ಚಿಕ್ಕೋಡಿ: ಬೆಳಗಾವಿ (Belagavi) ಹಾಗೂ ಬಾಗಲಕೋಟೆ (Bagalkote) ಜಿಲ್ಲೆಗಳ ಜೀವನಾಡಿಯಾಗಿರುವ ‘ಹಿಡಕಲ್ ಜಲಾಶಯ’ (ರಾಜಾ ಲಖಮಗೌಡ ಜಲಾಶಯ) ಬಿರು ಬೇಸಿಗೆಯ ಹಿನ್ನೆಲೆಯಲ್ಲಿ ಈಗ ಸಂಪೂರ್ಣವಾಗಿ ಖಾಲಿ ಹಂತಕ್ಕೆ ತಲುಪಿದೆ. ಮುಂಗಾರು ಮಳೆಗೆ ಇನ್ನೂ ದಿನಗಳ ಬಾಕಿ ಇರುವಾಗಲೇ ಜಲಾಶಯದಲ್ಲಿನ (Hidkal Dam) ನೀರಿನ ಮಟ್ಟ ತಳ ಸೇರುತ್ತಿರುವುದು ಉಭಯ ಜಿಲ್ಲೆಗಳ ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದೆ.
ಒಟ್ಟು 51 ಟಿಎಂಸಿ (TMC) ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ ಕೇವಲ 8 ಟಿಎಂಸಿಯಷ್ಟು ಮಾತ್ರ ನೀರು ಬಾಕಿ ಉಳಿದಿದೆ. ಇತ್ತೀಚಿನ ವರ್ಷಗಳಲ್ಲಿ ಬೇಸಿಗೆಯ ಅವಧಿಗೂ ಮುನ್ನವೇ ಡ್ಯಾಂ ಇಷ್ಟೊಂದು ಭೀಕರವಾಗಿ ಬತ್ತಿ ಹೋಗುತ್ತಿರುವುದು ಇದೇ ಮೊದಲು.
ಹಿಡಕಲ್ ಜಲಾಶಯವು ಕೇವಲ ಕೃಷಿಗಷ್ಟೇ ಅಲ್ಲದೆ, ಪ್ರಮುಖ ನಗರ ಹಾಗೂ ಗ್ರಾಮೀಣ ಭಾಗದ ಕುಡಿಯುವ ನೀರಿನ ಪ್ರಧಾನ ಮೂಲವಾಗಿದೆ. ಬೆಳಗಾವಿ ಮಹಾನಗರ, ಹುಕ್ಕೇರಿ ಹಾಗೂ ಸಂಕೇಶ್ವರ ಪಟ್ಟಣಗಳಿಗೆ ಈ ಜಲಾಶಯದಿಂದಲೇ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತದೆ.ಜಲಾಶಯದ ವ್ಯಾಪ್ತಿಯ 100ಕ್ಕೂ ಹೆಚ್ಚು ಹಳ್ಳಿಗಳಿಗೆ ಇದುವೇ ಕುಡಿಯುವ ನೀರಿನ ಏಕೈಕ ಆಸರೆಯಾಗಿದೆ. ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಹತ್ಯೆ – ಕಾಮುಕನಿಗೆ 2 ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್
ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ಹತ್ತಾರು ಒಣ ಪ್ರದೇಶಗಳಿಗೆ ಏತ ನೀರಾವರಿ ಯೋಜನೆಗಳ ಮೂಲಕ ಈ ಡ್ಯಾಂನಿಂದ ನೀರು ಉಣಿಸಲಾಗುತ್ತಿತ್ತು. ಆದರೆ ಈಗ ನೀರಿನ ಕೊರತೆಯಿಂದ ಈ ಯೋಜನೆಗಳಿಗೂ ಬ್ರೇಕ್ ಬೀಳುವ ಸಾಧ್ಯತೆ ದಟ್ಟವಾಗಿದೆ.
ಪ್ರಸ್ತುತ ಭಾಗದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ ಉತ್ತಮ ಮಳೆಯಾಗದೇ ಇದ್ದರೆ, ಜಲಾಶಯದಲ್ಲಿರುವ ಅಲ್ಪಸ್ವಲ್ಪ ನೀರು ಕೂಡ ಆವಿಯಾಗಿ ಡ್ಯಾಂ ಸಂಪೂರ್ಣ ಡೆಡ್ ಸ್ಟೋರೇಜ್ ತಲುಪುವ ಭೀತಿ ಎದುರಾಗಿದೆ. ಇದನ್ನೂ ಓದಿ: ಬಿಡದಿ ಟೌನ್‌ಶಿಪ್ ಜಟಾಪಟಿ – ಡಿಕೆಶಿ ಬಗ್ಗೆ ಮಾತನಾಡಿದ್ದ ನಿಖಿಲ್‌ಗೆ ಸ್ಥಳೀಯ ಕಾಂಗ್ರೆಸ್ ನಾಯಕರಿಂದ ವಾರ್ನಿಂಗ್

