ ವಿಧಾನಸಭಾ ಸ್ಪೀಕರ್ ರತೀಂದ್ರ ಬೋಸ್ ಭೇಟಿ ಮಾಡಿ ಋತಬ್ರತ ಬ್ಯಾನರ್ಜಿ ವಿಪಕ್ಷ ನಾಯಕಿಯನ್ನಾಗಿ ನೇಮಿಸಲು ಮನವಿ ಮಾಡಿದ್ದರು ಮನವಿಯಂತೆ ಋತಬ್ರತ ಬ್ಯಾನರ್ಜಿ ಅವರನ್ನು ನೇಮಕ ಮಾಡಲಾಗಿತ್ತು.
