Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಯತ್ನಾಳ್ ವಿರುದ್ಧ ಹೈಕಮಾಂಡ್‌ಗೆ ದೂರು – ಬಿಜೆಪಿ ಸಭೆಯ ನಿರ್ಣಯಗಳೇನು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಯತ್ನಾಳ್ ವಿರುದ್ಧ ಹೈಕಮಾಂಡ್‌ಗೆ ದೂರು – ಬಿಜೆಪಿ ಸಭೆಯ ನಿರ್ಣಯಗಳೇನು?

Bengaluru City

ಯತ್ನಾಳ್ ವಿರುದ್ಧ ಹೈಕಮಾಂಡ್‌ಗೆ ದೂರು – ಬಿಜೆಪಿ ಸಭೆಯ ನಿರ್ಣಯಗಳೇನು?

Public TV
Last updated: December 28, 2023 7:23 pm
Public TV
Share
3 Min Read
BJP 4
SHARE

ಬೆಂಗಳೂರು: ರಾಜ್ಯ ಬಿಜೆಪಿ ಸಾರಥ್ಯ ವಹಿಸಿಕೊಂಡಿರುವ ವಿಜಯೇಂದ್ರ (BY Vijayendra) ನೇತೃತ್ವದ ತಂಡಕ್ಕೆ ಹಿರಿಯ ಬಿಜೆಪಿ (BJP) ನಾಯಕರು ಶುಭಕೋರಿ ಮಾರ್ಗದರ್ಶನ ಮಾಡಿ ಒಗ್ಗಟ್ಟಿನ ಮಂತ್ರ ಬೋಧಿಸಿದರು. ಬಿಜೆಪಿಗೆ ಹೊಸ ನಾಯಕತ್ವ ಸಿಕ್ಕ ಹಿನ್ನೆಲೆ ಮತ್ತು ಮುಂಬರುವ ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಇಂದು ರಾಜ್ಯ ಬಿಜೆಪಿ ಹಿರಿಯ ನಾಯಕರ ಸಭೆ ನಡೆಸಲಾಯಿತು.

ಬೆಂಗಳೂರು (Bengaluru) ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಿಜಯೇಂದ್ರ ನೇತೃತ್ವದ ತಂಡಕ್ಕೆ ಹಿರಿಯ ನಾಯಕರು ಒಂದಷ್ಟು ಸಲಹೆ ಸೂಚನೆಗಳ ಮೂಲಕ ಮಾರ್ಗದರ್ಶನ ನೀಡಿದರು. ಹೊಂದಾಣಿಕೆ, ಸಮನ್ವಯತೆ, ಪರಸ್ಪರರ ಸಹಕಾರ ತತ್ವದಡಿ ಒಗ್ಗಟ್ಟಿನಿಂದ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವಂತೆ ವಿಜಯೇಂದ್ರಗೆ ಹಿರಿಯ ನಾಯಕರು ಕಿವಿ ಮಾತು ಹೇಳಿದ್ದಾರೆ. ಇದನ್ನೂ ಓದಿ: ಚುನಾವಣಾ ರಣತಂತ್ರದ ಮಾರ್ಗಸೂಚಿ ಬಗ್ಗೆ ಚರ್ಚೆಯಾಗಿದೆ: ಸಿ.ಟಿ.ರವಿ

