ಕೋಲ್ಕತ್ತಾ: ಭಂಗಾರ್ ಸ್ಫೋಟ ಪ್ರಕರಣದ (Bhangar Blast Case) ಪ್ರಮುಖ ಆರೋಪಿ ತೃಣಮೂಲ ಕಾಂಗ್ರೆಸ್‌ನ (Trinamool Congress) ಮಾಜಿ ಶಾಸಕ ಸಾಕತ್ ಮೊಲ್ಲಾ (Saokat Molla) ಅವರನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಈ ಬಂಧನದಿಂದ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿದೆ.
ಸಾಕತ್ ಮೊಲ್ಲಾ ತಲೆಮರೆಸಿಕೊಂಡಿದ್ದಾರೆ ಎಂದು ಘೋಷಿಸಿದ ಕೆಲವೇ ಗಂಟೆಗಳ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ ಶುಕ್ರವಾರ (ಜೂ.5) ರಾತ್ರಿ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಅವರನ್ನು ಬಂಧಿಸಿದೆ. ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಿದ್ಧತೆ ನಡೆದಿದೆ ಎಂದು ಎನ್ಐಎ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಮಾಜಿ MLC ಅಪಹರಣಕ್ಕೆ ಟ್ವಿಸ್ಟ್ – 2 ಕೋಟಿ ಕಾರಿನ ಸ್ಕ್ರಾಚ್ ತಂದಿಟ್ಟ ಆಪತ್ತು, ನಿವೃತ್ತ ಸೈನಿಕನಿಂದಲೇ ಕಿಡ್ನ್ಯಾಪ್
NIA has arrested former TMC MLA Soukat Mollah from Bhangar in a bomb blast case.
Mamata Banerjee had declared him her best candidate.
Mach Chor Shoukat is arrested. pic.twitter.com/2cxGQuQuwI
— Facts (@BefittingFacts) June 5, 2026
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರ ಮಗಳು, ನನ್ನ ತಂದೆ ಮನೆಯಲ್ಲಿ ಇರಲಿಲ್ಲ. ಅವರು ವೈಯಕ್ತಿಕ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಚಿಂಗ್ರಿಘಾಟ್ ಬಳಿ ಅವರು ಅಧಿಕಾರಿಗಳಿಗೆ ಶರಣಾದರು ಎಂದು ಮಾಹಿತಿ ನೀಡಿದ್ದಾರೆ.
ಜೂ.5 ರಂದು ಎನ್‌ಐಎ ಅಧಿಕಾರಿಗಳು ಅವರ ನಿವಾಸ ಮತ್ತು ದಕ್ಷಿಣ 24 ಪರಗಣ ಜಿಲ್ಲೆಯಾದ್ಯಂತ ಅವರಿಗೆ ಸಂಬಂಧಿಸಿದ ಹಲವಾರು ಸ್ಥಳಗಳಲ್ಲಿ ವ್ಯಾಪಕ ಶೋಧ ನಡೆಸಿದ್ದರು. ಮೌಖಾಲಿ, ಬರುಯಿಪುರ ಮತ್ತು ಸೋನಾರ್‌ಪುರದಲ್ಲಿನ ಸ್ಥಳಗಳ ಮೇಲೆ ಎನ್‌ಐಎ ತಂಡಗಳು ದಾಳಿ ನಡೆಸಿದ್ದವು. ಅಲ್ಲದೇ ಬಾಂಬ್ ತಯಾರಿಕೆಗೆ ಬಳಸುವ ಕಚ್ಚಾ ವಸ್ತುಗಳ ಸಾಗಾಟ ಮಾಡಿದ್ದ ವಾಹನದ ಚಾಲಕನನ್ನು ಬಂಧಿಸಿದ್ದರು.
ಕ್ಯಾನಿಂಗ್ ಪುರ್ಬಾ ವಿಧಾನಸಭಾ ಕ್ಷೇತ್ರದಿಂದ 2016 ಮತ್ತು 2021 ರಲ್ಲಿ ಚುನಾವಣೆಗಳಲ್ಲಿ ಮೊಲ್ಲಾ ಗೆದ್ದಿದ್ದರು. ಅವರಿಗೆ ಒದಗಿಸಿದ್ದ ಭದ್ರತೆಯನ್ನು ಇತ್ತೀಚೆಗೆ ರಾಜ್ಯ ಸರ್ಕಾರ ಹಿಂಪಡೆದಿತ್ತು.
ಮಾರ್ಚ್ 19 ರಂದು ದಕ್ಷಿಣ 24 ಪರಗಣ ಜಿಲ್ಲೆಯ ದಕ್ಷಿಣ ಬಮುನಿಯಾ ಗ್ರಾಮದಲ್ಲಿ ಬಾಂಬ್‌ಗಳನ್ನು ತಯಾರಿಸುತ್ತಿದ್ದಾಗ ಕಚ್ಚಾ ಬಾಂಬ್ ಸ್ಫೋಟಗೊಂಡಿತ್ತು. ಈ ಸ್ಫೋಟದಲ್ಲಿ ಒಬ್ಬರು ಸಾವನ್ನಪ್ಪಿ, ಮೂವರು ತೀವ್ರವಾಗಿ ಗಾಯಗೊಂಡಿದ್ದರು. ಇದನ್ನೂ ಓದಿ: ದೆಹಲಿ ರೆಸ್ಟೋರೆಂಟ್ ದುರಂತ – 2025ರಲ್ಲೂ ಜೈಲು ಸೇರಿದ್ದ ಹೋಟೆಲ್ ಮಾಲೀಕ
