ಖ್ಯಾತ ಗಾಯಕಿ ಎಸ್. ಜಾನಕಿ (S Janaki) ಅವರ ಬದುಕಿನಲ್ಲಿ ಅವರ ಪತಿ ವಿ. ರಾಮಪ್ರಸಾದ್ ಅವರು ಉಸಿರಿನಂತಿದ್ದರು. ಆದರೆ 1997ರಲ್ಲಿ ಪತಿ ರಾಮಪ್ರಸಾದ್ (Ramprasad) ಅವರು ನಿಧನರಾದಾಗ ಜಾನಕಿಯಮ್ಮ ಅವರು ಇನ್ನಿಲ್ಲದಂತೆ ಕುಗ್ಗಿ ಹೋದರು. ಪತಿಯ ಅಗಲಿಕೆಯ ದುಃಖ ಮತ್ತು ಅವರ ಮೇಲಿನ ಅಪಾರ ಪ್ರೇಮದ ಸಂಕೇತವಾಗಿ ಜಾನಕಿ ಅವರು ಅಂದಿನಿಂದಲೇ ತಮ್ಮ ಜೀವನಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡರು.
ಪತಿಯ ನಿಧನದ ನಂತರ ಜಾನಕಿಯಮ್ಮ ಅವರು ಬಣ್ಣದ ಸೀರೆಗಳು, ಮಲ್ಲಿಗೆ ಹೂವು ಮತ್ತು ದೊಡ್ಡ ಕುಂಕುಮ ಇಡುವುದನ್ನು ಸಂಪೂರ್ಣವಾಗಿ ತ್ಯಜಿಸಿದರು. ಆ ದಿನದಿಂದ ಕೇವಲ ಸರಳವಾದ ಬಿಳಿ ಅಥವಾ ತಿಳಿ ಬಣ್ಣದ ಶ್ವೇತವಸ್ತ್ರ ಸೀರೆಗಳನ್ನು ಮಾತ್ರ ಧರಿಸಲು ಪ್ರಾರಂಭಿಸಿದರು.
ಹಣೆಗೆ ಕುಂಕುಮದ ಬದಲು ವಿಭೂತಿ ಅಥವಾ ನಾಮವನ್ನು ಧರಿಸಲಾರಂಭಿಸಿದರು. ಆದರೆ ಎಲ್ಲವನ್ನೂ ತ್ಯಜಿಸಿದರೂ ತಮ್ಮ ಪತಿಯ ಸವಿನೆನಪಿಗಾಗಿ ಸದಾ ಒಂದು ಗುಲಾಬಿ ಹೂವನ್ನು(Rose Flower) ಸೀರೆಗೆ ಮುಡಿಯುವ ವಿಶಿಷ್ಟ ಸಂಪ್ರದಾಯವನ್ನು ಅವರು ರೂಪಿಸಿಕೊಂಡಿದ್ದರು. ಇದನ್ನೂ ಓದಿ: ಪದ್ಮಭೂಷಣ ಪ್ರಶಸ್ತಿಯನ್ನೇ ನಿರಾಕರಿಸಿದ್ದ ಜಾನಕಿಯಮ್ಮ
ಪತಿ ನಿಧನರಾದ ತಕ್ಷಣವೇ ಜಾನಕಿಯಮ್ಮ ಅವರು ತಮಗಿದ್ದ ಎಲ್ಲಾ ರೇಷ್ಮೆ ಸೀರೆಗಳನ್ನು ದಾನವಾಗಿ ನೀಡಿಬಿಟ್ಟರು. ಅಷ್ಟೇ ಅಲ್ಲದೆ, ನಂತರದ ದಿನಗಳಲ್ಲಿ ಯಾರಾದರೂ ಅವರಿಗೆ ಬಿಳಿ ಸೀರೆ(White Saree) ಬಿಟ್ಟು ಬೇರೆ ಯಾವುದೇ ಬಣ್ಣದ ಸೀರೆಗಳನ್ನು ಉಡುಗೊರೆಯಾಗಿ ನೀಡಿದರೆ ಅದನ್ನು ತಾವು ಇಟ್ಟುಕೊಳ್ಳದೆ ತಕ್ಷಣವೇ ಬೇರೆಯವರಿಗೆ ಕೊಟ್ಟು ಉದಾರತೆ ಮೆರೆಯುತ್ತಿದ್ದರು.
ಬಣ್ಣದ ಲೋಕದಲ್ಲೇ ಇದ್ದರೂ, ಪತಿಯ ನೆನಪಿನಲ್ಲಿ ಅತ್ಯಂತ ಸರಳ ಹಾಗೂ ವೈರಾಗ್ಯದ ಜೀವನ ನಡೆಸಿದ ಜಾನಕಿಯಮ್ಮ ಅವರ ಈ ನಡೆ ಎಲ್ಲರಲ್ಲೂ ಗೌರವ ಮೂಡಿಸುವಂತಿದೆ.