ಹಿರಿಯರಾದ ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಬೊಮ್ಮಾಯಿ, ಸಂಸದ ಡಿವಿ ಸದಾನಂದ ಗೌಡ, ಮಾಜಿ ಡಿಸಿಎಂ ಈಶ್ವರಪ್ಪ, ಮಾಜಿ ಸಚಿವ ಕಾರಜೋಳ, ಮಾಜಿ ಸಚಿವ ಶ್ರೀರಾಮುಲು, ಮಾಜಿ ಸ್ಪೀಕರ್ ಕೆಜಿ ಬೋಪಯ್ಯ, ಮಾಜಿ ಸ್ಪೀಕರ್ ಕಾಗೇರಿ, ಮಾಜಿ ಸಚಿವ ಸಿಟಿ ರವಿ, ಶಾಸಕ ಅಶ್ವಥ್ ನಾರಾಯಣ್ ಮೊದಲಾದ ಹಿರಿಯರು ಪ್ರಮುಖರ ಸಭೆಯಲ್ಲಿ ಪಾಲ್ಗೊಂಡು ಹೊಸ ತಂಡಕ್ಕೆ ಉತ್ಸಾಹ ತುಂಬಿ ಬೆಂಬಲ ಸೂಚಿಸಿದರು. ಸಭೆಯಲ್ಲಿ ಚುನಾವಣಾ ತಂತ್ರಗಾರಿಕೆ, ಕಾಂಗ್ರೆಸ್ ವೈಫಲ್ಯಗಳ ವಿರುದ್ಧ ಪರಿಣಾಮಕಾರಿ ಹೋರಾಟ, ರಾಜ್ಯ ಪ್ರವಾಸ, ಪಕ್ಷ ಸಂಘಟನೆ, ಆಂತರಿಕ ಸಂಘರ್ಷಕ್ಕೆ ತೆರೆ ಎಳೆಯುವುದು ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು. ಇದನ್ನೂ ಓದಿ: ಅಂಗಡಿ, ಮಾಲ್‌ಗಳಲ್ಲಿ ಕನ್ನಡ ಭಾಷೆಯಲ್ಲಿ ನಾಮಫಲಕ – ಶೀಘ್ರವೇ ಸುಗ್ರೀವಾಜ್ಞೆ

ಹೈಕಮಾಂಡ್‌ಗೆ ದೂರು:
ಯಡಿಯೂರಪ್ಪ ಕಾಲದಲ್ಲಿ ಕೋವಿಡ್ ಅಕ್ರಮ ನಡೆದಿದೆ ಎಂದ ಶಾಸಕ ಯತ್ನಾಳ್ (Basangouda Patil Yatnal) ವಿರುದ್ಧ ಹೈಕಮಾಂಡ್‌ಗೆ (High Command) ದೂರು ಕೊಡಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಚಾರ ಪ್ರಸ್ತಾಪ ಮಾಡಿದ ಸಂಸದ ಡಿವಿಎಸ್, ವರಿಷ್ಠರು ಯತ್ನಾಳ್ ಅವರನ್ನು ಕರೆದು ಮಾತನಾಡಬೇಕು. ಪಕ್ಷಕ್ಕೆ ಮುಜುಗರ ಆಗುತ್ತಿದೆ. ಪದೇಪದೇ ಮಾತನಾಡುವುದು ಇತ್ಯರ್ಥ ಆಗಬೇಕು ಎಂದು ಒತ್ತಾಯಿಸಿದರು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಇಲ್ಲವೇ ಬಹಿರಂಗ ಹೇಳಿಕೆಗೆ ಫುಲ್ ಸ್ಟಾಪ್ ಹಾಕಿಸಬೇಕು. ವರಿಷ್ಠರ ಗಮನಕ್ಕೆ ಇದನ್ನು ತಂದು ವರಿಷ್ಠರೇ ಕರೆದು ಮಾತನಾಡುವಂತೆ ಮಾಡಬೇಕು ಎಂದು ಸಭೆಯಲ್ಲಿ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಅವರ ದನಿಗೆ ಮತ್ತಷ್ಟು ಸದಸ್ಯರು ಪ್ರಸ್ತಾಪಿಸಿದರು. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ತಲುಪುವಂತೆ ಮಾಡಲು ಇಲಾಖೆ ವತಿಯಿಂದ ವಿಶೇಷ ಶಿಬಿರ: ಪ್ರಿಯಾಂಕ್ ಖರ್ಗೆ

