ತುಮಕೂರು: ಪಕ್ಷ ತಾಯಿ ಇದ್ದ ಹಾಗೆ. ಆ ತಾಯಿಯ ಗೌರವವನ್ನು ನಾನು ಅಸ್ಥಿರಗೊಳಿಸಿದರೆ ಜನ ಅದನ್ನು ಕ್ಷಮಿಸಲ್ಲ, ಪಕ್ಷನೂ ಕ್ಷಮಿಸಲ್ಲ ಎಂದು ಕೇಂದ್ರ ಸಚಿವ ವಿ.ಸೋಮಣ್ಣ (V Somanna) ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಅಡ್ಡ ಮತದಾನ (Cross Voting) ಆಗಿರುವ ವಿಚಾರವಾಗಿ ತುಮಕೂರಿನಲ್ಲಿ(Tumakuru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪಾಪದ ಕೆಲಸಕ್ಕೆ ಮನೆಯಲ್ಲೂ ನೆಮ್ಮದಿ ಸಿಗಲ್ಲ. ಮೈತ್ರಿಗೆ ಇದರಿಂದ ಯಾವುದೇ ಭಂಗ ಆಗಲ್ಲ. ಇದಕ್ಕಿಂತ ಹೇಯವಾದ ಕೆಲಸ ಮತ್ತೊಂದಿಲ್ಲ. ನಾಯಕತ್ವ ವಿಫಲ ಮತ್ತೊಂದು ಮಗದೊಂದನ್ನು ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಆದರೆ ಶಾಸಕರು ಮಾಡಿರೋದು ಹೇಸಿಗೆ ಕೆಲಸ. ಇಂಥ ಜನ ಜನಪ್ರತಿನಿಧಿ ಆಗುವ ಬದಲು ಮರ್ಯಾದೆಯಿಂದ ರಾಜೀನಾಮೆ ಕೊಟ್ಟು ಮನೆಯಲ್ಲಿ ಇರೋದು ಒಳ್ಳೆಯದು. ರಾಜ್ಯಾಧ್ಯಕ್ಷ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಒಂದು ಶಾಸಕನ ಕರ್ತವ್ಯ, ನಿಷ್ಠೆ ಗಮನದಲ್ಲಿ ಇಟ್ಟುಕೊಳ್ಳದೇ ನೀವು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಇಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ನಾಳೆ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ರಾಜೀನಾಮೆ
ನನಗೆ ಪೂರ್ತಿ ಮಾಹಿತಿ ಇಲ್ಲ. ನಾನು ಯಾರ ಜೊತೆನೂ ಮಾತಾಡಿಲ್ಲ. ರಾಷ್ಟ್ರಕ್ಕೆ ಬಿಜೆಪಿಯ ಕೊಡುಗೆ ಬಹಳಷ್ಟಿದೆ. ಬಿಜೆಪಿ ಕೊಡುಗೆ ಅಪಾರವಾದದ್ದು ಎಂದು ಇಡೀ ವಿಶ್ವಕ್ಕೆ ಗೊತ್ತು. ಕರ್ನಾಟಕದಲ್ಲಿ ಇದ್ದ ನಮ್ಮ ಶಾಸಕರು ಈ ಪರಿಸ್ಥಿತಿ ಅರ್ಥ ಮಾಡಿಕೊಳ್ಳದೇ ಅಡ್ಡಮತದಾನ ಮಾಡಿರೋದು ಪಾಪದ ಕೆಲಸ. ಆ ಪಾಪದ ಕೆಲಸ ನಾವು ಯಾರು ನಿರೀಕ್ಷೆ ಮಾಡಿರಲಿಲ್ಲ. ಇದು ಆಗಬಾರದಿತ್ತು, ಆಗಿದೆ. ಇದನ್ನು ವರಿಷ್ಠರು ಗಮನಿಸುತ್ತಾರೆ. ಯಾರು ವೀಕು, ಯಾರು ದೊಡ್ಡೋರು ಅನ್ನೋದು ಮುಖ್ಯ ಅಲ್ಲ. ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಇಡೀ ವಿಶ್ವ ಆನಂದ ಪಡುವಾಗ ಇಂಥಹ ಒಂದು ಹೇಯವಾದ ತೀರ್ಮಾನ ಮಾಡಿದ್ದೀರಲ್ಲ, ನಿಮಗೆ ಇದು ಒಳ್ಳೆದಲ್ಲ, ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಚಳ್ಳಕೆರೆ ಸಾರಿಗೆ ಬಸ್ ನಿಲ್ದಾಣ ಬಳಿ ಕರಡಿ ಪ್ರತ್ಯಕ್ಷ – ಸಿಸಿಟಿವಿಯಲ್ಲಿ ದೃಶ್ಯ ಸೆರೆ
