ರಾಯಚೂರು: ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಪ್ರಕರಣದ ದೂರು ನಮ್ಮಲ್ಲಿ ದಾಖಲಾಗಿದೆ. ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ಕೇಳಬೇಕಾಗಿದೆ. ಅನುಮತಿ ಕೇಳಿದ್ದೇವೆ. ರಾಜ್ಯಪಾಲರ ನಿರ್ಧಾರ ಏನು ಎಂದು ಕಾದು ನೋಡೋಣ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ (BS Patil) ಹೇಳಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ದೂರು ದಾಖಲಾಗಿದ್ದು, ತನಿಖೆ ಆಗಿದೆ. ಚಾರ್ಜ್ಶೀಟ್ ಸಲ್ಲಿಸಲು ಲೋಕಾಯುಕ್ತ ಪೊಲೀಸರು ರಾಜ್ಯಪಾಲರ ಬಳಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದ್ದೇವೆ. ಆದರೆ ಅದರ ಡೀಟೆಲ್ಸ್, ಒಳಗಿರುವ ವಿಷಯವನ್ನ ಹೇಳೋದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ಜಮೀರ್ ಅಹ್ಮದ್‌ಗೆ ಸಂಕಷ್ಟ – ಆದಾಯ ಮೀರಿ ಆಸ್ತಿ ಗಳಿಕೆ ಕೇಸಲ್ಲಿ ಲೋಕಾ ಶಾಕ್
ಲೋಕಾಯುಕ್ತ ಎಸ್‌ಪಿ ವರ್ಗಾವಣೆ ಹಿಂದೆ ಕಾಣದ ಕೈ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದೆಲ್ಲ ಸುಳ್ಳು, ಕತೆ ಕಟ್ಟಿಕೊಳ್ಳುವುದಿದ್ದರೇ ಕತೆ ಕಟ್ಟಿಕೊಳ್ಳಬಹುದು. ಪಬ್ಲಿಕ್ ಸರ್ವಿಸ್‌ಗೆ ಬಂದ್ರೆ ವರ್ಗಾವಣೆ ಅದರ ಜೊತೆಯೇ ಇರುತ್ತದೆ. ಟ್ರಾನ್ಸಫರ್ ಅಂದ್ರೆ ಅದಕ್ಕೆ ಇನ್ಸಿಡೆಂಟ್ಸ್ ಆಫ್ ಸರ್ವಿಸ್ ಅಂತಾರೆ. ಆಡಳಿತಾತ್ಮಕ ಕಾರಣಕ್ಕೆ ವರ್ಗಾವಣೆಗಳನ್ನ ಮಾಡುತ್ತೇವೆ. ಈಗ ಅವರು ವರ್ಗಾವಣೆ ಆಗಿದ್ದಾರೆ, ಇನ್ನೂ ವರ್ಗಾವಣೆಗಳನ್ನ ಮಾಡಬೇಕಿದೆ. ಯಾರನ್ನ ಎಲ್ಲಿ? ಯಾವ ಕಡೆ ಹಾಕಬೇಕು? ಅಂತ ಚರ್ಚೆ ಮಾಡ್ತೀವಿ. ಮೂಲ ಇಲಾಖೆಗೆ ಕಳುಹಿಸಬೇಕಾ? ಆಡಳಿತಾತ್ಮಕ ಅನುಕೂಲತೆ ನೋಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆ ವಿಷಯದ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.