ಶಾಸಕ ಯತ್ನಾಳ್ ಹೇಳಿಕೆ ಪಕ್ಷದ ಇಮೇಜ್‌ಗೆ ಭಾರೀ ಧಕ್ಕೆ ತಂದಿದೆ. ಪಕ್ಷದ ನಾಯಕರನ್ನು, ಹಿಂದಿನ ಬಿಜೆಪಿ ಸರ್ಕಾರಕ್ಕೆ ಯತ್ನಾಳ್ ಅಪಮಾನ ಮಾಡಿದ್ದಾರೆ. ಕಾಂಗ್ರೆಸ್‌ಗೆ ಪಕ್ಷ ಆಹಾರ ಆಗುವಂತೆ ಮಾಡಿದ್ದಾರೆ ಎಂದು ಸಭೆಯಲ್ಲಿ ಯತ್ನಾಳ್ ಹೇಳಿಕೆ ಬಗ್ಗೆ ಹಿರಿಯರು ಚರ್ಚೆ ನಡೆಸಿದರು. ಯತ್ನಾಳ್ ಹೇಳಿಕೆಗಳಿಗೆ ಬ್ರೇಕ್ ಹಾಕಲು ಹೈಕಮಾಂಡ್ ಮೊರೆ ಹೋಗುವುದು ಒಳಿತು ಎನ್ನುವ ತೀರ್ಮಾನಕ್ಕೆ ಬರಲಾಯಿತು. ಶಿಸ್ತುಕ್ರಮ ಕೈಗೊಳ್ಳುವುದು ಬಿಡುವುದು ಹೈಕಮಾಂಡ್‌ಗೆ ಬಿಟ್ಟಿದ್ದು. ಆದರೆ ಯತ್ನಾಳ್ ಇನ್ನುಮುಂದೆ ಆ ರೀತಿಯ ಹೇಳಿಕೆಗಳನ್ನು ಕೊಡದಂತೆ ಹೈಕಮಾಂಡ್ ಕ್ರಮವಹಿಸಲಿ ಎಂಬ ಮನವಿ ಸಲ್ಲಿಸುವ ಬಗ್ಗೆ ತೀರ್ಮಾನಿಸಲಾಯ್ತು. ಶಾಸಕ ಯತ್ನಾಳ್ ಹೇಳಿಕೆ ಸಭೆಯಲ್ಲಿದ್ದ ಡಿವಿಎಸ್, ರೇಣುಕಾಚಾರ್ಯ, ಮುರುಗೇಶ್ ನಿರಾಣಿ ಖಂಡನೆ ವ್ಯಕ್ತಪಡಿಸಿದರು. ಸಭೆಯಲ್ಲಿ ಸದಸ್ಯರ ಚರ್ಚೆ, ಅಭಿಪ್ರಾಯಗಳಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಹಮತ ವ್ಯಕ್ತಪಡಿಸಿದರು. ಇದನ್ನೂ ಓದಿ: ದೇಶದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕೊಡುವುದು ಕಾಂಗ್ರೆಸ್ ಪಕ್ಷ ಮಾತ್ರ: ಸಿದ್ದರಾಮಯ್ಯ

ಇದೇವೇಳೆ ಸಂಸದ ಡಿವಿಎಸ್ ಅವರು ಹೊಸ ಪದಾಧಿಕಾರಿಗಳ ನೇಮಕ ಬಗ್ಗೆ ಹಿರಿಯ ಬಿಜೆಪಿ ನಾಯಕರ ಗಮನಕ್ಕೆ ತಂದಿಲ್ಲ ಎಂದು ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ. ಈಗಲಾದರೂ ಸಭೆ ಕರೆದು ಎಲ್ಲರ ಗಮನಕ್ಕೆ ತಂದಿರೋದು ಉತ್ತಮ ಬೆಳವಣಿಗೆ. ಹೊಸ ತಂಡಕ್ಕೆ ಸದಾ ಬೆಂಬಲ ಕೊಡುವುದಾಗಿ ಡಿವಿಎಸ್ ಹೇಳಿದ್ದಾರೆ ಎನ್ನಲಾಗಿದೆ. ಇನ್ನು ವಿಧಾನಸಭೆ ಚುನಾವಣೆಯಲ್ಲಿ ಸೋತವರ ಸಭೆ ನಡೆಸಿ ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸಭೆಯಲ್ಲಿ ಕೆಲವರು ರಾಜ್ಯಾಧ್ಯಕ್ಷರಿಗೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಇಂಗ್ಲಿಷ್ ಬೋರ್ಡ್ ಹರಿದು, ಕಲ್ಲು ತೂರಾಟ ಮಾಡಿ ಆಕ್ರೋಶ- ಕರವೇ ಕಾರ್ಯಕರ್ತರ ಮೇಲೆ FIR

TAGGED:Basangouda Patil YatnalbengalurubjpBY VijayendraHigh CommandLok Sabha electionಬಸನಗೌಡ ಪಾಟೀಲ್ ಯತ್ನಾಳ್ಬಿಜೆಪಿಬಿವೈ ವಿಜಯೇಂದ್ರಬೆಂಗಳೂರುಹೈಕಮಾಂಡ್
Share This Article
Facebook Whatsapp Whatsapp Telegram

