ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಹಗರಣ (KPSC Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಎಸ್‌ಸಿ ಸದಸ್ಯೆ ಶಾಂತ ಹೊಸಮನಿ (Shanta Hosamani) ವಿರುದ್ಧ ಲುಕೌಟ್ ನೋಟಿಸ್ ಹೊರಡಿಸಲಾಗಿದೆ.
ಪ್ರಕರಣದಲ್ಲಿ KPSC ಸದಸ್ಯರಿಗೆ ಇ.ಡಿ ಬುಲಾವ್ ನೀಡಿದೆ. ಖುದ್ದು ಹಾಜರಿಗೆ ಸಮನ್ಸ್ ನೀಡಿದೆ. ಜಾರಿ ನಿರ್ದೇಶನಾಲಯ ಈಗಾಗಲೇ 17 ಅಭ್ಯರ್ಥಿಗಳನ್ನು ವಿಚಾರಣೆ ನಡೆಸುತ್ತಿದೆ. ಇದನ್ನೂ ಓದಿ: ಪಶುವೈದ್ಯರ ನೇಮಕಾತಿ ಹಗರಣ – KPSC ಪರೀಕ್ಷೆ ಬರೆಯಲು ಬೆಂಗಳೂರಿಗೆ ಹೋಗಿದ್ದ ಬಸವರಾಜ್ ಕನ್ನಾಳೆ ಇಂದು ಕೋಟ್ಯಾಧಿಪತಿ
ಇಂದು ವಿಚಾರಣೆಗೆ ಸಮನ್ಸ್ ನೀಡಲಾಗಿದೆ. ಎಕ್ಸಾಂ ಕಂಟ್ರೋಲ್ ಅಲ್ಲಿ ಇದ್ದ ಅಧಿಕಾರಿಗಳಿಗೂ ಸಮನ್ಸ್ ಜಾರಿಯಾಗಿದೆ. ಸಿಐಡಿ ಕಾರ್ಯಾಚರಣೆ ಬೆನ್ನಲ್ಲೇ ಇ.ಡಿ ತನಿಖೆ ಚುರುಕುಗೊಳಿಸಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಶಾಂತ ಹೊಸಮನಿ ನಾಪತ್ತೆಯಾಗಿದ್ದು, ಅವರಿಗೆ ಇ.ಡಿ ಲುಕೌಟ್ ನೋಟಿಸ್ ಹೊರಡಿಸಿದೆ. ತಲೆಮರೆಸಿಕೊಂಡಿರೋ ಶಾಂತ ಹೊಸಮನಿಗೆ ಹುಡುಕಾಟ ನಡೆಸಲಾಗಿದೆ. ಸಿಐಡಿಯಿಂದಲೂ ಲುಕೌಟ್ ನೋಟಿಸ್ ಜಾರಿ ಮಾಡಲಾಗಿದೆ. ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ನಿಗಾವಹಿಸಲಾಗಿದೆ. ಇದನ್ನೂ ಓದಿ: IAS ಅಧಿಕಾರಿ ಗ್ಯಾನೇಂದ್ರ ಕುಮಾರ್‌ಗೆ ನ್ಯಾಯಾಂಗ ಬಂಧನ
