ರಿಯಾದ್: ಕಳೆದ 10 ದಿನಗಳಲ್ಲಿ ಮಾದಕವಸ್ತು ಸಂಬಂಧಿತ ಅಪರಾಧಗಳಿಗಾಗಿ ಸೌದಿ ಅರೇಬಿಯಾ (Saudi Arabia) 12 ಜನರನ್ನು ಗಲ್ಲಿಗೇರಿಸಿದೆ. ಇವುಗಳಲ್ಲಿ ಕೆಲವು ಅಪರಾಧಿಗಳನ್ನು ಕತ್ತಿಯಿಂದ ಶಿರಚ್ಛೇದ (Beheading) ಮಾಡಲಾಗಿದೆ ಎಂದು ವರದಿಯೊಂದು ತಿಳಿಸಿದೆ.
ಮಾದಕವಸ್ತು ಸಂಬಂಧಿತ ಆರೋಪದ ಮೇಲೆ ಜೈಲಿನಲ್ಲಿದ್ದ 12 ಜನರಿಗೆ ಮರಣದಂಡನೆ (Death Penalty) ವಿಧಿಸಲಾಗಿದೆ. ಅದರಲ್ಲಿ ಮೂವರು ಪಾಕಿಸ್ತಾನಿಗಳು, 4 ಸಿರಿಯನ್ನರು, ಇಬ್ಬರು ಜೋರ್ಡಾನ್ ಮೂಲದವರು ಹಾಗೂ ಮೂವರು ಸೌದಿಗಳು ಸೇರಿದ್ದಾರೆ ಎಂದು ವರದಿಯಾಗಿದೆ.
Advertisement
Advertisement
ಈ ವರ್ಷ ಮಾರ್ಚ್‌ನಲ್ಲಿ ಸೌದಿ ಅರೇಬಿಯಾದ ಆಧುನಿಕ ಇತಿಹಾಸದಲ್ಲೇ ಅತಿ ದೊಡ್ಡ ಸಾಮೂಹಿಕ ಮರಣದಂಡನೆ ನೀಡಲಾಗಿತ್ತು. ಹತ್ಯೆ, ಉಗ್ರಗಾಮಿ ಗುಂಪು ಸೇರಿದಂತೆ ವಿವಿಧ ಅಪರಾಧಗಳಿಂದ ಶಿಕ್ಷೆಗೊಳಗಾದ 81 ಜನರನ್ನು ಗಲ್ಲಿಗೇರಿಸಲಾಗಿತ್ತು. ಇದನ್ನೂ ಓದಿ: ಪಂಪ್‌ವೆಲ್ ಫ್ಲೈ ಓವರ್ ಬಳಿ ಬಾಂಬ್ ಸ್ಟೋಟಿಸಲು ಮುಂದಾಗಿದ್ದ ಶಾರೀಕ್
Advertisement
ಕಳೆದ 2 ವರ್ಷಗಳ ಹಿಂದೆ ಸೌದಿ ಅರೇಬಿಯಾದಲ್ಲಿ ಮರಣದಂಡನೆಗಳಂತಹ ಶಿಕ್ಷೆಗಳನ್ನು ಕಡಿಮೆ ಮಾಡುವುದಾಗಿ ಅಲ್ಲಿನ ಆಡಳಿತ ಪ್ರತಿಜ್ಞೆ ಮಾಡಿತ್ತು. 2018ರಲ್ಲಿ ಟರ್ಕಿಯಲ್ಲಿ ಅಮೆರಿಕದ ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆಯ ಬಳಿಕ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಹೊಸ ಆದೇಶವನ್ನು ನೀಡಿದ್ದರು.
Advertisement
2018ರ ಬಳಿಕ ಸೌದಿ ಆಡಳಿತ ಮರಣದಂಡನೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದು, ಕೊಲೆ ಅಥವಾ ನರಹತ್ಯೆಯ ತಪ್ಪಿತಸ್ಥರನ್ನು ಮಾತ್ರವೇ ಮರಣದಂಡನೆಗೆ ಒಳಪಡಿಸಲು ಪ್ರಾರಂಭಿಸಿತು. ಇದೀಗ ಮತ್ತೆ ಮರಣದಂಡನೆ ಶಿಕ್ಷೆಗಳನ್ನು ಹೆಚ್ಚಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಇಂಡೋನೇಷ್ಯಾ ಬಳಿಕ ಸೊಲೊಮನ್ ದ್ವೀಪದಲ್ಲಿ ಭಾರೀ ಭೂಕಂಪ – ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆ ದಾಖಲು