ದಾವಣಗೆರೆ: ಕಾಂಗ್ರೆಸ್ (Congress) ಮುಖಂಡ ಜಮೀರ್ ಅಹಮದ್ (Zameer Ahmed) ವಿರುದ್ಧ ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ (Davanagere South byelection) ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅದಕ್ಕೆ ಪೂರಕವಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಕ್ರೋಚ್ ಪಾರ್ಟಿ ಹೆಸರಿನ ಎಕ್ಸ್‌ನಲ್ಲಿ ಆಡಿಯೋ ರಿಲೀಸ್ ಆಗಿದೆ. ದಾವಣಗೆರೆಯ ಕಾಂಗ್ರೆಸ್ ಮುಖಂಡ ಸಿರಾಜ್ ಜೊತೆ ಜಮೀರ್ ಅಹಮ್ಮದ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಇದಾಗಿದೆ. ಆಡಿಯೋದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಪಕ್ಷೇತರ ಅಭ್ಯರ್ಥಿಗೆ ಬೆಂಬಲಿಸಿ ಮಾತನಾಡಲಾಗಿದೆ. ಮುಸ್ಲಿಂ ವೋಟಿಂಗ್ ಕಡಿಮೆ ಇದೆ ಹೊರಗಡೆ ಬಂದ್ರೆ ಅವರನ್ನ ನಂಬೋಕಾಗಲ್ಲ ಕಾಂಗ್ರೆಸ್‌ಗೆ ವೋಟ್ ಹಾಕುತ್ತಾರೆ. ಒತ್ತಾಯ ಮಾಡಿ ಮನೆಯಿಂದ ಕರ್ಕೊಂಡು ಬರಬೇಡಿ. ಪಕ್ಷೇತರರಿಗೆ ಎಸ್‌ಡಿಪಿಐಗೆ ವೋಟ್ ಹಾಕಲಿ ಎಂದು ಜಮೀರ್ ಅಹಮ್ಮದ್ ಹೇಳಿದ್ದಾರೆ. ಇದನ್ನೂ ಓದಿ: 7 ಮುಸ್ಲಿಂ ನಾಯಕರ ಹೆಸರು ಕೊಟ್ಟಿದ್ದೆ, ದಾವಣಗೆರೆ ಟಿಕೆಟ್ ಕೊಡದಿದ್ದಕ್ಕೆ ಅಸಮಾಧಾನ ಇದ್ದಿದ್ದು ನಿಜ: ಜಮೀರ್
ಸಾಮಾಜಿಕ ಜಾಲತಾಣದಲ್ಲಿ ಈ ಆಡಿಯೋ ಹರಿದಾಡುತ್ತಿದ್ದರೂ ಜಮೀರ್ ಕಡೆಯಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ. ಸಚಿವ ಸ್ಥಾನಕ್ಕೆ ಜಮೀರ್ ಲಾಬಿ ಮಾಡುವಾಗಲೇ ಈ ಆಡಿಯೋ ಹೊರಬಂದಿದ್ದು ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿದೆ.
ಆಡಿಯೋದಲ್ಲಿ ಏನಿದೆ?
ಜಮೀರ್ (ಎನ್ನಲಾದ ಧ್ವನಿ): ಎಲೆಕ್ಷನ್ ದಿನ ಮಧ್ಯಾಹ್ನ 1 ಗಂಟೆವರೆಗೂ ಮೊಬೈಲ್ ಸ್ವಿಚ್ ಆಫ್ ಮಾಡ್ಕೊಂಡ್ರೆ ನಾನ್ ಏನ್ ಮಾಡ್ಲಿ?
ಮೊಹಮ್ಮದ್ ಸಿರಾಜ್ (ಎನ್ನಲಾದ ಧ್ವನಿ): ನಿರ್ದೇಶಕ, ಕೆಎಂಡಿಸಿ: ಇಲ್ಲ ಸರ್, ನಾನು ಬೆಳಗ್ಗೆ 7 ಗಂಟೆಯಿಂದ ಕೆಲಸ ಮಾಡ್ತಿದ್ದೀನಿ.
