ಬೆಂಗಳೂರು: ರಾಜ್ಯದಲ್ಲಿ ಎಸ್‌ಐಆರ್ ನಾಳೆಗೆ (ಆ.7) ಅಂತ್ಯವಾಗಲಿದೆ. ರಾಜ್ಯದಲ್ಲಿ ಈಗಾಗಲೇ 1.11 ಕೋಟಿ ಮತದಾರರ ಹೆಸರು ಪಟ್ಟಿಯಿಂದ ಡಿಲೀಟ್ ಆಗುವ ಸಾಧ್ಯತೆ ಇದೆ ಅಂತ ರಾಜ್ಯ ಚುನಾವಣಾ ಆಯೋಗ ಹೇಳಿದೆ.
ಈ ಪೈಕಿ ಬೆಂಗಳೂರಿನ ಜಿಬಿಎ ವ್ಯಾಪ್ತಿಯಲ್ಲಿ ಅರ್ಧಕ್ಕರ್ಧ ಮತದಾರರಿಗೆ ಕೊಕ್ ಆಗಲಿದೆ ಅಂತ ದತ್ತಾಂಶ ಹೇಳುತ್ತಿದೆ. ಬೆಂಗಳೂರಿನಲ್ಲಿ 1.3 ಕೋಟಿ ಮತದಾರರಿದ್ದು, ಈ ಪೈಕಿ 49.53 ಲಕ್ಷ ಮತದಾರರಿಗೆ ಕೊಕ್ ಬೀಳಲಿದೆ. ಗೈರು, ಸ್ಥಳಾಂತರ, ಮರಣ ಹೊಂದಿದ, ನಕಲು ಹಾಗೂ ಇತರೆ ಮತದಾರರನ್ನ ಚುನಾವಣಾ ಆಯೋಗ ಎಸ್‌ಐಆರ್‌ನಲ್ಲಿ ಗುರುತಿಸಿದೆ. ಇದನ್ನೂ ಓದಿ: ಡಾರ್ಕ್ ಪ್ಯಾಟರ್ನ್ ವಿರುದ್ಧ ಸಮರ – 9 ಕಂಪನಿಗಳಿಗೆ 20 ಲಕ್ಷ ರೂ. ವರೆಗೆ ದಂಡ


ಅರ್ಧಕ್ಕರ್ಧ ಬೆಂಗಳೂರು ಮತದಾರರಿಗೆ ಕೊಕ್..?
* ಬೆಂಗಳೂರಿನಲ್ಲಿ 1.03 ಕೋಟಿ ಮತದಾರರು
* 49.53 ಲಕ್ಷ ಮತದಾರಿಗೆ ಕೊಕ್ ಸಾಧ್ಯತೆ
* 7.89 ಲಕ್ಷ ಮತದಾರರು ಮನೆಯಲ್ಲಿ ಇಲ್ಲ (7,98,416)
* 33.84 ಲಕ್ಷ ಮತದಾರರು ಶಾಶ್ವತವಾಗಿ ಸ್ಥಳಾಂತರ (33,84,790)
* 3.15 ಲಕ್ಷ ಮತದಾರರು ಮೃತ ಪಟ್ಟಿದ್ದಾರೆ (3,15,175)
* 60,005 ಮತದಾರರು ಈಗಾಗಲೇ ಬೇರೆ ಕಡೆ ನೋಂದಣಿ
* ಉಳಿದ 3,94,634 ಮತದಾರರು ಇತರೆ ವರ್ಗ
ಇನ್ನೂ ರಾಜ್ಯದಲ್ಲಿ 1.11 ಕೋಟಿ ಮತದಾರರು ಎಸ್‌ಐಆರ್‌ನಿಂದ ಹೊರ ಹೋಗಲಿದ್ದಾರೆ ಎಂಬ ಆತಂಕಕಾರಿ ಡೇಟಾ ಬೆನ್ನಲ್ಲೇ ಎಸ್‌ಐಆರ್ ವಿರುದ್ಧ ಕಾಂಗ್ರೆಸಿಗರು ಕಿಡಿಕಾರಿದ್ದಾರೆ. ಎಸ್‌ಐಆರ್ ಸರಿಯಾಗಿ ಆಗ್ತಿಲ್ಲ, ದಿನಾಂಕವನ್ನ ವಿಸ್ತರಣೆ ಮಾಡಬೇಕು ಅಂತ ಸಚಿವ ಬಾಲಕೃಷ್ಣ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಡೀಪ್‌ಟೆಕ್ ಬೆಳವಣಿಗೆಗೆ 5 ಪ್ರಮುಖ ಅಡಿಪಾಯ: ಸಚಿವ ಪ್ರಿಯಾಂಕ್ ಖರ್ಗೆ

