ಬೆಂಗಳೂರು: ಹವಾಮಾನ (Weather) ಬದಲಾವಣೆ, ತ್ವರಿತ ನಗರೀಕರಣ ಹಾಗೂ ಅಂತರ್ಜಲ ಕುಸಿತದಂತಹ ಜಾಗತಿಕ ಸವಾಲುಗಳನ್ನು ತಂತ್ರಜ್ಞಾನದ ಮೂಲಕ ಸಮರ್ಥವಾಗಿ ಎದುರಿಸಲು ಬೆಂಗಳೂರು ಜಲಮಂಡಳಿ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಭವಿಷ್ಯದ ಜಲ ನಿರ್ವಹಣೆ ಕುರಿತು ಚರ್ಚಿಸಲು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ (Bengaluru Water Supply and Sewerage Board) ನಗರದಲ್ಲಿ (Bengaluru) ಮೇ 27 ರಂದು ದೇಶದ ಮೊಟ್ಟಮೊದಲ ಹಾಗೂ ಅತಿದೊಡ್ಡ ‘ರಾಷ್ಟ್ರೀಯ ಎಐ ಮತ್ತು ಡಿಜಿಟಲ್ ವಾಟರ್ ಶೃಂಗಸಭೆ 2026’ ಆಯೋಜಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K Shivakumar) ಅವರು ಈ ಬೃಹತ್ ಶೃಂಗಸಭೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ. ಇದನ್ನೂ ಓದಿ: ಖಾಲಿ ಹಂತಕ್ಕೆ ತಲುಪಿದ ಹಿಡಕಲ್ ಜಲಾಶಯ – ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಜನರಿಗೆ ಆತಂಕ
𝗝𝘂𝘀𝘁 𝟮 𝗗𝗮𝘆𝘀 𝘁𝗼 𝗚𝗼! 💧🤖
Bengaluru is set to host policymakers, utility leaders, technology innovators, and AI pioneers at the National AI Summit on Water 2026.
Hosted by BWSSB in collaboration with @eletsonline & @KPMGIndia #BWSSB #NationalAISummitOnWater2026… https://t.co/5UeDRRC6RW
— Bangalore Water Supply and Sewerage Board (@chairmanbwssb) May 25, 2026
nbsp;
ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ಭವಿಷ್ಯದ ಸ್ಮಾರ್ಟ್ ಜಲ ನಿರ್ವಹಣಾ ವ್ಯವಸ್ಥೆಗಳನ್ನು ರೂಪಿಸುವ ಗುರಿ ಹೊಂದಿರುವ ಈ ಶೃಂಗಸಭೆಯಲ್ಲಿ ಜಾಗತಿಕ ಜಲ ತಜ್ಞರು, ಎಐ ಪರಿಣತರು ಮತ್ತು ತಂತ್ರಜ್ಞಾನ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಪ್ರಮುಖವಾಗಿ ಎಐ ಆಧಾರಿತ ಜಲ ಆಡಳಿತ, ಸ್ಮಾರ್ಟ್ ಯುಟಿಲಿಟಿ, ಡಿಜಿಟಲ್ ಟ್ವಿನ್ಸ್, ಐಒಟಿ (IoT) ಮೇಲ್ವಿಚಾರಣೆ, ತ್ಯಾಜ್ಯನೀರು ಮರುಬಳಕೆ, ಮುನ್ಸೂಚಕ ವಿಶ್ಲೇಷಣೆ (Predictive Analytics) ಹಾಗೂ ಭವಿಷ್ಯದ ಆರ್ಥಿಕ ಮಾದರಿಗಳ ಕುರಿತು ವಿಸ್ತೃತ ಚರ್ಚೆಗಳು ನಡೆಯಲಿವೆ.
