ರೊಸಾರಿಯೊ: ಅರ್ಜೆಂಟೀನಾ ದಿಗ್ಗಜ ಫುಟ್ಬಾಲರ್ ಲಿಯೋನೆಲ್ ಮೆಸ್ಸಿ (Lionel Messi) ಅವರ ತಂದೆ ಜಾರ್ಜ್ ನಿಧನರಾಗಿದ್ದಾರೆ.
ದೀರ್ಘಕಾಲದ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದ 68 ವಯಸ್ಸಿನ ಜಾರ್ಜ್ (Jorge Messi) ಅವರು ರೊಸಾರಿಯೊದಲ್ಲಿ ಕೊನೆಯುಸಿರೆಳೆದಿದ್ದಾರೆ. ಮೆಸ್ಸಿಯ ಬಾಲ್ಯದ ಕ್ಲಬ್, ನೆವೆಲ್ಸ್ ಓಲ್ಡ್ ಬಾಯ್ಸ್ ಈ ವಿಚಾರವನ್ನು ದೃಢಪಡಿಸಿವೆ. ಇದನ್ನೂ ಓದಿ: ಪಂದ್ಯದ ವೇಳೆಯೇ ಸಿಡಿಲು ಬಡಿದು ಥಾಯ್ ಫುಟ್ಬಾಲ್ ಆಟಗಾರ ಸಾವು
ಜಾರ್ಜ್ ತನ್ನ ಕೊನೆಯ ತಿಂಗಳುಗಳನ್ನು ರೊಸಾರಿಯೊದಲ್ಲಿನ ವೈದ್ಯಕೀಯ ಕೇಂದ್ರ ಮತ್ತು ತನ್ನ ಮನೆಯಲ್ಲಿ ಕಳೆದರು. ಪತ್ನಿ ಸೆಲಿಯಾ ಮತ್ತು ಅವರ ಮಕ್ಕಳಾದ ರೊಡ್ರಿಗೋ, ಮಟಿಯಾಸ್ ಮತ್ತು ಮರಿಯಾ ಸೋಲ್ ಅವರೊಂದಿಗೆ ಇದ್ದರು ಎಂದು ಕುಟುಂಬ ತಿಳಿಸಿದೆ.
ಫಿಫಾ ವಿಶ್ವಕಪ್ ನಂತರ ಲಿಯೋನೆಲ್ ಮೆಸ್ಸಿ ತನ್ನ ತಂದೆಯೊಂದಿಗೆ ಸಮಯ ಕಳೆದಿದ್ದರು. ನಂತರ ತಮ್ಮ ಕ್ಲಬ್ ಇಂಟರ್ ಮಿಯಾಮಿಗೆ ಮತ್ತೆ ಸೇರಿಕೊಂಡರು. ಒಂದು ವಾರದ ಹಿಂದೆ ಅವರು ಮತ್ತೆ ತಂಡಕ್ಕೆ ಮರಳಿದ್ದರು. ಇದನ್ನೂ ಓದಿ: ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ತೆರೆ: ಭಾರತಕ್ಕೆ ಧ್ವಜ ಹಸ್ತಾಂತರ
ಜಾರ್ಜ್ ತಮ್ಮ ವೃತ್ತಿಜೀವನದುದ್ದಕ್ಕೂ ಮಗ ಲಿಯೋನೆಲ್ ಅವರೊಂದಿಗೆ ನಿಕಟವಾಗಿ ಜೊತೆಗಿದ್ದರು. ಪುತ್ರನಿಗೆ ಬೆಂಬಲದ ನಿರ್ಣಾಯಕ ಆಧಾರಸ್ತಂಭವಾಗಿದ್ದರು. ಹಲವಾರು ವರ್ಷಗಳ ಕಾಲ ಅವರ ಪ್ರತಿನಿಧಿಯಾಗಿ ಗುರುತಿಸಿಕೊಂಡಿದ್ದರು.



