ಬೆಂಗಳೂರು: ನಗರದಲ್ಲಿ ಕೋಳಿ ಮಾಂಸ ತ್ಯಾಜ್ಯ (Chicken Waste) ವಿಲೇವಾರಿಗೆ ಜಿಬಿಎಯಿಂದ (GBA) ಕೆ.ಜಿಗೆ 5 ರೂ. ನಿಗದಿ ಮಾಡಿದ ಆದೇಶಕ್ಕೆ ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ (Poultry Traders Association) ವಿರೋಧ ವ್ಯಕ್ತಪಡಿಸಿದೆ.
ಈ ಆದೇಶ ವಾಪಾಸ್ ತೆಗೆದುಕೊಳ್ಳುವಂತೆ ಜಿಬಿಎ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಕೋಳಿ ವರ್ತಕರ ಸಂಘದವರು ಮನವಿ ಮಾಡಿದ್ದಾರೆ. ಕೋಳಿ ತ್ಯಾಜ್ಯ ಕಚ್ಚಾ ವಸ್ತುವಾಗಿದ್ದು ಕಾರ್ಖಾನೆಯವರು ಬಳಸುತ್ತಿದ್ದಾರೆ. ಇದೀಗ ಈ ತ್ಯಾಜ್ಯ ವಿಲೇವಾರಿಗೆ ಐದು ರೂಪಾಯಿ ನಿಗದಿ ಮಾಡಿರೋದು ಏಕಪಕ್ಷೀಯ ನಿರ್ಧಾರ. ಜೊತೆಗೆ ಎರಡು – ಮೂರು ದಿನದಲ್ಲಿ ಈ ಆದೇಶ ವಾಪಾಸ್ ತೆಗೆದುಕೊಳ್ಳದಿದ್ದರೇ ಬೆಂಗಳೂರಿನ 7-8 ಸಾವಿರ ಕೋಳಿ ಅಂಗಡಿ ಮುಚ್ಚಿ ಪ್ರತಿಭಟಿಸುವ ಎಚ್ಚರಿಕೆಯನ್ನು ಕರ್ನಾಟಕ ಪೌಲ್ಟ್ರಿ ಅಸೋಸಿಯೇಷನ್ ನೀಡಿದೆ. ಇದನ್ನೂ ಓದಿ: ಲಿಪ್‌ಸ್ಟಿಕ್‌ನಲ್ಲಿ ಕ್ಯಾನ್ಸರ್‌ಕಾರಕ ಕೆಮಿಕಲ್ ಪತ್ತೆ; ಕರ್ನಾಟಕ ಆಹಾರ ಸುರಕ್ಷತಾ ಇಲಾಖೆ ಪರಿಶೀಲನೆ
ಒಂದು ದಿನಕ್ಕೆ ಬೆಂಗಳೂರಲ್ಲಿ ಅಂದಾಜು ಎರಡು ಲಕ್ಷ ಕೆ.ಜಿ ಕೋಳಿ ತ್ಯಾಜ್ಯ ಸಂಗ್ರಹವಾಗುತ್ತಿದೆ. ಏಳು ಲಕ್ಷದಷ್ಟು ಕೋಳಿ ಮಾರಾಟವಾಗುತ್ತಿದೆ. ಜೊತೆಗೆ ಕೋಳಿ ದರ ಸಹ ಹೆಚ್ಚ ಮಾಡುತ್ತೇವೆ ಎಂದು ಅಸೋಸಿಯೇಷನ್ ಹೇಳಿದೆ. ಇದನ್ನೂ ಓದಿ: ಬಾಂಗ್ಲಾ ವಲಸಿಗರಿಗೆ ಶೆಡ್ ನಿರ್ಮಿಸಲು ಜಾಗ ಬಾಡಿಗೆ; ಮಾಲೀಕರ ವಿರುದ್ಧ ಕೇಸ್