ಗಮನ ಸೆಳೆಯಲಿರುವ ‘ಪಂಚಸೂತ್ರ’ ಮತ್ತು ಡಿಜಿಟಲ್ ಮಾದರಿ
ಶೃಂಗಸಭೆಯಲ್ಲಿ ಬೆಂಗಳೂರು ಜಲಮಂಡಳಿಯ ಸ್ಕಾಡಾ (SCADA), ಜಿಐಎಸ್ (GIS) ಮ್ಯಾಪಿಂಗ್, ಐಒಟಿ ಟ್ಯಾಂಕರ್ ಟ್ರ್ಯಾಕಿಂಗ್ ಹಾಗೂ ಸ್ಮಾರ್ಟ್ ಮೀಟರಿಂಗ್ ವ್ಯವಸ್ಥೆಗಳನ್ನು ಪ್ರದರ್ಶಿಸಲಾಗುವುದು. ಜೊತೆಗೆ, ಜಲಮಂಡಳಿಯ ಕೃತಕ ಬುದ್ಧಿಮತ್ತೆ ಆಧಾರಿತ ‘ಪ್ರಜ್ಞಾ’, ದತ್ತಾಂಶ ಆಧಾರಿತ ‘ನೀತಿ’, ಸ್ಮಾರ್ಟ್ ಮೂಲಸೌಕರ್ಯದ ‘ತಂತ್ರಜ್ಞಾನ’, ಸುಸ್ಥಿರ ಹೂಡಿಕೆಯ ‘ಅರ್ಥ’ ಹಾಗೂ ಹವಾಮಾನ ಭದ್ರತೆಯ ‘ಸ್ಥಿರತೆ’ಯನ್ನು ಒಳಗೊಂಡಿರುವ ಮಹತ್ವಾಕಾಂಕ್ಷೆಯ ‘ಪಂಚಸೂತ್ರ’ಗಳ ಕಾರ್ಯತಂತ್ರವು ಈ ಶೃಂಗಸಭೆಯ ಪ್ರಮುಖ ಆಕರ್ಷಣೆಯಾಗಲಿದೆ.
“ಎಐ ಮತ್ತು ಡಿಜಿಟಲ್ ತಂತ್ರಜ್ಞಾನಗಳು ಜಾಗತಿಕ ಜಲ ನಿರ್ವಹಣೆಯ ಭವಿಷ್ಯವನ್ನು ಮರುರೂಪಿಸುತ್ತಿವೆ. ತಂತ್ರಜ್ಞಾನ, ಸುಸ್ಥಿರತೆ ಮತ್ತು ಜನಸ್ನೇಹಿ ಸೇವೆಯ ಸಂಯೋಜನೆಯೊಂದಿಗೆ ಬೆಂಗಳೂರನ್ನು ದೇಶದ ಅತ್ಯಾಧುನಿಕ ಡಿಜಿಟಲ್ ಜಲ ಪರಿಸರ ವ್ಯವಸ್ಥೆಯನ್ನಾಗಿ ನಿರ್ಮಿಸಲು ನಾವು ಮುಂದಾಗಿದ್ದೇವೆ. ಈ ಶೃಂಗಸಭೆಯು ನವೀನ ಪರಿಹಾರಗಳನ್ನು ಕಂಡುಕೊಳ್ಳುವ ಜಾಗತಿಕ ವೇದಿಕೆಯಾಗಲಿದೆ,” ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ವಿವರಿಸಿದರು.
ಬೆಂಗಳೂರು ಮಹಾನಗರದ ಭವಿಷ್ಯದ ಬೇಡಿಕೆಗಳನ್ನು ಪೂರೈಸಲು ಹೆಚ್ಚು ಪಾರದರ್ಶಕ, ದಕ್ಷ ಮತ್ತು ಸ್ಥಿತಿಸ್ಥಾಪಕ ಸಾರ್ವಜನಿಕ ಸೇವಾ ಮಾದರಿಯನ್ನು ರಚಿಸುವುದು ಈ ಡಿಜಿಟಲ್ ರೂಪಾಂತರದ ಮುಖ್ಯ ಉದ್ದೇಶವಾಗಿದೆ. ಕೃತಕ ಬುದ್ಧಿಮತ್ತೆ ಮತ್ತು ಸ್ಮಾರ್ಟ್ ಜಲ ನಿರ್ವಹಣೆಯನ್ನೇ ಪ್ರಧಾನವಾಗಿಟ್ಟುಕೊಂಡು ನಡೆಯುತ್ತಿರುವ ದೇಶದ ಅತಿ ದೊಡ್ಡ ಶೃಂಗಸಭೆ ಇದಾಗಿದ್ದು, 400ಕ್ಕೂ ಹೆಚ್ಚು ಗಣ್ಯರು ಹಾಗೂ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: 8 ವರ್ಷಗಳ ಬಳಿಕ BIAL ಡಿವಿಡೆಂಡ್ ಘೋಷಣೆ – ಸರ್ಕಾರಕ್ಕೆ 16.49 ಕೋಟಿ ಚೆಕ್ ಹಸ್ತಾಂತರ
