– ಬಿಜೆಪಿ ಕಚೇರಿಗೆ ಭದ್ರತೆ ಕೊಡದೇ ಹೋದ್ರೆ ಪೊಲೀಸ್ ಕಮೀಷನರ್ ಕಚೇರಿಗೆ ಮುತ್ತಿಗೆ
ಬೆಂಗಳೂರು: ಹಿಂದೂ ಧರ್ಮದ (Hinduism) ಬಗ್ಗೆ ಕಾಂಗ್ರೆಸ್ (Congress) ನಿಲುವೇನು ಅಂತ ಸಿಎಂ ಡಿಕೆ ಶಿವಕುಮಾರ್ (DK Shivakumar) ಮತ್ತು ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಎಂಎಲ್ಸಿ ರವಿಕುಮಾರ್ (MLC Ravikumar) ಆಗ್ರಹ ಮಾಡಿದ್ದಾರೆ.
ಇಸ್ಲಾಂ ಧರ್ಮ ಶ್ರೇಷ್ಠ ಎಂಬ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹಿಂದೂ ಧರ್ಮ ಕಾಂಗ್ರೆಸ್ ದೃಷ್ಟಿಯಿಂದ ಎಷ್ಟನೇ ಸ್ಥಾನದಲ್ಲಿ ಇದೆ ಎಂದು ರಾಯರೆಡ್ಡಿ, ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್‌ಗೆ ಕೇಳುತ್ತೇನೆ. ಕಾಂಗ್ರೆಸ್ ದೃಷ್ಟಿಯಲ್ಲಿ ಹಿಂದೂ ಧರ್ಮ ಕಳಪೆನಾ?ಇಸ್ಲಾಂ ಧರ್ಮ ಶ್ರೇಷ್ಠ ಆದ್ರೆ ಹಿಂದೂ ಧರ್ಮ ಏನು? ಬಸವಣ್ಣ ಬಗ್ಗೆ ಏನು ಹೇಳುತ್ತೀರಿ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಸಿಎಂ ಡಿಕೆಶಿ 6ನೇ ಗ್ಯಾರಂಟಿ – ಹಿಂದೂಗಳಿಗೆ ‘ಸುನ್ನತ್ ಗ್ಯಾರಂಟಿ’: ಆರ್.ಅಶೋಕ್ ಕಿಡಿ
ಹಿಂದೂ ಧರ್ಮವನ್ನ ಪ್ರಪಂಚದಲ್ಲಿ ಪಾಲನೆ ಮಾಡುತ್ತಾರೆ. ಶ್ರೇಷ್ಠ ವಿಚಾರಗಳನ್ನ ಹಿಂದೂ ಧರ್ಮ ಕೊಟ್ಟಿದೆ. ರಾಯರೆಡ್ಡಿ ಅವರಿಗೆ ಹಿಂದೂ ಧರ್ಮ ಮೊದಲೋ ಅಲ್ಲವೊ? ಅವರು ಹಿಂದು ಧರ್ಮದಲ್ಲಿ ಹುಟ್ಟಿದ್ದಾರೋ ಇಲ್ಲವೋ? ಕಾಂಗ್ರೆಸ್‌ಗೆ ಕೇಳುತ್ತೀನಿ ಹಿಂದೂ ಧರ್ಮ ಕಾಂಗ್ರೆಸ್‌ಗೆ ಕಳಪೆನಾ? ಶ್ರೇಷ್ಠ ಅಲ್ಲವಾ? ಇದನ್ನ ಕಾಂಗ್ರೆಸ್ ಹೇಳಬೇಕು ಎಂದು ಆಗ್ರಹ ಮಾಡಿದರು. ಇದನ್ನೂ ಓದಿ: ಹೈದರಾಬಾದ್‌ನಲ್ಲಿ ಚಾಕುವಿನಿಂದ ಇರಿದು AIMIM ಮುಖಂಡನ ಹತ್ಯೆ
