– ಅನುಭವಿಸಿದವರು ಅಧಿಕಾರ ತ್ಯಾಗದ ಮನಸ್ಸು ಮಾಡಲಿ; ಒತ್ತಾಯ
ಮೈಸೂರು: ಸಿದ್ದರಾಮಯ್ಯ (Siddaramaiah) ಸಂಪುಟದಲ್ಲಿ ಸಚಿವರಾಗಿದ್ದವರು ಈಗ ಅಧಿಕಾರ ತ್ಯಾಗದ ಮನಸ್ಸು ಮಾಡಲಿ ಎಂದು ಶಾಸಕ ತನ್ವೀರ್ ಸೇಠ್ (Tanveer Sait) ಒತಯ್ತಾಯಿಸಿದ್ದಾರೆ.
ಮೈಸೂರಿನಲ್ಲಿ ʻಪಬ್ಲಿಕ್ ಟಿವಿʼ (PUBLiC TV) ಜೊತೆ ಮಾತನಾಡಿರುವ ತನ್ವೀರ್ ಸೇಠ್, ಹೊಸಬರಿಗೆ ಅಧಿಕಾರ ಸಿಗುವಂತೆ ಆಗಲಿ ಎಂದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ, ಖರ್ಗೆ ಅಂಥವರ ಆಶೀರ್ವಾದ ಇಲ್ಲದೇ ಕಾಂಗ್ರೆಸ್ ಪಕ್ಷ ಬೆಳೆಯೋಕೆ ಸಾಧ್ಯನೇ ಇಲ್ಲ: ಬಾಲಕೃಷ್ಣ

ನನಗೆ ಈ ಬಾರಿ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಕಳೆದ ಬಾರಿಯೆ ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ಕಾರಣಾಂತರದಿಂದ ಸಿಕ್ಕಿರಲಿಲ್ಲ. ಈಗ ಮತ್ತೆ ಸಚಿವ ಆಗುವ ಅವಕಾಶ ಬಂದಿದೆ. ವರಿಷ್ಠರು ನನ್ನನ್ನು ಪರಿಗಣಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ನಾನು ಯಾವತ್ತೂ ಸಿದ್ದರಾಮಯ್ಯ ಅವರ ವಿರೋಧಿ ಬಣದಲ್ಲಿ ಇರಲಿಲ್ಲ. ಯಾರಿಗೂ ವಿರೋಧ ಇರಲಿಲ್ಲ. ಏನೇನೋ ಕಾರಣಕ್ಕೆ ತಪ್ಪಿತು ಅಷ್ಟೆ. ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟುಕೊಟ್ಟರು ಅಂತಾ ಈಗ ನಾನು ಕೊರಗಿ ಕೂರಬೇಕಿತ್ತಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆಗೆ ಎಂ.ಸಿ ಸುಧಾಕರ್ ಕಣ್ಣೀರು
