ಕೋಲ್ಕತ್ತಾ: ಸಿಪಿಐ(ಎಂ) ನಾಯಕ ತಾಜ್ ಉದ್ದೀನ್ ಮಲ್ಲಿಕ್ (Taj Uddin Mallick) ಅವರ ಮನೆ ಮೇಲೆ ದಾಳಿ ನಡೆಸಿದ ಪಶ್ಚಿಮ ಬಂಗಾಳ ಪೊಲೀಸರು ಬಾಂಬ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಅಕ್ಟೋಬರ್ 10ರಂದು ಸೋಮವಾರ ಪಶ್ಚಿಮ ಬಂಗಾಳ ಪೊಲೀಸರು ಬರುಯಿಪುರದ (Baruipurand) ಭಾನಾರ್‌ನ (Bhanar) ಶಾಕ್ಷಹರ್ (Shakshahar) ಪ್ರದೇಶದಲ್ಲಿರುವ ಉದ್ದೀನ್ ಮಲ್ಲಿಕ್ ಅವರ ನಿವಾಸದ ಮೇಲೆ ದಾಳಿ ನಡೆಸಿದರು. ದಾಳಿ ವೇಳೆ ಬಕೆಟ್‍ಗಳಲ್ಲಿ ಸಂಗ್ರಹಿಸಿಟ್ಟಿದ್ದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಉದ್ದೀನ್ ಮಲ್ಲಿಕ್ ಅನ್ನು ಬಂಧಿಸಿ ಮಂಗಳವಾರ ಬರುಯಿಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
Advertisement
Advertisement
ಈ ಕುರಿತಂತೆ ಪ್ರತಿಕ್ರಿಯಿಸಿದ ಟಿಎಂಸಿ ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಬಹರುಲ್ ಇಸ್ಲಾಂ ಅವರು, ಈ ಪ್ರದೇಶದಲ್ಲಿ ಭಯೋತ್ಪಾನೆಗೆ ಬೇಕಾದ ಬಾಂಬ್‍ಗಳನ್ನು ತಯಾರಿಸಲಾಗುತ್ತಿದೆ. ಇಲ್ಲಿ ಬಾಂಬ್ ತಯಾರಿಸಲು ಇನ್ನೂ ಮುಂದೆ ಬಿಡುವುದಿಲ್ಲ. ಸುಮಾರು 34 ವರ್ಷಗಳಿಂದ ಬಾಂಬ್ ತಯಾರಿಕೆ ಕುರಿತಂತೆ ಈ ಪ್ರದೇಶದಲ್ಲಿ ರಾಜಕೀಯ ನಡೆಯುತ್ತಿತ್ತು. ಸಿಪಿಐ(ಎಂ) ಮತ್ತು ಅದರ ಸಹೋದರ ಸಂಘಟನೆಗಳು ಕಳೆದ ಕೆಲವು ವಾರಗಳಲ್ಲಿ ಈ ಪದ್ಧತಿಯನ್ನು ನವೀಕರಿಸಿವೆ. ಅವರು ಭಯೋತ್ಪಾದನೆಯನ್ನು ಪುನರುಜ್ಜೀವನಗೊಳಿಸಲು ಬಯಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement
Advertisement
ಈ ಆರೋಪಕ್ಕೆ, ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದಿಂದಲೇ ಟಿಎಂಸಿ ಆಡಳಿತ ಕೊನೆಗೊಳ್ಳಲಿದೆ. ಆದ್ದರಿಂದ ಅವರು ನಮ್ಮ ನಾಯಕರ ನೈತಿಕ ಸ್ಥೈರ್ಯವನ್ನು ಮುರಿಯಲು ಪ್ರಯತ್ನಿಸುತ್ತಿದ್ದಾರೆ ಮತ್ತು ತಾಜ್ ಉದ್ದೀನ್ ಮಲ್ಲಿಕ್ ಅವರನ್ನು ಬಂಧಿಸಿದ್ದಾರೆ ಎಂದು ದಕ್ಷಿಣ 24 ಪರಗಣಗಳ ಸಿಪಿಐ(ಎಂ) ನಾಯಕ ಉತ್ಪಲ್ ಮೊಂಡಲ್ ತಿರುಗೇಟು ನೀಡಿದ್ದಾರೆ.