ಚಿಕ್ಕಮಗಳೂರು: ಮುಂಗಾರು ಮಳೆ(Monsoon) ಕೊರತೆಯಿಂದ ಚಿಕ್ಕಮಗಳೂರು ಜಿಲ್ಲೆಯ(chikmagaluru) ಜೀವನಾಡಿಯಾಗಿರುವ ಭದ್ರಾ ನದಿಯ(Bhadra river) ನೀರಿನ ಮಟ್ಟ ತೀವ್ರವಾಗಿ ಕುಸಿದಿದೆ. ಸುಮಾರು 30 ವರ್ಷಗಳ ಬಳಿಕ ನದಿಯ ಒಡಲು ಬರಿದಾಗಿರುವ ದೃಶ್ಯ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಸೂಪರ್ ಎಲ್ ನಿನೋ ಪರಿಣಾಮದಿಂದ ಈ ಬಾರಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿದಿಲ್ಲ. ಇದರ ಪರಿಣಾಮ ಭದ್ರಾ ನದಿಯ ನೀರಿನ ಮಟ್ಟ ತಳಮಟ್ಟಕ್ಕೆ ಇಳಿದಿದೆ. ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಭರ್ತಿಯಾಗಿ ಹರಿಯುತ್ತಿದ್ದ ಭದ್ರಾ ನದಿಯಲ್ಲಿ ಈಗ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ನದಿಯ ಕೆಳಭಾಗದಲ್ಲಿದ್ದ ಕಲ್ಲು-ಬಂಡೆಗಳು ಕೂಡ ಈಗ ಗೋಚರಿಸುತ್ತಿವೆ.ಇದನ್ನೂ ಓದಿ: 4 ರಾಜ್ಯಗಳಲ್ಲಿ ವೋಟರ್ ಐಡಿ – ಪ್ರಕಾಶ್ ರಾಜ್‌ಗೆ ಬೆಂಗಳೂರು ಕೋರ್ಟ್‌ನಿಂದ ಜಾಮೀನು ರಹಿತ ವಾರಂಟ್ ಜಾರಿ
ಬಾಳೆಹೊನ್ನೂರು ಸಮೀಪದ ಸೇತುವೆ ಬಳಿ ನೀರಿನ ಮಟ್ಟ ಸಂಪೂರ್ಣ ಕುಸಿದಿದೆ. ಒಂದು ಕಾಲದಲ್ಲಿ ನದಿಗೆ ಕಾಲಿಡಲು ಹೆದರುತ್ತಿದ್ದ ಸ್ಥಳದಲ್ಲಿ ಇದೀಗ ಯುವಕರು ವಾಲಿಬಾಲ್ ಮತ್ತು ಕ್ರಿಕೆಟ್ ಆಡುತ್ತಿರುವ ದೃಶ್ಯ ಕಂಡುಬರುತ್ತಿದೆ. ನೀರಿನಿಂದ ತುಂಬಿ ಹರಿಯುತ್ತಿದ್ದ ಜಾಗ ಈಗ ಮೈದಾನದಂತೆ ಮಾರ್ಪಟ್ಟಿದೆ. ಈ ದೃಶ್ಯ ಸ್ಥಳೀಯರನ್ನು ಆತಂಕಕ್ಕೆ ದೂಡಿದೆ.
ಕಳಸ ತಾಲೂಕಿನ ಕುದುರೆಮುಖ ಪ್ರದೇಶದಲ್ಲಿ ಹುಟ್ಟುವ ಭದ್ರಾ ನದಿ ಸಾವಿರಾರು ಜನರ ಬದುಕಿಗೆ ಆಧಾರವಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗದಿದ್ದರೆ ನದಿಯ ನೀರು ಇನ್ನಷ್ಟು ಕಡಿಮೆಯಾಗುವ ಭೀತಿ ಎದುರಾಗಿದೆ. ಇದರಿಂದ ಕುಡಿಯುವ ನೀರು, ಕೃಷಿ ಮತ್ತು ಪರಿಸರದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ.ಇದನ್ನೂ ಓದಿ: ತಾಯಿಯ ಗೌರವವನ್ನು ಅಸ್ಥಿರಗೊಳಿಸಿದರೆ ಜನ ಅದನ್ನು ಕ್ಷಮಿಸಲ್ಲ, ಪಕ್ಷನೂ ಕ್ಷಮಿಸಲ್ಲ: ಅಡ್ಡ ಮತದಾನಕ್ಕೆ ಸೋಮಣ್ಣ ಕಿಡಿ
