ಬೆಂಗಳೂರು: ಹೈದರಾಬಾದ್‌ನಿಂದ ಬೆಂಗಳೂರಿಗೆ (Bengaluru) ಬರುತ್ತಿದ್ದ ಖಾಸಗಿ ವೋಲ್ವೋ ಬಸ್ ಅಪಘಾತಕ್ಕೀಡಾಗಿದ್ದು, 40 ಮಂದಿ ಗಾಯಗೊಂಡಿರುವ ಘಟನೆ ಭಾನುವಾರ (ಇಂದು) ನಡೆದಿದೆ.
ಆಂಧ್ರಪ್ರದೇಶದ ಅನಂತಪುರ ಬಳಿ ಘಟನೆ ನಡೆದಿದೆ. ಐಚ್ಲರ್ ವಾಹನಕ್ಕೆ ಡಿಕ್ಕಿ ಹೊಡೆದ ಬಳಿಕ ಬಸ್ ಜೊತೆಗೆ ಎರಡೂ ವಾಹನಗಳು ಪೊಗುರೂರು ಸೇತುವೆಗೆ ಉರುಳಿಬಿದ್ದಿವೆ. ಇದನ್ನೂ ಓದಿ: ಬೆಂಗಳೂರು | ಪತ್ನಿಯನ್ನು ಕೊಂದು ಮೋರಿಗೆಸೆದಿದ್ದ ಪತಿ ಅರೆಸ್ಟ್


ಘಟನೆಯಲ್ಲಿ ಸುಮಾರು 40 ಪ್ರಯಾಣಿಕರು ಗಾಯಗೊಂಡಿದ್ದು, ಈ ಪೈಕಿ 10 ಜನರ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿ ಕಾರಿನ ಮೇಲೆ ಕಲ್ಲು ತೂರಾಟ – ಕಿಟಕಿ ಹಾಕದೇ ಇದ್ದಿದ್ದರೆ ನಾನು ಸಾಯುತ್ತಿದ್ದೆ ಎಂದ ದೀದಿ

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡ ಜೆಸಿಬಿ ಸಹಾಯದಿಂದ ಬಸ್ ಮೇಲೆತ್ತಲಾಗಿದೆ. ಚಾಲಕ ಸೇರಿದಂತೆ ಉಳಿದ ಪ್ರಯಾಣಿಕರನ್ನೂ ರಕ್ಷಣೆ ಮಾಡಲಾಗಿದೆ. ಸ್ಥಳೀಯ ಪೊಲೀಸರು ಘಟನಾ ಸ್ಥಳ ಪರಿಶೀಲಿಸಿದ್ದು, ಅಪಘಾತದ ನಿಖರ ಕಾರಣ ಪತ್ತೆ ಹಚ್ಚುತ್ತಿದ್ದಾರೆ. ಇದನ್ನೂ ಓದಿ: ಆರು ತಿಂಗಳ ಬಳಿಕ ಪತಿ ಕೊಲೆ ರಹಸ್ಯ ಬಾಯ್ಬಿಟ್ಟ ಪತ್ನಿ – ಖತರ್‌ನಾಕ್ ಲೇಡಿ, ಪ್ರಿಯಕರ ಅರೆಸ್ಟ್

