ಬೆಂಗಳೂರು: ಪತ್ನಿಯನ್ನು (wife) ಕೊಲೆ ಮಾಡಿ ಶವವನ್ನು ಮೋರಿಗೆ ಎಸೆದಿದ್ದ ಪಾಪಿ ಪತಿಯನ್ನು ವಿವೇಕನಗರ ಪೊಲೀಸರು ಬಂಧಿಸಿದ್ದಾರೆ.
ಗೀತಾ (48) ಹತ್ಯೆಯಾದ ಮಹಿಳೆ. ಈಕೆಯ ಪತಿ ಆಂಟೋನಿ (63) ಕೊಲೆಗೈದ ಆರೋಪಿಯಾಗಿದ್ದಾನೆ. ಈತ ಕುಡಿದು ಬಂದು ಪತ್ನಿ ಜೊತೆಗೆ ಗಲಾಟೆ ಮಾಡಿ ಬಳಿಕ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಬಳಿಕ ಶವವನ್ನು ಮೋರಿಗೆ ಎಸೆದಿದ್ದ. ಮಹಿಳೆಯ ಶವದ ಮೇಲೆ ರಕ್ತದ ಕಲೆಗಳು ಪತ್ತೆಯಾಗಿವೆ. ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯ ಮೂಲದ ಮಹಿಳೆ ಕೊಲೆ; 7 ತಿಂಗಳ ಬಳಿಕ ಪ್ರಿಯಕರ ಅರೆಸ್ಟ್
ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿತ್ತು. ಆರೋಪಿ ಆಂಟೋನಿಯನ್ನು ಪೊಲೀಸರು ಬಂಧಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬೇಡ ಸರ್, ಹೊಡೆಯುವುದು ಬಿಡಿ ಎಂದರೂ ಹೊಡೆದರು; ಸಿಗರೇಟ್‌ನಿಂದ ಸುಟ್ಟರು – ದರ್ಶನ್ ಬಗ್ಗೆ ಮಾಫಿ ಸಾಕ್ಷಿ ಪ್ರದೋಷ್ ಹೇಳಿದ್ದೇನು?



