ನವದೆಹಲಿ: ವಿಧಿ ವಿಜ್ಞಾನ ತರಗತಿಯಲ್ಲಿ ಹಿಂದೂ ಪುರಾಣಗಳಲ್ಲಿನ ಅತ್ಯಾಚಾರವನ್ನು ಉದಾಹರಣೆಯಾಗಿ ಉಲ್ಲೇಖಿಸಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಆರೋಪದಡಿ ಪ್ರಾಧ್ಯಾಪಕನನ್ನು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಅಮಾನತುಗೊಳಿಸಿದೆ.
ಎಎಮ್‌ಯುನ ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಜಿತೇಂದ್ರ ಕುಮಾರ್ ಅವರು ವೈದ್ಯಕೀಯ ನ್ಯಾಯಶಾಸ್ತ್ರದ ಕುರಿತು ತರಗತಿ ನಡೆಸುವಾಗ ಪುರಾಣದಲ್ಲಿನ ʻಅತ್ಯಾಚಾರʼ ಉಲ್ಲೇಖಗಳನ್ನು ಮಾಡಿದ್ದಾರೆ. ಇದನ್ನೂ ಓದಿ: ತಿಲಕವಿಟ್ಟು ಶಾಲೆಗೆ ತೆರಳಿದ ವಿದ್ಯಾರ್ಥಿನಿಗೆ ಥಳಿಸಿದ ಮುಸ್ಲಿಂ ಶಿಕ್ಷಕ – ಕ್ರಮಕ್ಕೆ ಮುಂದಾದ ಡೆಪ್ಯೂಟಿ ಕಮಿಷನರ್
Advertisement
#???????????? ???????????????????????? ???????? ???????????????????????????????? ???????????????????? ???????????????????? ????????????????????????????????????????
????https://t.co/6u6vdv9iOo@PIBHRD @dpradhanbjp @ProfTariqManso1 @PMOIndia @rashtrapatibhvn @EduMinOfIndia @ugc_india @AwasthiAwanishK @Vineet_K26 @ANI @AMUJournal @Drsubhassarkar @Annapurna4BJP pic.twitter.com/xsEf4mfYmb
— Aligarh Muslim University (@AMUofficialPRO) April 6, 2022
Advertisement
ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಂಬಂಧ ವಿಚಾರಣೆಗಾಗಿ ವಿಶ್ವವಿದ್ಯಾನಿಲಯ ಇಬ್ಬರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದೆ. ಈ ಸಂಬಂಧ ನೋಟಿಸ್ ನೀಡಿದ್ದಲ್ಲದೇ ಈಗಾಗಲೇ ಪ್ರಾಧ್ಯಾಪಕರನ್ನು ಅಮಾನತುಗೊಳಿಸಲಾಗಿದೆ.
Advertisement
ನೋಟಿಸ್ ಬಂದ ಬಳಿಕ ಪ್ರಾಧ್ಯಾಪಕ ಕ್ಷಮೆಯಾಚಿಸಿದ್ದಾರೆ. ಯಾವುದೇ ನಿರ್ದಿಷ್ಟ ಧರ್ಮದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ನನ್ನ ಉದ್ದೇಶವಲ್ಲ. ಅತ್ಯಾಚಾರವು ನಮ್ಮ ಸಮಾಜದ ಒಂದು ಭಾಗವಾಗಿದೆ ಎಂಬುದನ್ನು ಹೇಳುವುದಕ್ಕಾಗಿ ಈ ವಿಷಯ ತಿಳಿಸಲಾಯಿತು ಎಂದು ಪ್ರಾಧ್ಯಾಪಕ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ವೀರ್ಯ ದಾನ ಮಾಡಿ ಹಣ ಸಂಪಾದಿಸುತ್ತಿದ್ದ ಪತಿ- ವಿಚ್ಛೇದನಕ್ಕೆ ಮುಂದಾದ ಪತ್ನಿ
Advertisement
ಉಪನ್ಯಾಸದ ವಿಡಿಯೋ ತುಣುಕನ್ನು ಯಾರೋ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ವಿವಾದ ಭುಗಿಲೆದ್ದಿದೆ.
ನೀವು ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರ್ವಕವಾಗಿ ತರಗತಿಯಲ್ಲಿ ಅತ್ಯಾಚಾರ ಎಂಬ ಶೀರ್ಷಿಕೆಯಡಿ ವಿಷಯ ಮಂಡಿಸಿದ್ದೀರಿ. ಇದರಿಂದಾಗಿ ನಿರ್ದಿಷ್ಟ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಎಎಮ್‌ಯು ಕುಲಸಚಿವ ಅಬ್ದುಲ್ ಹಮೀದ್ ಎಚ್ಚರಿಸಿದ್ದಾರೆ.