ಬೆಂಗಳೂರು: ಈ ಬಾರಿ ನನಗೆ ಮಂತ್ರಿ ಸ್ಥಾನ ಕೊಡಬೇಕು ಎಂದು ಚಾಮರಾಜನಗರ (Chamarajanagar) ಶಾಸಕ ಪುಟ್ಟರಂಗಶೆಟ್ಟಿ (Puttarangashetty) ಬಿಗಿಪಟ್ಟು ಹಿಡಿದಿದ್ದಾರೆ.
`ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಹೈಕಮಾಂಡ್‌ಗೆ (Congress High Command) ಯಾರಿಗೆ ಪಟ್ಟಕಟ್ಟಿದರೆ ಉತ್ತಮ ಎಂದು ಗೊತ್ತಿದೆ. ಖರ್ಗೆ ಅವರು ಕರ್ನಾಟಕದವರೇ ಅವರಿಗೆ ಗೊತ್ತಿಲ್ವಾ? ರಾಹುಲ್ ಗಾಂಧಿ ಎಲ್ಲ ಮಾಹಿತಿ ತರಿಸಿಕೊಂಡಿದ್ದಾರೆ. ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೈಕಮಾಂಡ್‌ಗೆ ಗೊತ್ತಿದೆ. ಹೀಗಾಗಿ ನಾನು ಸಂಪುಟ ಪುನರ್ ರಚನೆಯ ನಿರೀಕ್ಷೆಯಲ್ಲಿದ್ದೇನೆ. ಕಳೆದ ಬಾರಿ ನನಗೆ ಕಡೆಯ ಕ್ಷಣದಲ್ಲಿ ಮಂತ್ರಿ ಸ್ಥಾನ ತಪ್ಪಿದೆ. ಈ ಬಾರಿ ಅವಕಾಶ ಕೊಡಬೇಕು ಎಂದು ಮನವಿ ಮಾಡಿದ್ದೇನೆ. ಇಂದು ಸಿಎಂ ಭೇಟಿ ಮಾಡುತ್ತೇನೆ, ಬಳಿಕ ಖರ್ಗೆ ಅವರನ್ನು ಭೇಟಿ ಮಾಡಿ ಮನವಿ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕ್ಲೈಮ್ಯಾಕ್ಸ್ ಹಂತಕ್ಕೆ ಕುರ್ಚಿ ಕದನ – ದೆಹಲಿ ಅಂಗಳಕ್ಕೆ ಸಿಎಂ, ಡಿಸಿಎಂ ಬಣ, ಇಂದು ಸಂಧಾನ ಫಿಕ್ಸ್?
ಸಿಎಂ ಕುರ್ಚಿ ಫೈಟ್ ದೆಹಲಿ ಅಂಗಳಕ್ಕೆ ಶಿಫ್ಟ್ ಆಗಿದೆ. ಹೈಕಮಾಂಡ್ ಅಂಗಳದಲ್ಲಿ ಅಸಲಿ ಆಟ ಶುರುವಾಗಿದೆ. ಸಿಎಂ, ಡಿಸಿಎಂಗೆ ಸಡನ್ ಬುಲಾವ್ ಕೊಟ್ಟಿದ್ದು ಯಾಕೆ? ನಿಜವಾಗಿಯೂ ನಾಯಕತ್ವ ಬದಲಾವಣೆ ಆಗುತ್ತಾ? ಕುರ್ಚಿ ಕಾಳಗಕ್ಕೆ ಹೈಕಮಾಂಡ್ ಮದ್ದು ಅರೆಯುತ್ತಾ? ಇನ್ಯಾವುದೋ ವಿಚಾರದ ಚರ್ಚೆಗೆ ದೆಹಲಿ ನಾಯಕರು ಬುಲಾವ್ ಕೊಟ್ಟಿದ್ದಾರಾ ಹೀಗೆ ಹತ್ತು ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ.