ಹಿಂದೂ ಧರ್ಮವನ್ನು ನಿಂದಿಸೋ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಸನಾತನ ಧರ್ಮದ ಬಗ್ಗೆ, ರಾಮನ ಅಸ್ತಿತ್ವದ ಬಗ್ಗೆ ಕಾಂಗ್ರೆಸ್ ಅವರು ಪ್ರಶ್ನೆ ಮಾಡಿದರು. ಹೀಗಾಗಿ ಸಚಿವರು ಹೀಗೆ ಮಾತನಾಡುತ್ತಾರೆ. ಹಿಂದೂ ಬಗ್ಗೆ ಕಾಂಗ್ರೆಸ್ ಪಕ್ಷದ ನಿಲುವೇನು? ರಾಯರೆಡ್ಡಿ ಮಾತಿಗೆ ಏನು ಹೇಳುತ್ತೀರಿ? ಹಿಂದೂ ಧರ್ಮ ಶ್ರೇಷ್ಠ ಅಲ್ಲವಾ? ಸಿಎಂ ಡಿಕೆಶಿ ಮತ್ತು ಮಲ್ಲಿಕಾರ್ಜುನ ಖರ್ಗೆ ಹೇಳಬೇಕು. ಹಿಂದೂ ಧರ್ಮದ ನಿಲುವೇನು? ರಾಯರೆಡ್ಡಿ ಬಗ್ಗೆ ನಿಲುವೇನು ಎಂದು ಕಾಂಗ್ರೆಸ್ ಹೇಳಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಮತ್ತು ಸಿಎಂಗೆ ರವಿಕುಮಾರ್ ಒತ್ತಾಯಿಸಿದರು. ಇದನ್ನೂ ಓದಿ: ಚಿಕನ್ ಪೀಸ್ ವಿಚಾರಕ್ಕೆ ಗಲಾಟೆ – ಎದೆಗೆ ಚೂರಿ ಹಾಕಿ ಸಹೋದ್ಯೋಗಿಯಿಂದಲೇ ವ್ಯಕ್ತಿಯ ಕೊಲೆ
ಇನ್ನು ಭಾನುವಾರ ಬಿಜೆಪಿ ಕಚೇರಿಗೆ ಯೂತ್ ಕಾಂಗ್ರೆಸ್ ನಿಂದ ಮುತ್ತಿಗೆ ಹಾಕಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಕಚೇರಿಗೆ ಸೂಕ್ತ ಭದ್ರತೆ ಕೊಡದೇ ಹೋದ್ರೆ ಪೊಲೀಸ್ ಕಮೀಷನರ್ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಭಾನುವಾರ ಸಂಜೆ ಕಾಂಗ್ರೆಸ್ ಗೂಂಡಾ ಕಾರ್ಯಕರ್ತರು ಬಿಜೆಪಿ ಕಚೇರಿಗೆ ನೂರಾರು ಜನ ಮುತ್ತಿಗೆ ಹಾಕಿದ್ದಾರೆ. ಇದು ಮೊದಲ ಬಾರಿ ಅಲ್ಲ. 19ನೇ ಸಾರಿ ಇಂತಹ ಮುತ್ತಿಗೆ ಕಾಂಗ್ರೆಸ್ ಅವರು ಬಿಜೆಪಿ ಕಚೇರಿ ಮೇಲೆ ಮಾಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ನಮ್ಮ ಆಫೀಸ್‌ನಲ್ಲಿ ಪೊಲೀಸರು ಇರುತ್ತಾರೆ. ನಮ್ಮ ಆಫೀಸ್ ಹತ್ತಿರ ಬರೋವರೆಗೂ ಪೊಲೀಸರು ಏನು ಮಾಡುತ್ತಿದ್ದರು? ಕಾಂಗ್ರೆಸ್ ಜೊತೆ ಪೊಲೀಸರು ಒಳ ಒಪ್ಪಂದ ಮಾಡಿಕೊಂಡಿದ್ದಾರಾ? ಇಷ್ಟು ಹತ್ತಿರ ಹೇಗೆ ಬಂದರು ಎಂದು ಪ್ರಶ್ನಿಸಿದರು. ಇದನ್ನೂ ಓದಿ: KPSC ನೇಮಕಾತಿ ಹಗರಣ; ಶಾಂತ ಹೊಸಮನಿ ವಿರುದ್ಧ ಲುಕೌಟ್ ನೋಟಿಸ್