ಜಮೀರ್: ನಾನು ನಿನಗೆ ಬೆಳಗ್ಗೆ 6 ಗಂಟೆಯಿಂದ ಕಾಲ್ ಮಾಡ್ತಿದ್ದೀನಿ.
ಮೊಹಮ್ಮದ್ ಸಿರಾಜ್: ನನ್ನ ಮೊಬೈಲ್ ಆಫ್ ಇತ್ತು, ನನ್ನ ಮಗನ ಮೊಬೈಲ್ ಬಳಸ್ತಿದ್ದೆ, ನಾನು ವಾರ್ಡ್‌ಲ್ಲೇ ಇದ್ದೆ.
ಜಮೀರ್: ನೀನು ಬೆಳಗ್ಗೆಯಿಂದ ಕೆಲಸ ಮಾಡ್ತಿರಬೇಕಿತ್ತಲ್ಲೋ, ಏನಯ್ಯಾ?
ಮೊಹಮ್ಮದ್ ಸಿರಾಜ್: ನನ್ನ ಮಗ ಬೆಳಗ್ಗಿನಿಂದ ನನ್ನ ಜೊತೆಯಲ್ಲೇ ಇದ್ದಾನೆ. ಹಫೀಜ್ ಸಾಬ್ ಕೂಡ ನನ್ನ ಜೊತೆಯಲ್ಲೇ ಇದ್ದಾರೆ.
ಜಮೀರ್: ಇದು ನನ್ನ ಮರ್ಯಾದೆ ಪ್ರಶ್ನೆ. ನನಗೆ ರಾತ್ರಿಯೂ ಸರಿಯಾಗಿ ನಿದ್ದೆ ಬಂದಿಲ್ಲ.
ಮೊಹಮ್ಮದ್ ಸಿರಾಜ್: ನಾನು ಕೂಡ ಬೆಳಗ್ಗೆ 4ಕ್ಕೆ ಮಲಗಿದ್ದು… ನಾನು ವಾರ್ಡ್ 14ರಲ್ಲೇ ಇದ್ದೆ. ಆಮೇಲೆ ವಾರ್ಡ್ ನಂ 12ಕ್ಕೆ ಹೋದೆ. ವಾರ್ಡ್ ನಂ 12ರಲ್ಲಿ ರಿಯಾಜ್ ಕಾಲ್ ಮಾಡಿದ್ದ. ಅಲ್ಲಿ ಏನೋ ಗಲಾಟೆಯಾಗಿದೆ ಅನ್ಸುತ್ತೆ. ಅಲ್ಲಿಂದ ನಾನು ಮನ್ಸೂರ್ ವಾರ್ಡ್‌ಗೆ ಹೋದೆ. ಮನ್ಸೂರ್ ವಾರ್ಡ್‌ನಿಂದ ವಾರ್ಡ್ 14ಕ್ಕೆ ವಾಪಸ್ ಬಂದೆ.
ಜಮೀರ್: ಒಟ್ಟಾರೆ ವೋಟಿಂಗ್ ಹೇಗಿದೆ.
ಮೊಹಮ್ಮದ್ ಸಿರಾಜ್: ಬರೀ ಕುಕ್ಕರ್… ನಾವು ಕ್ಕುಕ್ಕರಿಗೆ ಮಾತ್ರ ವೋಟ್ ಕೇಳಿದ್ದೀವಿ.
ಜಮೀರ್ : ಆದ್ರೆ ವೋಟಿಂಗ್ ಪರ್ಸೆಂಟೇಜ್ ಕಮ್ಮಿ ಇದೆ. ಇದನ್ನೂ ಓದಿ: ದಾವಣಗೆರೆ ದಕ್ಷಿಣ ದಂಗಲ್ ಎಫೆಕ್ಟ್ – ಸ್ವಪಕ್ಷದಲ್ಲೇ ಸಚಿವ ಜಮೀರ್‌ಗೆ ಟ್ರಬಲ್, ತಿರುಗಿಬಿದ್ದ ಮತ್ತೊಂದು ಮುಸ್ಲಿಂ ಬಣ