Cinema news

darshan 1
ಜೈಲಿನಲ್ಲಿ ಅಮಾನವೀಯ ವರ್ತನೆ, ಸಹಕೈದಿಗಳಿಂದ ಬೆದರಿಕೆ- ವೃತ್ತಿಜೀವನಕ್ಕೆ ಮರಣಗಂಟೆ: ಸುಪ್ರೀಂನಲ್ಲಿ ದರ್ಶನ್ ಅಳಲು
Bengaluru City Cinema Court Latest Main Post
Sara Govindu
ನಿರ್ಮಾಪಕ ಸಾ.ರಾ ಗೋವಿಂದ್ ವಿರುದ್ಧ ಎಫ್‌ಐಆರ್‌
Bengaluru City Crime Districts Karnataka Latest Sandalwood Top Stories
Rishab Shetty
ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ – `ಕಾಂತಾರ’ ಮತ್ತೊಂದು ಅಧ್ಯಾಯದ ಬಗ್ಗೆ ಚರ್ಚಿಸಿದ್ರಾ ಶೆಟ್ರು?
Cinema Latest Main Post National Sandalwood
chetan 13 2
ಡಾ.ರಾಜ್ ಸಮಾಧಿಯ ಪೋಸ್ಟ್ ಪ್ರಶ್ನಿಸಿ ಮನೆಗೆ ಮುತ್ತಿಗೆ ಹಾಕಿದ್ದವರ ವಿರುದ್ಧ ಚೇತನ್ ದೂರು
Bengaluru City Cinema Districts Karnataka Latest Sandalwood Top Stories

You Might Also Like

Sudeep 2
Districts

ಡಿಕೆಶಿ ಲ್ಯಾಂಡ್‌ ಆಗಬೇಕಿದ್ದ ಸ್ಥಳದಲ್ಲಿ ಸುದೀಪ್ ಹೆಲಿಕಾಪ್ಟರ್ ಲ್ಯಾಂಡಿಗ್‌ – ಅಧಿಕಾರಿಗಳಲ್ಲಿ ಕೆಲಕಾಲ ಆತಂಕ

Public TV
By Public TV
5 minutes ago
BWSSB Bengaluru Water Board
Bengaluru City

ಜಲಮಂಡಳಿಯ ಒನ್ ಟೈಮ್ ಸೆಟಲ್ಮೆಂಟ್ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ

Public TV
By Public TV
6 minutes ago
Jeevaraj 3
Chikkamagaluru

ಶೃಂಗೇರಿ | ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ಮೇಲುಗೈ – ಶಾರದಾಂಬೆ ದರ್ಶನ ಪಡೆದ ಅಭ್ಯರ್ಥಿ ಜೀವರಾಜ್

Public TV
By Public TV
27 minutes ago
Air Arabia flight
Latest

ಫ್ಲೈಟ್‌ನಲ್ಲಿ 2 ಬಾರಿ ವಾಂತಿ – ಚೆನ್ನೈನಲ್ಲಿ ಚಲಿಸುತ್ತಿದ್ದ ವಿಮಾನದಿಂದ ಹೊರಕ್ಕೆ ಜಿಗಿದ ಪ್ರಯಾಣಿಕ

Public TV
By Public TV
43 minutes ago
DK Shivakumar TB Dam
Bellary

ಟಿಬಿ ಡ್ಯಾಂ ಮುಂದಿನ 50 ವರ್ಷ ಸುಭದ್ರ, ಕ್ರಸ್ಟ್ ಗೇಟ್‌ಗಳ ಅಳವಡಿಕೆ ಪೂರ್ಣ- ಮೇ 15ಕ್ಕೆ ಲೋಕಾರ್ಪಣೆ: ಡಿಕೆಶಿ

Public TV
By Public TV
44 minutes ago
Preity Zinta Invites PBKS Fan Injured
Cricket

ಸಿಕ್ಸರ್‌ನಿಂದ ಗಾಯಗೊಂಡಿದ್ದ ಅಭಿಮಾನಿಗೆ ವಿವಿಐಪಿ ಟಿಕೆಟ್ ನೀಡಿದ ಪ್ರೀತಿ ಜಿಂಟಾ

Public TV
By Public TV
49 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?