ದೆಹಲಿಗೆ ರಾಜ್ಯ ಕಾಂಗ್ರೆಸ್ ನಾಯಕರು ಲಗ್ಗೆ ಇಟ್ಟು ಆಗಿದೆ. ಇನ್ನೂ ಕೆಲವು ಸಚಿವರು, ಶಾಸಕರು ದೆಹಲಿ ಫ್ಲೈಟ್ ಏರಿದ್ದಾರೆ. ಮತ್ತಷ್ಟು ಜನರು ರಾಷ್ಟ್ರ ರಾಜಧಾನಿಗೆ ಹೋಗುವವರು ಇದ್ದಾರೆ. ಕಾಂಗ್ರೆಸ್‌ನಲ್ಲಿನ ಸಡನ್ ಬೆಣವಣಿಗೆ ನೂರೆಂಟು ಅನುಮಾನಗಳನ್ನು ಮೂಡಿಸುತ್ತಿದೆ. ಇಂದು ರಾಹುಲ್ ಗಾಂಧಿ ಸಭೆ ಕುತೂಹಲ ಕೆರಳಿಸಿದ್ದು, ಹೈಕಮಾಂಡ್ ಕೈಗೊಳ್ಳೋ ನಿರ್ಧಾರ ಕುತೂಹಲ ಮೂಡಿಸಿದೆ.ಇದನ್ನೂ ಓದಿ: ತಮಿಳುನಾಡಿನ 14 ಲಕ್ಷ ರೈತರ ಸಾಲ ಮನ್ನಾ ಘೋಷಿಸಿದ ವಿಜಯ್
ಹೈಕಮಾಂಡ್ ಮುಂದಿನ ಆಯ್ಕೆಗಳು?
ರಾಜ್ಯದಲ್ಲಿ ನಾಯಕತ್ವ ವಿವಾದ ಬಗೆಹರಿಸಬಹುದು
ಸಿಎಂ ಸೇಫ್ ಆಗಬಹುದು, ಇಲ್ಲ ಡೆಡ್‌ಲೈನ್ ನೀಡಬಹುದು
ಡಿಕೆಗೆ ಅದೃಷ್ಠ ಒಲಿಯಬಹುದು, ಇಲ್ಲ ನಿರಾಸೆ ಆಗಬಹುದು
ಸಿಎಂಗೆ ರಾಷ್ಟç ರಾಜಕಾರಣಕ್ಕೆ ಆಹ್ವಾನ ನೀಡಬಹುದು
ರಾಜ್ಯಸಭೆ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚಿಸಬಹುದು
ಸಂಪುಟ ಪುನಾರಚನೆಗೆ ಒಪ್ಪಿಗೆ ನೀಡಬಹುದು
ದೆಹಲಿ ಅಂಗಳದಲ್ಲಿ ಕಾಂಗ್ರೆಸ್ ಕುರ್ಚಿ ಆಟ ನಡೆಯುತ್ತಿದೆ. ಇದಕ್ಕೆ ಪುಷ್ಟಿ ಎಂಬಂತೆ ಕಳೆದ 2 ದಿನಗಳ ಹಿಂದಷ್ಟೇ ಕಾಂಗ್ರೆಸ್‌ನ ತ್ರಿಮೂರ್ತಿಗಳು ಮಹತ್ವದ ಸಭೆ ನಡೆಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಉಸ್ತುವಾರಿ ವೇಣುಗೋಪಾಲ್, ರಾಹುಲ್ ಗಾಂಧಿ ಪ್ರತ್ಯೇಕ ಸಭೆ ನಡೆಸಿದ್ದಾರೆ. ಈ ಸಭೆಯ ಬಳಿಕವೇ ಸಿಎಂ, ಡಿಸಿಎಂಗೆ ತುರ್ತು ಬುಲಾವ್ ಬಂದಿರಬಹುದು ಎನ್ನಲಾಗ್ತಿದೆ. ಈ ಮಧ್ಯೆ ಸಚಿವ ಸತೀಶ್ ಜಾರಕಿಹೊಳಿ ಕುರ್ಚಿ ಫೈಟ್‌ಗೆ ಕ್ಲೈಮ್ಯಾಕ್ಸ್ ಬೀಳಬಹುದು ಎಂಬ ಹೇಳಿಕೆ ಕೊಟ್ಟಿದ್ದಾರೆ. ಇಂದು ಬೆಳಗ್ಗೆ 11ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಏನೋ ಒಂದು ಇತ್ಯರ್ಥ ಆಗಬಹುದು. ಹೈಕಮಾಂಡ್ ಗೊಂದಲಗಳಿಗೆ ತೆರೆ ಎಳೆಯಬಹುದು ಎಂದಿದ್ದಾರೆ.ಇದನ್ನೂ ಓದಿ: ಕ್ವಿನ್ ಸಿಟಿಯಲ್ಲಿ ಟೊಯೋಟಾ ಬಿಝ್ಇಂಟೆಲ್ ಹಬ್ – 1,200 ಕೋಟಿ ರೂ. ಹೂಡಿಕೆಗೆ ಒಡಂಬಡಿಕೆ
