LatestBellaryDistrictsMain Post

ಅಲ್ಪಸಂಖ್ಯಾತ ಮುಖಂಡರನ್ನ ರಾಜ್ಯಾಧ್ಯಕ್ಷರನ್ನಾಗಿ ಘೋಷಣೆ ಮಾಡಲಿ – ಸಿದ್ದರಾಮಯ್ಯಗೆ ಶ್ರೀರಾಮುಲು ಸವಾಲು

ಬಳ್ಳಾರಿ: ಚುನಾವಣೆ ಪ್ರಚಾರದ ಭರಾಟೆಯಲ್ಲಿ ಸಿದ್ದರಾಮಯ್ಯ ತಾವೊಬ್ಬ ಮಾಜಿ ಮುಖ್ಯಮಂತ್ರಿ ಅನ್ನೊದನ್ನ ಮರಿತಿದ್ದಾರೆ. ಚುನಾವಣೆ ಬಂದಾಗ ಮಾತ್ರ ದಲಿತರು, ಅಲ್ಪಸಂಖ್ಯಾತರು ನೆನಪಾಗುತ್ತಾರೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ಧವಾಗಿ ಕಿಡಿಕಾರಿದ್ದಾರೆ.

bjp - congress

ಬಳ್ಳಾರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿ ಗೆಲವು ನಿಶ್ಚಿತವಾಗಿದೆ. ಚುನಾವಣೆ ಪ್ರಚಾರದ ಭರಾಟೆಯಲ್ಲಿ ಸಿದ್ದರಾಮಯ್ಯ ತಾವೊಬ್ಬ ಮಾಜಿ ಮುಖ್ಯಮಂತ್ರಿ ಅನ್ನೊದನ್ನ ಮರೆತು ದಲಿತರು, ಅಲ್ಪಸಂಖ್ಯಾತರು, ಸೂಟಕೇಸ್ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ಚುನಾವಣೆ ಬಂದಾಗ ಮಾತ್ರ ದಲಿತರು, ಅಲ್ಪಸಂಖ್ಯಾತರು ನೆನಪಾಗುತ್ತಾರೆ. ದಲಿತರು,ಅಲ್ಪಸಂಖ್ಯಾತರ ಕಾಂಗ್ರೆಸ್‍ಗೆ ಸೀಮಿತ ಎನ್ನುವಂತೆ ಮುದ್ರೆ ಹಾಕಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ:  ಹೊಸ ಪಕ್ಷ ಸ್ಥಾಪನೆ ಖಚಿತಪಡಿಸಿದ ಅಮರೀಂದರ್ ಸಿಂಗ್ – ಬಿಜೆಪಿ ಜೊತೆಗೆ ಹೊಂದಾಣಿಕೆ

SIDDU 1 1 medium

ಕೇವಲ ಚುನಾವಣೆ ಬಂದಾಗ ಮಾತ್ರ ಕಾಂಗ್ರಸ್ ನವರಿಗೆ ದಲಿತರು, ಅಲ್ಪಸಂಖ್ಯಾತರ ನೆನಪಾಗುತ್ತಾರೆ. ನಾನು ಕಾಂಗ್ರೆಸ್ ನವರಿಗೆ ಸವಾಲು ಹಾಕುತ್ತೆನೆ. ನಿಮ್ಮ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನ ದಲಿತರನ್ನ ಘೋಷಣೆ ಮಾಡಿ. ಅಲ್ಪಸಂಖ್ಯಾತ ಮುಖಂಡರನ್ನ ರಾಜ್ಯಾಧ್ಯಕ್ಷರನ್ನಾಗಿ ಘೋಷಣೆ ಮಾಡಲಿ ಎಂದು ಕಾಂಗ್ರೆಸ್‍ಗೆ ಸವಾಲು ಹಾಕಿದ್ದಾರೆ. ಇದನ್ನೂ ಓದಿ:  ಕುಚ್ಚಲಕ್ಕಿ ರೊಟ್ಟಿ ಮಾಡಿದ ರಾಬರ್ಟ್ ನಟಿ ಆಶಾ ಭಟ್

60 ವರ್ಷದಿಂದ ದಲಿತರು ಮತ್ತು ಮುಸ್ಲಿಮರನ್ನ ಓಟ್ ಬ್ಯಾಂಕ್ ಆಗಿ ಬಳಸಿಕೊಂಡಿದ್ದಿರಿ, ಅವರ ಉದ್ಧಾರಕ್ಕಾಗಿ ಏನು ಕೆಲಸ ಮಾಡಿಲ್ಲ. ನಿಮಗೆ ತಾಕತ್ತಿದ್ದರೆ ಮಲ್ಲಿಕಾರ್ಜುನ ಖರ್ಗೆ ಮತ್ತು ಜಿ. ಪರಮೇಶ್ವರ ಮುಂದಿನ ಸಿಎಂ ಅಭ್ಯರ್ಥಿ ಅಂತಾ ಘೋಷಣೆ ಮಾಡಿ. ಇದು ಸಿದ್ದರಾಮಯ್ಯನವರಿಗೆ ನನ್ನ ಸವಾಲು ಎಂದು ಹೇಳಿದ್ದಾರೆ.

ಡಿಸಿಎಂ ಸ್ಥಾನ ನನಗೆ ಕೈ ತಪ್ಪಲು ಯಾರು ಪ್ರಯತ್ನ ಪಟ್ಟಿಲ್ಲ. ಸಾಮಾಜಿಕ ನ್ಯಾಯ ದಡಿ ಪಕ್ಷ ತೀರ್ಮಾನ ಕೈಗೊಳ್ಳಲಿದೆ. ಬರುವ ದಿನಗಳಲ್ಲಿ ಡಿಸಿಎಂ ಹಂಚಿಕೆ ಮಾಡಿದ್ದೆ ಆದಲ್ಲಿ, ನನಗೆ ಡಿಸಿಎಂ ಸ್ಥಾನ ಸಿಗಲಿದೆ ಎನ್ನುವ ವಿಶ್ವಾಸ ನನಗಿದೆ ಎಂದಿದ್ದಾರೆ.

Related Articles

Leave a Reply

Your email address will not be published. Required fields are marked *