ಬಿಗ್ ಬಾಸ್ ಸೀಸನ್ 8ರ (Bigg Boss Kannada) ವಿನ್ನರ್ ಆಗಿರುವ ಮಂಜು ಪಾವಗಡ (Manju Pavagada) ಅಂತರಪಟ ಸೀರಿಯಲ್‌ನಲ್ಲಿ ತಂದೆಯಾಗಿ ಕಾಣಿಸಿಕೊಳ್ತಿರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಈಗ ‘ಭಾಗ್ಯಲಕ್ಷ್ಮಿ’ ಧಾರಾವಾಹಿಯಲ್ಲಿ ನಕಲಿ ಅಪ್ಪನಾಗಿ ಮಂಜು ಪಾವಗಡ ಎಂಟ್ರಿ ಕೊಡ್ತಿದ್ದಾರೆ.
Advertisement
ಬಿಗ್ ಬಾಸ್ (Bigg Boss) ಬಳಿಕ ಒಂದಿಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಮಂಜು ಪಾವಗಡ ಈಗ ಮತ್ತೆ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಸುಷ್ಮಾ ರಾವ್- ಸುದರ್ಶನ್ ರಂಗಪ್ರಸಾದ್ ನಟನೆಯ ‘ಭಾಗ್ಯಲಕ್ಷ್ಮಿ’ ಸೀರಿಯಲ್‌ನಲ್ಲಿ ನಕಲಿ ಅಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಪ್ರೋಮೋ ವಾಹಿನಿಯ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದು, ಪ್ರೋಮೋ ಸಖತ್ ಸದ್ದು ಮಾಡುತ್ತಿದೆ.
Advertisement
Advertisement
ಇಷ್ಟವಿಲ್ಲದೇ ತಾಯಿಯ ಹಠಕ್ಕೆ ಮಣಿದು ತಾಂಡವ್ ಅಲಿಯಾಸ್ ಸುದರ್ಶನ್ ಭಾಗ್ಯಳನ್ನು ಮದುವೆಯಾಗುತ್ತಾನೆ. ಈ ಕಡೆ ತನ್ನ ಆಫೀಸಿನಲ್ಲಿ ಕೆಲಸ ಮಾಡುವ ಶ್ರೇಷ್ಠಾ ಜೊತೆ ತಾಂಡವ್ ಅಫೇರ್ ಇಟ್ಟುಕೊಂಡಿರುತ್ತಾನೆ. ಈಗ ಶ್ರೇಷ್ಠಾ ಮನೆಯವರು ಮದುವೆಯಾಗುವ ಒತ್ತಡವನ್ನ ತಾಂಡವ್ ಮುಂದಿಟ್ಟಿದ್ದಾರೆ. ಅಮ್ಮನ ಮಾತಿಗೆ ಭಯಪಡುವ ತಾಂಡವ್‌ಗೆ ಸಾಥ್ ನೀಡಲು ಶ್ರೇಷ್ಠಾ ನಕಲಿ ತಂದೆಯಾಗಿ ಮಂಜು ಪಾವಗಡ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:D51: ಧನುಷ್ ಹೊಸ ಸಿನಿಮಾಗೆ ರಶ್ಮಿಕಾ ಮಂದಣ್ಣ ಹೀರೋಯಿನ್
Advertisement
ಎಜುಕೇಷನ್ ಇಲ್ಲಾ ಅಂತಾ ಹಂಗಿಸೋ ತಾಂಡವ್ ಮುಂದೆ ಗೆಲ್ಲಲು ಭಾಗ್ಯ ಈಗ ಸ್ಕೂಲಿಗೆ ಹೋಗುತ್ತಿದ್ದಾಳೆ. ಸೊಸೆಯನ್ನು ಓದಿಸಲೇಬೇಕು ಅಂತಾ ಅತ್ತೆ ಪಣ ತೊಟ್ಟಿದ್ದಾಳೆ. ಇದೆಲ್ಲದರ ನಡುವೆ ಭಾಗ್ಯಳ ಸಂಸಾರದ ಬಂಡಿಗೆ ಬ್ರೇಕ್ ಹಾಕಲು ಕೆಡಿ ಶ್ರೇಷ್ಠಾ ಜೊತೆ ಮಂಜು ಪಾವಗಡ ಜೊತೆಯಾಗಿದ್ದಾರೆ.