19 ಬಾರಿ ನಮ್ಮ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಇದರ ಬಗ್ಗೆ ಕಾಂಗ್ರೆಸ್ ಮೇಲೆ ಮಾಡಿರೋ ಎಫ್‌ಐಆರ್‌ಗಳನ್ನ ಪೊಲೀಸ್ ಇಲಾಖೆ ಬಿಡುಗಡೆ ಮಾಡಬೇಕು. ಇಲ್ಲ ಅಂದರೆ ಡಿಸಿಪಿ, ಎಸಿಪಿ, ಕಮೀಷನರ್ ವಿರುದ್ಧ ನಾವೇ ಕೇಸ್ ಹಾಕುತ್ತೇವೆ. ಬಿಜೆಪಿ ಕಚೇರಿಗೆ ಸೆಕ್ಯುರಿಟಿ ಯಾಕೆ ಕೊಡುತ್ತಿಲ್ಲ?. ನಾವು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಬಹುದು. ನಾವು ಒಂದು ಬಾರಿ ಮುತ್ತಿಗೆ ಹಾಕಿದ್ವಿ. ಪೊಲೀಸ್ ಇಲಾಖೆಗೆ, ಕಮೀಷನರ್‌ಗೆ ನಾವು ಅನೇಕ ಬಾರಿ ದೂರು ನೀಡಿದ್ದೇವೆ. ನಮಗೆ ಮಾತ್ರ ಫ್ರೀಡಂ ಪಾರ್ಕ್‌ನಲ್ಲಿ ಮಾಡಿ ಅಂತೀರಾ? ಕಾಂಗ್ರೆಸ್ ಅವರು ನಮ್ಮ ಕಚೇರಿ ಮುಂದೆ ಪ್ರತಿಭಟನೆ ಮಾಡಬಹುದಾ? ಪೊಲೀಸರು ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆಗೆ ಕಾಂಗ್ರೆಸ್‌ಗೆ ಜಾಗ ಕೊಟ್ಟಿದ್ದೀರಾ? ಪೊಲೀಸರು 19 ಬಾರಿ ಪ್ರತಿಭಟನೆ ಮಾಡಿರೋದಕ್ಕೆ ಅವರ ಮೇಲೆ ಹಾಕಿರೋ ಎಫ್‌ಐಆರ್ ತೋರಿಸಬೇಕು. ನಾನ್ ಬೇಲೇಬಲ್ ಕೇಸ್ ಹಾಕಬೇಕು. ನಾವು ಬೇಕಾದ್ರೆ ಫೋಟೋ ಕೊಡುತ್ತೇವೆ. ಇದು ಕೊನೆಯ ಎಚ್ಚರಿಕೆ. ಇನ್ನು ಮುಂದೆಯಾದರೂ ಸರಿಯಾದ ಕ್ರಮ ತೆಗೆದುಕೊಳ್ಳಬೇಕು. ಕಾಂಗ್ರೆಸ್ ಗೂಂಡಾ ವರ್ತನೆ ನಾವು ಸಹಿಸಲ್ಲ. ನಮಗೂ ಪ್ರತಿಭಟನೆ ಮಾಡಲು ಬರುತ್ತದೆ. ನಮಗೂ ಪ್ರಜಾಪ್ರಭುತ್ವ, ಸಂವಿಧಾನ ಇದೆ. ನಾವು ಪ್ರತಿಭಟನೆ ಮಾಡಿದ್ರೆ ನಿತ್ಯ ನಿಮ್ಮ ಕಚೇರಿ ಮುಂದೆ ಪ್ರತಿಭಟನೆ ಮಾಡಬಹುದು. ನೀವು ಮಾಡೋದಾದ್ರೆ ಫ್ರೀಡಂ ಪಾರ್ಕ್‌ನಲ್ಲಿ ಮಾಡಿ. ಬಿಜೆಪಿಯನ್ನ ಹಗುರವಾಗಿ ತೆಗೆದುಕೊಳ್ಳಬೇಡಿ. ಕಾಂಗ್ರೆಸ್ ವರ್ತನೆ ಸಹಿಸಲು ಆಗಲ್ಲ. ಇದು ಮುಂದುವರೆದರೆ ಕಮೀಷನರ್ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ಕೊಟ್ಟರು. ಇದನ್ನೂ ಓದಿ: ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ 16ರ ಬಾಲಕಿ ಮೇಲೆ ಗ್ಯಾಂಗ್ ರೇಪ್ ಆರೋಪ – ಡ್ರೈವರ್, ಕಂಡಕ್ಟರ್ ಬಂಧನ
