ಗಾಯಕಿ ಎಸ್. ಜಾನಕಿಯವರು (S.Janaki) 2013ರಲ್ಲಿ ಭಾರತ ಸರ್ಕಾರ ಘೋಷಿಸಿದ್ದ ಪದ್ಮಭೂಷಣ ಪ್ರಶಸ್ತಿಯನ್ನೇ (Padma Bhushan) ನಿರಾಕರಿಸಿದ್ದರು. ಪ್ರಶಸ್ತಿ ಪ್ರಕಟವಾದಾಗ ಪ್ರತಿಕ್ರಿಯಿಸಿದ್ದ ಅವರು, ‘ತಮಗೆ 75 ವರ್ಷ ವಯಸ್ಸಾಗುವರೆಗೂ ಕೇಂದ್ರ ಸರ್ಕಾರ ಗುರುತಿಸದೆ, ಈಗ ಪದ್ಮಭೂಷಣ ನೀಡುತ್ತಿರುವುದು ತಡವಾಯಿತು’ ಎಂದು ಬೇಸರ ಹೊರಹಾಕಿದ್ದರು.
ನಾನು ಕಳೆದ 55 ವರ್ಷಗಳಿಂದ ಹಾಡುತ್ತಿದ್ದೇನೆ. ನಾನು ಅನೇಕ ಭಾಷೆಗಳಲ್ಲಿ ವಿವಿಧ ಹಾಡುಗಳನ್ನು ಹಾಡಿದ್ದೇನೆ. ಅವರೆಲ್ಲರೂ ನನ್ನ ಹಾಡುಗಳನ್ನು ಮೆಚ್ಚುತ್ತಾರೆ. ಜನರ ಮನ್ನಣೆಗಿಂತ ನನಗೆ ಬೇರೆ ಏನು ಬೇಕು ಎಂದಿದ್ದರು. ಇದನ್ನೂ ಓದಿ: ಹೈದರಾಬಾದ್‌ನಲ್ಲಿ ಅರಮನೆಯಂತ ಮನೆ ಇದ್ರೂ ಮೈಸೂರಲ್ಲೇ ಪ್ರಾಣ ಬಿಡ್ತೀನಿ ಎಂದಿದ್ರು
ಇದೇ ವೇಳೆ ಸರ್ಕಾರದ ವಿರುದ್ಧ ನನಗೆ ಯಾವುದೇ ಅಸಮಾಧಾನವಿಲ್ಲ. ಆದರೆ ದಕ್ಷಿಣ ಭಾರತದ ಕಲಾವಿದರನ್ನು ಕೇಂದ್ರ ಸರ್ಕಾರ ಸರಿಯಾಗಿ ಗುರುತಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
80ರ ದಶಕದಲ್ಲಿ ಚಲನಚಿತ್ರ ಪ್ರಶಸ್ತಿಗಳನ್ನು ನೀಡಲಾಗುತ್ತಿತ್ತು ಆದರೆ ಶ್ರೇಷ್ಠ ಗಾಯಕಿ ಪ್ರಶಸ್ತಿ ಇರಲಿಲ್ಲ. ಈ ಸಂದರ್ಭದಲ್ಲಿ ಕನ್ನಡ ಗಾಯಕಿಯರಿಗೆ ಪ್ರಶಸ್ತಿ ಬರುವ ತನಕ ಕನ್ನಡದಲ್ಲಿ ಹಾಡುವುದಿಲ್ಲ ಎಂದಿದ್ದರು. ಇದರ ಬಿಸಿ ಸರ್ಕಾರಕ್ಕೆ ಮುಟ್ಟಿತ್ತು. ನಂತರ 1988-89ರಲ್ಲಿ ಗಾಯಕಿಯರಿಗೂ ಪ್ರಶಸ್ತಿಗಳನ್ನು ನೀಡುವ ಪರಿಪಾಠ ಬೆಳೆಯಿತು.
4 ಬಾರಿ ರಾಷ್ಟ್ರ ಪ್ರಶಸ್ತಿ, ತಮಿಳು, ಮಲಯಾಳ, ಕನ್ನಡ, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ, ವಿವಿಧ ರಾಜ್ಯಗಳ ಪುರಸ್ಕಾರ ಜಾನಕಿಯವರಿಗೆ ಸಂದಿವೆ. ಇದನ್ನೂ ಓದಿ: Video: ಜಾನಕಮ್ಮ ನಿಧನದ ಸುದ್ದಿ ಕೇಳಿ ಶಾಕ್ ಆದ ಕೆ.ಕಲ್ಯಾಣ್ – ಅರಗಿಸಿಕೊಳ್ಳಲು ಆಗ್ತಿಲ್ಲ ಎಂದ ಗೀತರಚನೆಕಾರ
