ಬೆಂಗಳೂರು: ಬೆಂಗಳೂರಿನಿಂದ ಬಿಹಾರಕ್ಕೆ ತೆರಳುತ್ತಿದ್ದ ರೈಲಿನಲ್ಲಿ (Bengaluru, Bihar Train) ಭಾರೀ ಪ್ರಮಾದವೊಂದು ತಪ್ಪಿದ್ದು, ನೂರಾರು ಜೀವಗಳು ಪ್ರಾಣಾಪಾಯದಿಂದ ಪಾರಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೇ 23 ರಂದು ತಡರಾತ್ರಿ 1 ಗಂಟೆ ಸುಮಾರಿಗೆ ಬೆಂಗಳೂರಿನ ಎಸ್ಎಂವಿಟಿ ನಿಲ್ದಾಣದಿಂದ (Bengaluru SMVT Station) ಬಿಹಾರಕ್ಕೆ ತೆರಳುತ್ತಿದ್ದ ದಾನಪೂರ್ ವಿಶೇಷ ರೈಲು ( ಸಂಖ್ಯೆ 03252) ಚಲಿಸುತ್ತಿದ್ದಾಗಲೇ ಜಾಯಿಂಟ್ ವೀಲ್ ಕಟ್ಟಾಗಿತ್ತು. ಮೇ 24 ರಂದು ಆಂಧ್ರ ಪ್ರದೇಶದ ವಿಜಯವಾಡ ನಿಲ್ದಾಣ ದಾಟಿ 30 ಕಿಮೀ ದೂರದಲ್ಲಿ 100 ಕಿಮೀ ವೇಗದಲ್ಲಿ ಚಲಿಸುತ್ತಿದ್ದಾಗ ಜಾಯಿಂಟ್ ವೀಲ್ ಕಟ್ಟಾಗಿ ಪ್ರಯಾಣಿಕರಿದ್ದ ಬೋಗಿ ಹಾಗೂ ಇಂಜಿನ್ ಇದ್ದ ಬೋಗಿ ಬೇರ್ಪಟ್ಟಿತ್ತು. ಇದನ್ನೂ ಓದಿ: ಮೇ 27ರಂದು ಬೆಂಗಳೂರಿನಲ್ಲಿ ದೇಶದ ಪ್ರಥಮ ʻರಾಷ್ಟ್ರೀಯ ಎಐ & ಡಿಜಿಟಲ್ ವಾಟರ್ ಶೃಂಗಸಭೆ 2026′

ಅದೃಷ್ಟವಶಾತ್ ರೈಲು ನಿಯಂತ್ರಣ ಕಳೆದುಕೊಳ್ಳದ ಕಾರಣ ಹಾಗೂ ಲೋಕೋಪೈಲಟ್‌ನ ಸಮಯ ಪ್ರಜ್ಞೆ ಮುಂದಾಗುವ ಅನಾಹುತ ತಪ್ಪಿಸಿತ್ತು. ಘಟನೆ ಬಳಿಕ 4 ಘಂಟೆಗಳ ಕಾಲ ರೈಲು ಸಂಚಾರ ವಿಳಂಬಗೊಂಡಿತ್ತು.
ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ಆದ್ರೆ ಈ ಬಗ್ಗೆ ಈವರೆಗೆ ಬೆಂಗಳೂರು ವಿಭಾಗದ ರೈಲ್ವೆ ಅಧಿಕಾರಿಗಳು ಘಟನೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಇದನ್ನೂ ಓದಿ: ಈ ಬಾರಿ ನನಗೆ ಮಂತ್ರಿ ಸ್ಥಾನ ಕೊಡಬೇಕು – ಪುಟ್ಟರಂಗಶೆಟ್ಟಿ ಬಿಗಿಪಟ್ಟು
