ಬೆಂಗಳೂರು: ಹೊಸ ಸರ್ಕಾರ ಬಂದ ಮೇಲೆ ನಡೆದ ಚುನಾವಣೆಯಲ್ಲಿ ಶಾಸಕರ ಬೆಂಬಲ ನೋಡಿ ಆಶ್ಚರ್ಯ ಆಗುತ್ತಿದೆ ಎಂದು ಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಹೇಳಿದರು.
ಪರಿಷತ್ ಚುನಾವಣೆ ( Karnataka MLC Polls) ಫಲಿತಾಂಶದ ಬಗ್ಗೆ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ನಮ್ಮ ಸರ್ಕಾರಕ್ಕೆ ನೀವು ಮುಂದುವರಿಯಿರಿ ಎಂದು ರಾಜ್ಯದ ಜನರ ಅಭಿಪ್ರಾಯದ ಬೆಂಬಲ ಇದಾಗಿದೆ. ನಮಗೆ ಬೇರೆ ಬೇರೆ ಪಕ್ಷದವರು ಮತ ಕೊಟ್ಟಿದ್ದಾರೆ. ಅವರ ವಿಶ್ವಾಸಕ್ಕೆ, ಭಾವನಗೆ ನಾವು ಗೌರವಿಸುತ್ತೇವೆ. ಇದನ್ನೂ ಓದಿ: ಪರಿಷತ್ ಚುನಾವಣೆ; ಕಾಂಗ್ರೆಸ್‌ನ ಐವರು, ಬಿಜೆಪಿಯ ಇಬ್ಬರಿಗೆ ಗೆಲುವು
ಇದು ಇಡಿ ರಾಜ್ಯಕ್ಕೆ ತೋರಿಸಿದ ಐಕ್ಯತೆಯಾಗಿದೆ. ಯಾರು ಮತ ಹಾಕಿದ್ದಾರೆ ಗೊತ್ತಿಲ್ಲ. ಇದು ಗುಪ್ತ ಮತದಾನ. ನಾವು ಯಾರನ್ನು ಕೇಳಿಲ್ಲ, ಯಾವ ಪಾರ್ಟಿಯಲ್ಲಿ ಇಂಟರ್ನಲ್ ಏನು ಇದೆಯೋ ಗೊತ್ತಿಲ್ಲ ಎಂದರು.
ಶಿವರಾಮ್ ಹೆಬ್ಬಾರ್ ,ಸೋಮಶೇಖರ್ ಉಚ್ಚಾಟನೆಯಿಂದ ದಾರಿಯಲ್ಲಿ ಇದ್ದರು. ಅವರಿಗೆ ದಾರಿ ತೋರಿಸುವ ಕೆಲಸ ಮಾಡಿದ್ದೇವೆ ಎಂದು ಇದೇ ವೇಳೆ ಅವರು ಹೇಳಿದರು. ಇದನ್ನೂ ಓದಿ: ಪರಿಷತ್ ಚುನಾವಣೆ; ಕಾಂಗ್ರೆಸ್‌ನ 5ನೇ ಅಭ್ಯರ್ಥಿಗೆ ಜಯ – ಮೈತ್ರಿ ಅಭ್ಯರ್ಥಿ ಸೋಲು
