CricketLatestLeading NewsMain PostSports

ದುಬೈನಲ್ಲಿ ರವೀಂದ್ರ ಜಡೇಜಾ ಎಡವಟ್ಟು – BCCI ಕೆಂಡಾಮಂಡಲ

ಮುಂಬೈ: ಟೀಂ ಇಂಡಿಯಾದ ಸ್ಟಾರ್ ಆಲ್‍ರೌಂಡರ್ ರವೀಂದ್ರ ಜಡೇಜಾ (Ravindra Jadeja) ಮೊಣಕಾಲಿನ ಗಾಯಕ್ಕೆ ತುತ್ತಾಗಿ ಇದೀಗ ಟಿ20 ವಿಶ್ವಕಪ್‍ನಿಂದಲೂ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ಈ ನಡುವೆ ಏಷ್ಯಾಕಪ್ (Asia Cup) ಟೂರ್ನಿಗಾಗಿ ದುಬೈಗೆ ತೆರಳಿದಾಗ ಜಡೇಜಾ ಮಾಡಿದ ಎಡವಟ್ಟಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕೆಂಡಾಮಂಡಲವಾಗಿದೆ.

ಹೌದು ಏಷ್ಯಾಕಪ್‍ನ ಮೊದಲೆರಡು ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಏಷ್ಯಾಕಪ್ ಗೆಲ್ಲುವ ನಿರೀಕ್ಷೆ ಮೂಡಿಸಿದ್ದ ಭಾರತ ತಂಡಕ್ಕೆ ಸೂಪರ್ ಫೋರ್ ಹಂತಕ್ಕೂ ಮುನ್ನ ಶಾಕ್ ಎದುರಾಗಿತ್ತು. ತಂಡದ ಸ್ಟಾರ್ ಆಟಗಾರನಾಗಿ ಗುರುತಿಸಿಕೊಂಡಿದ್ದ ಜಡೇಜಾ ಗಾಯಗೊಂಡು ಟೂರ್ನಿಯಿಂದ ಹೊರ ನಡೆದರು. ಆ ಬಳಿಕ ಸೋಲಿನತ್ತ ಮುಖ ಮಾಡಿದ ಭಾರತ ಸೂಪರ್ ಫೋರ್ ಹಂತದಲ್ಲೇ ಮುಗ್ಗರಿಸಿ ನಿರಾಸೆ ಮೂಡಿಸಿತು. ಇದನ್ನೂ ಓದಿ: ದ್ರಾವಿಡ್ ಕೋಚ್ ಆಗಿ ಹನಿಮೂನ್ ಅವಧಿ ಮುಗಿದಿದೆ ನೆನಪಿರಲಿ: ಸಬಾ ಕರೀಂ ಟಾಂಗ್

ಇತ್ತ ಜಡೇಜಾ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಕೆ ಕಾಣುತ್ತಿದ್ದಾರೆ. ಆದರೆ ಟಿ20 ವಿಶ್ವಕಪ್ ಆಡುವುದು ಅನುಮಾನ ಹಾಗಾಗಿ ಬಿಸಿಸಿಐ ಗಾಯದ ಕುರಿತು ತನಿಖೆ ನಡೆಸಿದಾಗ ಜಡೇಜಾರ ಎಡವಟ್ಟು ಬಯಲಾಗಿದೆ. ದುಬೈಗೆ ಏಷ್ಯಾಕಪ್‍ಗಾಗಿ ತೆರಳಿದ ಜಡೇಜಾ, ಅಲ್ಲಿ ಜಲ ಸಾಹಸ ಕ್ರೀಡೆ ಆಡಲು ಹೋಗಿ ಪೆಟ್ಟು ಮಾಡಿಕೊಂಡಿದ್ದರು. ಆ ಬಳಿಕ ಜಡೇಜಾ ಪಂದ್ಯವಾಡಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮಟ್ಟಿಗೆ ತೀವ್ರ ಗಾಯಕ್ಕೊಳಗಾಗಿದ್ದರು. ಇದನ್ನು ಅರಿತ ಬಿಸಿಸಿಐ ಜಡೇಜಾ ವಿರುದ್ಧ ಅಸಮಾಧಾನ ಹೊರಹಾಕಿದೆ. ನಾವು ಟಿ20 ವಿಶ್ವಕಪ್ ಗಮನದಲಿಟ್ಟುಕೊಂಡು ತಂಡವನ್ನು ಉತ್ತಮವಾಗಿ ಕಟ್ಟಲು ಯೋಜಿಸಿದರೆ, ಆಟಗಾರರು ಈ ಬಗ್ಗೆ ಗಮನ ಹರಿಸದೆ ಗಾಯಗೊಂಡು ತಂಡದಿಂದ ಹೊರಗುಳಿಯುತ್ತಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ:  ಅನುಷ್ಕಾ ಶರ್ಮಾ ಐರನ್ ಲೇಡಿ, ವಿರಾಟ್ ಕೊಹ್ಲಿ ಮ್ಯಾನ್ ಆಫ್ ಸ್ಟೀಲ್: ಶೋಯೆಬ್ ಅಕ್ತರ್

ದ್ರಾವಿಡ್, ರೋಹಿತ್ ವಿರುದ್ಧ ಸಿಡಿಮಿಡಿ
ಜಡೇಜಾಗೆ ಜಲ ಸಾಹಸ ಕ್ರೀಡೆಯಲ್ಲಿ ಭಾಗವಹಿಸದಂತೆ ಕೋಚ್ ದ್ರಾವಿಡ್ (Rahul Dravid) ಹೇಳಿದ್ದರು. ಆದರೂ ಜಡೇಜಾ ಈ ಮಾತನ್ನು ಕೇಳದೆ ಭಾಗವಹಿಸಿದ್ದರು ಎಂದು ಮೂಲಗಳಿಂದ ವರದಿಯಾಗಿದೆ. ಈ ಬಗ್ಗೆ ದ್ರಾವಿಡ್ ಮತ್ತು ರೋಹಿತ್ ಶರ್ಮಾಗೂ ಬಿಸಿಸಿಐ ಜಾಡಿಸಿದೆ. ಈಗಾಗಲೇ ಈ ಬಗ್ಗೆ ಯಾವುದೇ ತನಿಖೆ ನಡೆಯದಿದ್ದರೂ ಜಡೇಜಾ ಗಾಯದಿಂದ ಚೇತರಿಕೆ ಕಂಡ ಬಳಿಕ ತನಿಖೆಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ.

Live Tv

Leave a Reply

Your email address will not be published.

Back to top button