– 23 ಮಾದರಿಗಳಲ್ಲಿ ಅಪಾಯಕಾರಿ ರಾಸಾಯನಿಕ ಅಂಶಗಳು ಪತ್ತೆ
ಬೆಂಗಳೂರು: ಲಿಪ್‌ಸ್ಟಿಕ್ ಬಳಸುವ ಮಹಿಳೆಯರಿಗೆ ಇದೊಂದು ಶಾಕಿಂಗ್ ಸುದ್ದಿ. ಕರ್ನಾಟಕದ ಆಹಾರ ಸುರಕ್ಷತಾ ಇಲಾಖೆ ನಡೆಸಿದ ಪರಿಶೀಲನೆಯಲ್ಲಿ ಕೆಲವು ಲಿಪ್‌ಸ್ಟಿಕ್ (Lipstick) ಮಾದರಿಗಳಲ್ಲಿ ಅಪಾಯಕಾರಿ ರಾಸಾಯನಿಕ (Harmful Chemicals) ಮತ್ತು ಲೋಹದ ಅಂಶಗಳು ಪತ್ತೆಯಾಗಿವೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ (Bengaluru) ಮಾರಾಟವಾಗುವ ಲಿಪ್‌ಸ್ಟಿಕ್‌ಗಳ ಮಾದರಿಗಳನ್ನು ಅಧಿಕಾರಿಗಳು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದಾರೆ. ಬ್ರಾಂಡೆಡ್ ಉತ್ಪನ್ನಗಳ ಜೊತೆಗೆ ರಸ್ತೆ ಬದಿ ಮಾರಾಟವಾಗುವ ಲಿಪ್‌ಸ್ಟಿಕ್‌ಗಳ ಸ್ಯಾಂಪಲ್‌ಗಳನ್ನೂ ಪರಿಶೀಲಿಸಲಾಗಿದೆ.
ಪರಿಶೀಲನೆ ವೇಳೆ 23 ಮಾದರಿಗಳಲ್ಲಿ ಅಪಾಯಕಾರಿ ರಾಸಾಯನಿಕ ಅಂಶಗಳು ಪತ್ತೆಯಾಗಿವೆ ಎಂದು ಆಹಾರ ಸುರಕ್ಷತಾ ಇಲಾಖೆ ತಿಳಿಸಿದೆ. ಕೆಲವು ಮಾದರಿಗಳಲ್ಲಿ ಕಾರ್ಸಿನೋಜೆನಿಕ್ ಅಂಶಗಳ ಜೊತೆಗೆ ಮೆಟಲ್ ಅಂಶಗಳೂ ಕಂಡುಬಂದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ತುಮಕೂರು | ಲೋ ಬಿಪಿಯಿಂದ ಕುಸಿದು ಬಿದ್ದು 8ನೇ ತರಗತಿ ವಿದ್ಯಾರ್ಥಿನಿ ಸಾವು


ಈ ರೀತಿಯ ರಾಸಾಯನಿಕ ಅಂಶ ಇರುವ ಲಿಪ್‌ಸ್ಟಿಕ್‌ಗಳನ್ನು ದೀರ್ಘಕಾಲ ಬಳಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಕೆಮಿಕಲ್ ಕ್ಯಾನ್ಸರ್‌ಕಾರಕ ಎಂಬ ಎಚ್ಚರಿಕೆಯನ್ನು ಇಲಾಖೆ ನೀಡಿದೆ. ಅದರಲ್ಲೂ ಕಾರ್ಸಿನೋಜೆನಿಕ್ ಅಂಶಗಳಿರುವ ಉತ್ಪನ್ನಗಳ ಬಳಕೆಯ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಈಗಾಗಲೇ ಸಂಗ್ರಹಿಸಿರುವ ಲಿಪ್‌ಸ್ಟಿಕ್ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಹಾರ ಸುರಕ್ಷತಾ ಇಲಾಖೆಯ ಆಯುಕ್ತ ಶ್ರೀನಿವಾಸ್ ಅವರು ಮಹಿಳೆಯರು ಲಿಪ್‌ಸ್ಟಿಕ್ ಖರೀದಿಸುವಾಗ ಉತ್ಪನ್ನದ ಗುಣಮಟ್ಟ, ಲೇಬಲ್, ತಯಾರಿಕೆ ಮತ್ತು ಮುಕ್ತಾಯ ದಿನಾಂಕವನ್ನು ಪರಿಶೀಲಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಅನಾರೋಗ್ಯ ವದಂತಿ; ಮೊಜ್ತಬಾ ಖಮೇನಿ ವಿಡಿಯೋ ಬಿಡುಗಡೆ ಮಾಡಿದ ಇರಾನ್

