– ಹುಡುಗನ ಮೇಲೆ ಹುಡುಗರಿಂದಲೇ ಅತ್ಯಾಚಾರ, ಕೊಲೆ
ಬೆಂಗಳೂರು: ನಗರದಲ್ಲಿ ಹುಡ್ಗಿರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಯತ್ನ ಪ್ರಕರಣಗಳು ಹೆಚ್ಚಾಗ್ತಿದ್ದು, ಹೆಣ್ಮಕ್ಕಳು ಸೇಫ್ ಅಲ್ಲ ಅಂತಾರೆ. ಇಲ್ಲಿ ಹೆಣ್ಣು ಮಕ್ಳಿಗೆ ಮಾತ್ರ ಅಲ್ಲ ಗಂಡು ಮಕ್ಕಳೂ ಸೇಫ್ ಅಲ್ಲ. ಗಂಡು ಮಕ್ಕಳ ಜೊತೆ ಲೈಂಗಿಕ ಸಂಪರ್ಕ ಹೊಂದೋದಕ್ಕೆ ಕೆಲವರು ಹೊಂಚು ಹಾಕುತ್ತಿದ್ದಾರೆ.
Advertisement
ಜನವರಿಯಲ್ಲಿ ಹೊಸ ವರ್ಷ ಸಂಭ್ರಮಾಚರಣೆಯಾದಾಗಿನಿಂದ ಹೆಣ್ಣು ಮಕ್ಕಳ ಮೇಲೆ ಒಂದಲ್ಲ ಒಂದು ಲೈಂಗಿಕ ದೌರ್ಜನ್ಯ ಪ್ರರಕಣಗಳು ಬೆಳಕಿಗೆ ಬರ್ತಾನೆ ಇವೆ. ಆದರೆ ಹೆಣ್ಣು ಮಕ್ಕಳು ಮಾತ್ರ ಅಲ್ಲ ಗಂಡು ಮಕ್ಕಳಿಗೂ ಸಹ ಭದ್ರತೆ ಇಲ್ಲ. ಒಂಟಿಯಾಗಿದ್ರೆ ಗಂಡು ಮಕ್ಕಳ ಮೇಲೂ ಬೆಂಗಳೂರಲ್ಲಿ ಅತ್ಯಾಚಾರ ಆಗ್ತಾ ಇದೆ. ಅದು ಕೂಡ ಗಂಡು ಮಕ್ಕಳಿಂದಲೇ. ಬೆಂಗಳೂರು ಕರಗದ ದಿನ ಹುಡುಗನೊಂದಿಗೆ ಹೋಮೋ ಸೆಕ್ಸ್ ಮಾಡಲು ಹೋಗಿ ಹುಡಗನನ್ನೇ ಕೊಲೆ ಮಾಡಿ ಹೋಗಿದ್ದಾರೆ.
Advertisement
Advertisement
ಹುಡುಗನನ್ನು ಕೊಲೆ ಮಾಡಿದ ಹುಡುಗ್ರು ಫೇಸ್‍ಬುಕ್ ಪೇಜ್‍ನಲ್ಲಿ ಹೋಮೋ ಸೆಕ್ಸ್ ಇಂಟ್ರೆಸ್ಟ್ ಇರೋರ ಗುಂಪು ಮಾಡಿಕೊಂಡು ಹುಡುಗ್ರನ್ನ ತಮ್ಮತ್ತ ಸೆಳೆಯುತ್ತಾರೆ. ಇತ್ತ ಬೆಂಗಳೂರಿನ ಕಲಾಸಿಪಾಳ್ಯ ಮಾರುಕಟ್ಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿರೋ ಮುರಳಿ ಕೊಲೆ ಪ್ರಕರಣದಲ್ಲಿ ‘ಗೇ’ ಹುಡುಗರ ಪಾತ್ರ ಇರೋದು ಗೊತ್ತಾಗಿದೆ. ಕರಗದ ದಿನವೂ ಇದೇ ರೀತಿ ಮುರಳಿ ಎಂಬವರೊಂದಿಗೆ ಲೈಂಗಿಕ ಸಂಪರ್ಕ ನಡೆಸಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಆದ್ರೆ ಕೊಲೆಗಾರ ಮಾತ್ರ ಇನ್ನೂ ಸಿಕ್ಕಿಲ್ಲ.
Advertisement
ಕೊಲೆಯಾದ ಯುವಕನ ಶವ ಪರೀಕ್ಷೆಯ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.