ತುಮಕೂರು: ಸಚಿವ ಸಂಪುಟ ವಿಸ್ತರಣೆ (Cabinet Expansion) ಮಾಡುವ ಸುಳಿವು ಲಭಿಸುತ್ತಿದ್ದಂತೆ ಎರಡನೇ ಸುತ್ತಿನ ಲಾಬಿಯೂ ಜೋರಾಗಿದೆ. ಪಾವಗಡ ಶಾಸಕ ಹೆಚ್‌ವಿ ವೆಂಕಟೇಶ್‌ಗೆ (HV Venkatesh) ಸಚಿವ ಸ್ಥಾನಕ್ಕಾಗಿ ಹೈಕಮಾಂಡ್‌ಗೆ ಶಿಫಾರಸು ಮಾಡುವಂತೆ ಭೋವಿ ಸಮುದಾಯದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ (Immadi Siiddharameshwara Swamiji) ಡಿಸಿಎಂ ಜಿ.ಪರಮೇಶ್ವರ್ (G Parameshwar) ಬಳಿ ಲಾಬಿ ನಡೆಸಿದ್ದಾರೆ.
ಇಂದು ತುಮಕೂರಿನ ಹೆಗ್ಗೆರೆಯಲ್ಲಿ ಇರುವ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ಡಿಸಿಎಂ ಜಿ.ಪರಮೇಶ್ವರ್ ಅವರನ್ನು ಭೇಟಿಯಾದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸುಮಾರು ಒಂದು ಗಂಟೆಗಳ ಕಾಲ ಡಿಸಿಎಂ ಜೊತೆ ಚರ್ಚೆ ನಡೆಸಿದ್ದಾರೆ. ಭೋವಿ ಸಮುದಾಯಕ್ಕೆ ಸೇರಿದ ಪಾವಗಡ ಶಾಸಕ ಹೆಚ್‌ವಿ ವೆಂಕಟೇಶ್ ಕ್ರಿಯಾಶೀಲರಾಗಿದ್ದು, ಸಚಿವ ಸ್ಥಾನಕ್ಕಾಗಿ ಹೈಕಮಾಂಡ್‌ಗೆ ಶಿಫಾರಸು ಮಾಡುವಂತೆ ಶ್ರೀಗಳು ಕೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಜಮೀರ್ ಅಹ್ಮದ್ ಆಸ್ತಿ ಪ್ರಕರಣ – ರಾಜ್ಯಪಾಲರ ನಿರ್ಧಾರ ಕಾದು ನೋಡಬೇಕು: ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ
ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ಸಿದ್ದರಾಮೇಶ್ವರ ಶ್ರೀಗಳು, ಬೇರೆ ಕೆಲಸದ ನಿಮಿತ್ತ ಡಿಸಿಎಂ ಅವರನ್ನು ಭೇಟಿಯಾಗಿದ್ದೇನೆ. ನಮ್ಮ ಭೋವಿ ಸಮುದಾಯದ ಮೂವರು ಶಾಸಕರಿದ್ದು, ಅವರಿಗೆ ಸಚಿವ ಸ್ಥಾನ ಕೊಡುವಂತೆ ಶಿಫಾರಸು ಮಾಡಲು ಹೇಳಿದ್ದೇನೆ ಎಂದರು. ಇದನ್ನೂ ಓದಿ: ಬೆಂಗಳೂರಿನ ಫುಟ್ಬಾಲ್ ಪ್ರಿಯರಿಗೆ ಸರ್ಕಾರದ ಗುಡ್ ನ್ಯೂಸ್; ಮಧ್ಯರಾತ್ರಿ 3:30ರ ತನಕ ಹೋಟೆಲ್, ರೆಸ್ಟೋರೆಂಟ್ ಓಪನ್
ಈ ವೇಳೆ ಶಾಸಕ ಹೆಚ್‌ವಿ ವೆಂಕಟೇಶ್ ಹಾಗೂ ಸ್ವಾಮೀಜಿ ಕೆಲ ಕಾಲ ಗೌಪ್ಯವಾಗಿ ಮಾತುಕತೆ ನಡೆಸಿದರು. ಬಳಿಕ ಪ್ರತಿಕ್ರಿಯೆ ಕೊಟ್ಟ ಶಾಸಕ ವೆಂಕಟೇಶ್, ಸ್ವಾಮೀಜಿಗಳು ಸಚಿವ ಸ್ಥಾನಕ್ಕಾಗಿ ಕೇಳಿಕೊಂಡಿದ್ದು ನಿಜ. ಆದರೆ ನಾನೂ ಆಕಾಂಕ್ಷಿಯಾಗಿದ್ದು ಕೊಟ್ಟರೆ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಮದರಸಾ ಜಾಗದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ – ಶಾಲೆಗೆ ನುಗ್ಗಿ ದಾಂಧಲೆ
